
ಸಂಜೆವಾಣಿ ವಾರ್ತೆ
ಹೊಸಪೇಟೆ (ವಿಜಯನಗರ) ಫೆ.16: ಪ್ರಧಾನ ವೇದಿಕೆ ಎಂ.ಪಿ.ಪ್ರಕಾಶ ವೇದಿಕೆ ಸೇರಿದಂತೆ ಆರು ವೇದಿಕೆಗಳಲ್ಲಿ ನಡೆದ ಹಂಪಿ ಉತ್ಸವ 2026 ಪ್ರಧಾನ ವೇದಿಕೆ ಬಿಟ್ಟು ಬಹುತೇಕ ಎಲ್ಲಾ ವೇದಿಕೆಗಳು ಕಲಾವಿದರಿಗೆ ಮಾತ್ರ ಸೀಮಿತವಾಗಿದ್ದವು.
ಹಂಪಿ ಉತ್ಸವ ಎಲ್ಲಾ ಹಂತದ ಕಲಾವಿದರಿಗೂ ಅವಕಾಶ ನೀಡಿದೆ, ಪ್ರಧಾನ ವೇದಿಕೆ ಎಂ.ಪಿ.ಪ್ರಕಾಶ ವೇದಿಕೆ, ಎದುರುಬಸವಣ್ಣ ಮಂಟಪದ ಕೃಷ್ಣದೇವರಾಯ ವೇದಿಕೆ, ವಿರೂಪಾಕ್ಷೇಶ್ವರ ದೇವಾಲಯದ ವಿರೂಪಾಕ್ಷ ವೇದಿಕೆ, ಸಾಸಿವೇ ಕಾಳು ಗಣಪ ವೇದಿಕೆ, ಮಹಾನವಮಿ ದಿಬ್ಬದ ಬಳಿಯ ಶ್ರೀ ವಿದ್ಯಾರಣ್ಯವೇದಿಕೆ, ಹಾಗೂ ವಿಜಯನಗರದ ವೈಭವ ಸಾರುವ ಧ್ವನಿ ಮತ್ತು ಬೆಳಕು ಕಾರ್ಯಕ್ರಮಕ್ಕೆ ಸಿದ್ಧಪಡಿಸಿದ ಆನೆ ಲಾಯದ ಬಳಿಯ ವೇದಿಕೆ ಸೇರಿದಂತೆ ಕಾರ್ಯಕ್ರಮ ವೇದಿಕೆವಾರು ಹಂಚಿಕೆಯಾಗಿದ್ದರೂ ಸಹ ಪ್ರಮುಖ ಕಲಾವಿದರು ಪ್ರಧಾನ ವೇದಿಕೆಯಾದ ಎಂ.ಪಿ.ಪ್ರಕಾಶ ವೇದಿಕೆಗೆ ಸೀಮಿತವಾಗಿದ್ದರಿಂದ ಉಳಿದ ವೇದಿಕೆಗಳು ಎಲ್ಲಾ ಕಲಾವಿದರು ಸಮಾಧಾನ ಪಡಿಸಲು ಕಾರ್ಯಕ್ರಮ ನೀಡಿದ್ದಕ್ಕೆ ಸೀಮಿತವಾದ ಕಾರಣ ಎಲ್ಲಾ ಹಂತದ ಕಾರ್ಯಕ್ರಮಕ್ಕೆ ಅವಕಾಶ ನೀಡಿದ ಕಲಾವಿದರು ನೀಡಿದ ಸಮಯಕ್ಕೆ ಬಂದು ಅವಕಾಶ ಉಪಯೋಗಿಸಿಕೊಳ್ಳಲು ವೇದಿಕೆಯಾಗಿ ರೂಪುಗೊಂಡಿದ್ದವೇ ಹೊರತು ಕಲಾವಿದರ ಕಲಾರಸದೌತಣ ಪಡೆಯಲು ಕಲಾರಸಿಕರಿಲ್ಲದೆ ಸೊರಗಿದ್ದವು.
ಖ್ಯಾತ ಕಲಾವಿಧರಾದ ಡಾ.ಶಿವರಾಜ್‍ಕುಮಾರ, ಅಶ್ವಿನಿ ಪುನೀತ್‍ರಾಜಕುಮಾರ, ವಿಜಯಪ್ರಕಾಶ, ನಿರೂಪಕಿ ಅನುಶ್ರೀ, ಅರ್ಜನ್ಯ ಜನ್ಯಾ, ಹರಿಹರನ್, ಮಿಮಿಕ್ರಿ ಗೋಪಿ, ಸಂಗೀತಕಟ್ಟಿ, ಬಿಗ್‍ಬಾಸ ಖ್ಯಾತಿಯ ಗಿಲ್ಲ ನಟರಾಜ್ ಮತ್ತು ಕಾವ್ಯಾ ಜೋಡಿ,ಸಪ್ತಮಿಗೌಡ, ಆಸಿಕಾ ರಂಗನಾಥ, ರಘದೀಕ್ಷಿತ್, ಮಂಗ್ಲಿ ಮಣಿಕಾಂತ ಖಾದ್ರಿ ಸೇರಿದಂತೆ ಎಲ್ಲಾ ಕಲಾವಿದರು ಪ್ರಧಾನ ವೇದಿಕೆಗೆ ಸೀಮಿತವಾಗಿರುವುದರಿಂದ ಉಳಿದ ವೇದಿಕೆಗಳು ಜನರಿಲ್ಲದೆ ಸೊರಗುವಂತಾಗಿತು.
ಕಲೆ, ಕಲಾವಿದರು, ಸಹ ಎಲ್ಲಾ ವೇದಿಕೆಗೆ ಹಂಚಿಕೆಯಾಗುವ ಮೂಲಕ ಕಲಾರಸಿಕರು ಹಂಚಿಕೆಯಾಗಿ, ಟ್ರಾಫಿಕ್ ಜಾಮ್ ಸೇರಿದಂತೆ ಪ್ರೇಕ್ಷಕರು ಎಲ್ಲಾ ವೇದಿಕೆಯತ್ತ ಗಮನ ಹರಿಸುವಂತೆ ಮಾಡಿ ಉತ್ಸವದಲ್ಲಿ ಉಂಟಾಗುವ ಗೊಂದಲಗಳ ನಿವಾರಣೆಗೂ ಸರ್ಕಾರ ಹಾಗೂ ಜಿಲ್ಲಾಡಳಿತ ಕ್ರಮವಹಿಸಬೇಕು ಗೊಂದಲಗಳಾಗದಂತೆ ಮಾಡಬೇಕು ಎನ್ನುವುದು ಕಲಾವಿದರು ಹಾಗೂ ಕಲಾರಸಿಕರ ಅಭಿಪ್ರಾಯ.
ಪ್ರಧಾನ ವೇದಿಕೆ ಹಾಗೂ ಧ್ವನಿ ಮತ್ತು ಬೆಳಕು ವೇದಿಕೆಗಳಲ್ಲಿ ನಡೆಯುವಂತೆ ಕಾರ್ಯಕ್ರಮ ಹಾಗೂ ಗಣ್ಯರು ಸಹ ಎಲ್ಲಾ ವೇದಿಕೆಗೂ ಹಂಚಿಕೆಯಾಗಬೇಕು ಎಲ್ಲಾ ವೇದಿಕೆಗಳು ತನ್ನದೆ ಆದ ಮಹತ್ವವನ್ನು ಪಡೆಯಬೇಕು ಎನ್ನುವುದು ಆಮೂಲಕ ವೇದಿಕೆಯಲ್ಲಿ ಕಲಾಪ್ರತಿಭೆ ಮೇರಿಯುವ ಕಲಾವಿದರ ರಸದೌತಣ ಸವಿಯುವಂತಾಗಬೇಕು ಎನ್ನುವುದು ಎಲ್ಲರ ಅಭಿಪ್ರಾಯ.
ಹೇಳಿಕೊಳ್ಳುವಷ್ಟು ಸೇರದ ಜನತ್ಸೋಮ: ಸರ್ಕಾರ ಹಾಗೂ ಜಿಲ್ಲಾಡಳಿತ ನಿರೀಕ್ಷಿಸಿದಂತೆ ಜನತ್ಸೋಮ ಸೇರದಿರುವುದಕ್ಕೆ ಅನೇಕ ಕಾರಣಗಳು ಉಂಟು, ಶಾಲಾ ಮಕ್ಕಳಿಗೆ ಪರೀಕ್ಷೆಗಳು, ಮಹಾಶಿವರಾತ್ರಿ ಸೇರಿದಂತೆ ಅನೇಕ ಕಾರಣಗಳಿಂದ ಮೊದಲ ದಿನ ಅಂದಾಜು 2ಲಕ್ಷ, ಎರಡನೇಯ ದಿನ 5 ಲಕ್ಷ ಹಾಗೂ ಕೊನೆಯ ದಿನ 1ರಿಂದ 2 ಲಕ್ಷ ಮಾತ್ರ ಎನ್ನಲಾಗಿದೆ.
ಬಾರದ ಸಚಿವರು: ಜಿಲ್ಲಾ ಉಸ್ತುವಾರಿ ಬಿ.ಝಡ್ ಜಮೀರ್‍ಅಹಮ್ಮದ್ ಸೇರಿದಂತೆ ಯಾವುದೆ ಸಚಿವರು ಬರದ ಮೊದ¯ ಬಾರಿ ಸಮಾರೋಪ ಸಪ್ಪೇಯಾಗಿತು. ಪ್ರದಾನ ವೇದಿಕೆಯಲ್ಲೂ ಕೊನೆಯ ದಿನ ಬಹುತೇಕ ಅರ್ಧದಷ್ಟು ಆಸನಗಳು ಖಾಲಿಯಾಗಿದ್ದದು ಒಂದಡೆಯಾದರೆ ಮತ್ತೊಂದಡೆ ಅಗತ್ಯಕ್ಕೂ ಹೆಚ್ಚು ಪಾಸ್‍ಗಳು ಇರುವುದರಿಂದ ಪಾಸ್ ಇದ್ದು ವಿವಿಐಪಿ ಪಾಸ್‍ಗಳನ್ನು ಹಿಡಿದವರು ಸ್ಥಳವಿಲ್ಲದೆ ವಾಪಸ್ ನಡೆದಿರುವುದು ಕಂಡುಬಂತು.
ಒಟ್ಟಾರೆ ಮುಂದಿನ ದಿನಗಳಲ್ಲಾದರೂ ಕಲಾವಿದರು ಗಣ್ಯರು ಕಲಾರಸಿಕರು ಹಂಚಿಕೆಯಾಗುವಂತೆ ಕಾರ್ಯಕ್ರಮ ರೂಪುಗೊಳ್ಳಲಿ ಎಂಬುದು ಸಾರ್ವಜನಿಕರ ಅಭಿಪ್ರಾಯ.



























