
ಸಂಜೆವಾಣಿ ವಾರ್ತೆ
ಬಳ್ಳಾರಿ, ಫೆ.15.. ಹಂಪಿ ಉತ್ಸವದ ವಿದ್ಯಾರಣ್ಯ ವೇದಿಕೆಯಲ್ಲಿ ಹಮ್ಮಿಕೊಂಡ ಶ್ರೀ ಕೃಷ್ಣನ ಶಯನ ಗೃಹ ನಾಟಕ ಪ್ರೇಕ್ಷರನ್ನು ರಂಜಿಸಿತು.ನಗರದ ಡಾ.ಗಾದಿಲಿಂಗನ ಗೌಡ ತಂಡ ಮನೋಜ್ಞವಾಗಿ ಪ್ರದರ್ಶನ ಮಾಡಿದರು. ಗಾದಿಲಿಂಗನ ಗೌಡ ಕೃಷ್ಣನಾಗಿ, ಟಿ.ನಾಗಭೂಷಣ್ ಅರ್ಜುನ, ವಿ.ರಾಮಚಂದ್ರ ದುರ್ಯೋಧನ, ನಾಗರಾಜ್ ಸಾತ್ಯಕಿ ಪಾತ್ರದಲ್ಲಿ ಕಾಣಿಸಿಕೊಂಡರು. ವೀರಪುರದ ರಂಗಾರೆಡ್ಡಿ ಸಂಗೀತ ವಾದ್ಯದ ಸಾಥ್ ನೀಡಿದರು.ಕಲಾವಿದರಿಗೆ ಅಧಿಕಾರಿಗಳು ನೆನಪಿನ ಕಾಣಿಕೆ ನೀಡಿ ಗೌರವಿಸಿದರು. ಕಾರ್ಯಕ್ರಮದಲ್ಲಿ ಬಿ. ಎಂ. ಪಾಟೀಲ್, ಶರವಣ, ಸಹನ ಮುಂತಾದವರು ಇದ್ದರು.


























