
ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ : ಫೆ.16 ಹಂಪಿ ಉತ್ಸವದ ಸಾಸಿವೆಕಾಳು ಗಣಪ ವೇದಿಕೆಯಲ್ಲಿ ನಡೆದ ಭರತನಾಟ್ಯ ಪ್ರದರ್ಶನ ಹಗರಿಬೊಮ್ಮನಹಳ್ಳಿ ಹೇಮಲತಾ ಮತ್ತು ತಂಡ ದಿಂದ ಭರತನಾಟ್ಯ ಪ್ರದರ್ಶನ ಪ್ರೇಕ್ಷಕರ ಗಮನ ಸೆಳೆಯಿತು.
ಈ ನೃತ್ಯದಲ್ಲಿ ಖತಕ್, ಸೆಮಿ ಕ್ಲಾಸಿಕಲ್ ಡ್ಯಾನ್ಸ್, ಕೃಷ್ಣ ರಾಧೆಯರ ನೃತ್ಯ ಹಾಗೂ ಮೋಹಿನಿ ನಾಟ್ಯಂ ಪ್ರೇಕ್ಷಕರ ಮನಸೂರೆಗೊಂಡಿತು .
ಸ್ವಪ್ನ ಬಾವಿಕಟ್ಟಿ, ವಿನುತಾ ಬಿ, ನಿಕಿತಾ, ಪ್ರತಿಕ್ಷ, ಸಮನ್ವಿತಾ, ಧನ್ಯ ಸಾಕ್ಷಿ, ಜಾನವಿ, ತನ್ಮಯ, ಶಾಸ್ಮೀನ್, ಮತ್ತಿತರರು ಪಾಲ್ಗೊಂಡಿದ್ದರು.



























