Home Uncategorized ಹಂದ್ಯಾಳ ಗ್ರಾಮದಲ್ಲಿ ಡಾ.ಪಂ.ಶ್ರೀ ಪುಟ್ಟರಾಜ ಗವಾಯಿಗಳ ಜಯಂತಿ ಆಚರಣೆ.

ಹಂದ್ಯಾಳ ಗ್ರಾಮದಲ್ಲಿ ಡಾ.ಪಂ.ಶ್ರೀ ಪುಟ್ಟರಾಜ ಗವಾಯಿಗಳ ಜಯಂತಿ ಆಚರಣೆ.

ಸಂಜೆವಾಣಿ ವಾರ್ತೆ

ಕುರುಗೋಡು: ಮಾ.4. ತಾಲೂಕಿನ ಹಂದ್ಯಾಳ ಗ್ರಾಮದಲ್ಲಿ ಮಾ.3ರಂದು ಲಿಂಗೈಕ ಶ್ರೀ ಡಾ.ಪುಟ್ಟರಾಜ ಗವಾಯಿಗಳ ಜಯಂತಿ ಆಚರಿಸಲಾಯಿತು. ಭಾವಚಿತ್ರಕ್ಕೆ ಪೂಜೆ ಪುಷ್ಪಾರ್ಚನೆ ನೆರವೇರಿಸಿದ ನಂತರ ಪುಟ್ಟರಾಜ ಗವಾಯಿಗಳ ಸೇವಾ ಟ್ರಸ್ಟ್ ಅಧ್ಯಕ್ಷ ತಿಮ್ಮಾರೆಡ್ಡಿ ಇವರು ಮಾತನಾಡಿ, ಅಂಧ ಹಾಗೂ ಅನಾಥರ ಬಾಳಿನ ನಂದಾದೀಪವಾಗಿದ್ದವರು ಪಂಡಿತ ಪುಟ್ಟರಾಜ ಗವಾಯಿಗಳು. ಸಾಧನೆಗೆ ಅಂದತ್ವ ಅಡ್ಡಿಯಲ್ಲ ಎಂಬುದನ್ನು ತೋರಿಸಿಕೊಟ್ಟ ಅವರು ಪ್ರತಿಯೊಬ್ಬರಿಗೂ ಮಾದರಿಯಾಗಿದ್ದಾರೆ. ಗವಾಯಿಗಳವರು ಶ್ರೇಷ್ಠ ಸಂಗೀತಾ ಸಾಧಕರು ಮತ್ತು ಪಂಡಿತರು. ಅನೇಕ ಪುರಾಣ, ಸಾಹಿತ್ಯ ಕೃತಿಗಳನ್ನು ಬರೆದಿದ್ದಾರೆ. ಅವರು ಕನ್ನಡ, ಸಂಸ್ಕೃತ, ಹಿಂದಿ ಬಲ್ಲವರಾಗಿದ್ದರು. ಅಂತೆಯೇ ಅವರನ್ನು ತ್ರಿಭಾಷಾ ಕವಿ ಎಂದು ಕರೆಯುತ್ತಾರೆ. ಚಂಪೂ ಕೃತಿಗಳನ್ನು ರಚಿಸಿದ್ದಾರೆ. ಪುಟ್ಟರಾಜರು ಉಭಯಗಾನ ವಿಶಾರದರು. ಅವರು ಕಂಠ, ಸಂಗೀತ ಹಾಗೂ ವಾದ್ಯ ಸಂಗೀತದಲ್ಲಿ ಪರಿಣತಿಯನ್ನು ಪಡೆದಿದ್ದರಿಂದ ಅವರನ್ನು ಉಭಯಗಾನ ವಿಶಾರದರು ಎಂದು ಕರೆಯಲಾಗುತ್ತಿದೆ. ಸ್ವಂತ ವಿದ್ವತ್ತನ್ನು ಹೊಂದಿದ ಇವರು ಸಾವಿರಾರು ಜನ ಅಂಧ ಅನಾಥರ ಬಾಳು ಬೆಳಗಿದರು. ನಾಟಕಗಳ ಮೂಲಕ ಜನರಲ್ಲಿ ಧಾರ್ಮಿಕ ಆಧ್ಯಾತ್ಮಿಕ, ಜಾಗೃತಿ ಮೂಡಿಸಿದರು. ಲೋಕದಂತೆ ಬಾರರು ಲೋಕದಂತೆ ಇರರು, ಪುಟ್ಟರಾಜರಿಗೆ ಪುಟ್ಟರಾಜರೇ ಹೋಲಿಕೆಯಾಗಿದ್ದಾರೆ. ಅವರ ಈ ವೈಶಿಷ್ಟ್ಯಪೂರ್ಣ ಸಾಧನೆಗೆ ಸರ್ಕಾರದಿಂದ, ಪ್ರತಿಷ್ಠಿತ ಸಂಸ್ಥೆಗಳಿಂದ, ಸಂಘಗಳಿಂದ ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ ಎಂದು ತಿಳಿಸಿದರು. ಶ್ರೀ ಪುಟ್ಟರಾಜ ಗವಾಯಿಗಳ ಸೇವಾ ಟ್ರಸ್ಟ್ ನ  ಸದಸ್ಯರಾದ ಶ್ರೀನಿವಾಸಚಾರಿ, ಅಶೋಕ ಆಚಾರಿ, ಆಂಜನೇಯ, ರಾಜಶೇಖರ, ರವಿ,  ಸಿದ್ದಯ್ಯಸ್ವಾಮಿ, ಮುಖಂಡರಾದ ರಾಜಣ್ಣ, ದ್ಯಾವಣ್ಣ, ಚಿದಾನಂದಪ್ಪ, ಬಸವರಾಜ, ಹೊನ್ನೂರ್ ಸ್ವಾಮಿ, ಮಲ್ಲೇಶಪ್ಪ ಗದಗಿನ ಮಠದ ಹಳೆಯ ವಿದ್ಯಾರ್ಥಿಗಳು ಗ್ರಾಮಸ್ಥರು ಇದ್ದರು.