ಸ್ವಾತಂತ್ರ್ಯೋತ್ಸವಕ್ಕೆ ರಾಷ್ಟ್ರ ಧ್ವಜಗಳ ಮಾರಾಟ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಆ.13:
ನಾಡಿದ್ದು ಆಚರಿಸಲಿರುವ ಸ್ವಾತಂತ್ರ್ಯೋತ್ಸವ ಸಂಭ್ರಮಕ್ಕೆ ಪೂರಕವಾಗಿ ನಗರದ ಹಲವಡೆ ಆಂದ್ರಪ್ರದೇಶದಿಂದ ವಲಸೆ ಬಂದಿರುವ ಜನರು ರಾಷ್ಟ್ರ ಧ್ವಜಗಳ ಮಾರಾಟ ನಡೆಸಿದ್ದಾರೆ.
ನಗರದ ಹೆಚ್.ಆರ್.ಜಿ.ವೃತ್ತದಲ್ಲಿ ಅನಂತಪುರಂ ನಿಂದ ಬಂದಿರುವ ಜನತೆ ವಿವಿಧ ಅಳತೆಯ ಧ್ವಜಗಳನ್ನು ರೂ‌50 ರಿಂದ 250 ರೂ ವರೆಗೆ ಮಾರಾಟ ಮಾಡುತ್ತಿದ್ದಾರೆ. ಇವು ಪಾಲಿಸ್ಟರ್ ಬಟ್ಟೆಯ ಧ್ವಜಗಳಾಗಿವೆ.
ನಿಗಧಿತ ಅಳತೆ ಮತ್ತು ಖಾದಿಯಲ್ಲಿ ತಯಾರಿಸಿದ ಧ್ವಜಗಳು ಖಾದಿ ಬಂಡಾರ ಶಾಪ್ ನಲ್ಲಿ ದೊರೆಯುತ್ರಿವೆ. ಇವು ಒಂದಿಷ್ಟು ತುಟ್ಟಿಯಾಗಿವೆ.