ಸ್ವತಂತ್ರ ಉದ್ಯಮಿಗಳಾಗಲು ಸ್ಪರ್ಧಾತ್ಮಕ ಕೌಶಲ್ಯ ಅಗತ್ಯ


ಸಂಜೆವಾಣಿ ವಾರ್ತೆ
ಬಳ್ಳಾರಿ, ಡಿ.02:
ನಗರದ  ವೀ. ವಿ. ಸಂಘದ ಅಲ್ಲಂ ಕರಿಬಸಪ್ಪ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೇಂಟ್, ಸಂಸ್ಥೆಯಲ್ಲಿ ಇಂದು ಕೆಸಿಟಿಯು, ಬೆಂಗಳೂರು, ಜಿಲ್ಲಾ ಕೈಗಾರಿಕಾ ಕೇಂದ್ರ ಹಾಗೂ  ಅಲ್ಲಂ ಕರಿಬಸಪ್ಪ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೇಂಟ್, ಇವರ ಸಂಯುಕ್ತಾಶ್ರಯದಲ್ಲಿ ಆರ್ ಎ ಎಂ ಪಿ ಯೋಜನೆಯಡಿಯಲ್ಲಿ ಬಿಡಿಎಸ್‍ಪಿ ಕುರಿತು ಜಾಗೃತಿ ಮೂಡಿಸುವ ಒಂದು ದಿನದ ಕಾರ್ಯಾಗಾರವನ್ನು ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಟಿ. ನರೇಂದ್ರಬಾಬು ಹಾಗೂ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಸೋಮಶೇಖರ ಉದ್ಘಾಟಿಸಿದರು.
ಜಿಲ್ಲೆಯ ಯುವ ಉದ್ಯಮಿದಾರರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿ ಸಂಪನ್ಮೂಲ ವ್ಯಕ್ತಿಗಳಿಂದ ಕೈಗಾರಿಕೆಗಳನ್ನು ಸ್ಥಾಪಿಸುವ ಕುರಿತು ಮಾಹಿತಿಯನ್ನು ಅರಿತರು.  ಸ್ವತಂತ್ರ ಉದ್ಯಮಿಗಳಾಗಲು ವಿವಿಧ ಸ್ಪರ್ಧಾತ್ಮಕ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು ಈ ನಿಟ್ಟಿನಲ್ಲಿ ನಿರಂತರ ಪ್ರಯತ್ನ ಇರಬೇಕು ಎಂದು ನರೇಂದ್ರಬಾಬು ಅವರು ಕರೆಕೊಟ್ಟರು. ಉದ್ಯಮಿಗಳು ಸೇವಾ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು. ಸರ್ಕಾರವು ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು, ಅವುಗಳನ್ನು ಯುವ ಉದ್ಯಮಿಗಳು ಪ್ರಯೋಜನೆ ಪಡೆದುಕೊಳ್ಳಬೇಕೆಂದು ಹಾಗೂ ಗ್ರಾಮಾಂತರ ಮಟ್ಟದಲ್ಲಿ ವಿವಿಧ ಗೃಹ ಕೈಗಾರಿಕೆಗಳು ಮತ್ತು ಸಣ್ಣ ಮದ್ಯಮದ ಕೈಗಾರಿಕೆಗಳನ್ನು ಸ್ಥಾಪಿಸಿಕೊಂಡು ಸ್ವಾವಲಂಬಿಗಳಾಗಿ ಆರ್ಥಿಕ ಸ್ಥಿತಿಯನ್ನು ಅಭಿವೃದ್ದಿ ಪಡೆಸಿಕೊಳ್ಳಬೇಕೆಂದು ತಿಳಿಸಿದರು.
ಸಂಸ್ಥೆಯ ನಿರ್ದೇಶಕ ಡಾ. ಕೆ. ಟಿ. ಗೋಪಿ ಮಾತನಾಡಿ, ವ್ಯವಹಾರ ಆಭಿವೃದ್ದಿಗೆ ಸಕಾರಾತ್ಮಕ ಆಲೋಚನೆಗಳಿಂದ ಜೀವನದಲ್ಲಿ ಯಶಸ್ಸನ್ನು ಹೊಂದಬಹುದು. ಉತ್ಪಾದನಾ ವಸ್ತುಗಳ ಗುಣಾತ್ಮಕವನ್ನು ಹೆಚ್ಚಿಸಿ ಒಳ್ಳೆಯ ಬೆಲೆಯನ್ನು ಪಡೆದುಕೊಳ್ಳುವಲ್ಲಿ ಅವಶ್ಯಕ ಇರುವ ವಿವಿಧ ತಂತ್ರಾಂಶಗಳನ್ನು ಹೊಂದಬೇಕು. ಎಲ್ಲಾರು ಉದ್ಯೋಗಕ್ಕೆ ಅಲೋಚಿಸದೆ ಉದ್ಯೋಗ ನೀಡುವ ಉದ್ಯಮಿಗಳಾಗಬೇಕು ದೇಶಕ್ಕಾಗಿ ಪ್ರತಿಯೊಬ್ಬರು ತನ್ನದೇ ಆದ ಕೊಡುಗೆಯನ್ನು ನೀಡಬೇಕೆಂದರು.
ರಾಷ್ಟೀಯ ತರಬೇತುದಾರ ಮತ್ತು ಮಕ್ಕಳ ಸಲಹೆಗಾರರು ಆದ ಮಂಜುನಾಥ ಬಳ್ಳೂಳ್ಳಿ ಕೌಶಲ್ಯಗಳ ಕುರಿತು ತರಬೇತಿ ನೀಡಿದರು. ಆರ್. ವೈ. ಎಂ. ಇ. ಕಾಲೇಜಿನ ಎಂಸಿಎ ವಿಭಾಗ ಮುಖ್ಯಸ್ಥರಾದ ಸತ್ಯನಾರಾಯಣ ರೆಡ್ಡಿ, ಶಿವಾನಂದ, ಎಂಬಿಎ ವಿಭಾಗದ ಡಾ. ತಿಮ್ಮನಗೌಡ, ಹಾಗೂ ಅಕಿಮ್ ಸಂಸ್ಥೆಯ ಯೋಗಾನಂದರೆಡ್ಡಿ, ಸಹಾಯಕ ಪ್ರಾಧ್ಯಾಪಕರು ಪ್ರಾರ್ಥನೆ ಗೀತೆ ಹಾಡಿದರು. ಕಾರ್ಯಕ್ರಮವನ್ನು ಪರ್ವೇಜ್ ಬಾನು ಮತ್ತು  ಇಂದು ನಿರೂಪಿಸಿದರು. ಡಾ. ಶೈಲಜ ಬಿ ಸಹ ಪ್ರಾಧ್ಯಾಪಕ, ಸಹಾಯಕ ಪ್ರ್ರಾಧ್ಯಾಪಕ ಅರುಣ ಕುಮಾರ, ಸಲೋಮಿ, ರೇವತಿ ಎನ್. ಹಾಗೂ ಶ್ಯಾಮ್ ಪ್ರಸಾದ್ ಹಾಗೂ ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.