ಸ್ಥಳೀಯ ಸಂಸ್ಥೆ ಚುನಾವಣೆ: ಎನ್‍ಡಿಎ- ವಿಪಕ್ಷಗಳ ನಡುವೆ ವಾಕ್ಸಮರ

ಮುಂಬೈ,ಡಿ.2- ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ- ಎನ್‍ಸಿಪಿ ಮತ್ತು ಶಿವಸೇನೆ ನೇತೃತ್ವದ ಮೈತ್ರಿಕೂಟ ದಾಖಲೆಯ ಗೆಲುವು ಸಾಧಿಸಿ ಅಧಿಕಾರ ಹಿಡಿದ ವರ್ಷಕ್ಕೆ ಹೆಚ್ಚು ಸಮಯದ ನಂತರ ಮಹಾರಾಷ್ಟ್ರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆÉ ಸಂಬಂಧಿಸಿದಂತೆ ಎನ್ ಡಿಎ ಮತ್ತು ವಿರೋಧ ಪಕ್ಷಗಳ ಮೈತ್ರಿಕೂಟ ಮಹಾಯುತಿ ನಡುವೆ ವಿದ್ಯುನ್ಮಾನ ಮತಯಂತ್ರದ ಘರ್ಷಣೆ ಮತ್ತು ಮಾತಿನ ಚಕಮಕಿ ನಡೆದಿದೆ


ಮಹಾರಾಷ್ಟ್ರದ 264 ಪುರಸಭೆಗಳು ಮತ್ತು ನಗರ ಪಂಚಾಯತ್‍ಗಳಲ್ಲಿ ಮೊದಲ ಹಂತದ ಸ್ಥಳೀಯ ಸಂಸ್ಥೆಗಳ ಮತದಾನ ನಡೆಯುತ್ತಿದ್ದು 2024 ರ ವಿಧಾನಸಭಾ ಚುನಾವಣೆಯ ನಂತರ ನಿರ್ಣಾಯಕ ರಾಜಕೀಯ ಅಗ್ನಿ ಪರೀಕ್ಷೆಯ ಕಾಲವಾಗಿದೆ.


ವಿಧಾನಸಭೆ ಚುನಾವಣೆಯಲ್ಲಿ ಅಧಿಕಾರ ಕಳೆದುಕೊಂಡಿರುವ ಕಾಂಗ್ರೆಸ್, ಎನ್ ಸಿಪಿ ಶರದ್ ಬಣ, ಶಿವಸೇನೆ ಉದ್ದವ್ ಠಾಕ್ರೆ ಬಣದ ಮಹಾಯುತಿ ಮೈತ್ರಿಕೂಟ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮೈಲುಗಲ್ಲು ಸಾಧಿಸಲು ಇನ್ನಿಲ್ಲದ ಹರಸಾಹಸ ನಡೆಸಿದೆ.ನಾಳೆ ಮತ ಎಣಿಕೆ ನಡೆಯಲಿದೆ


ಮಹಾರಾಷ್ಟ್ರದ ಬಹುನಿರೀಕ್ಷಿತ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಮೊದಲ ಹಂತಕ್ಕೆ ಸಾಕ್ಷಿಯಾಗಿದೆ, 264 ಪುರಸಭೆಗಳು ಮತ್ತು ನಗರ ಪಂಚಾಯತ್‍ಗಳಲ್ಲಿ ಮತದಾನ ಬಿಗಿ ಭದ್ರತೆಯಲ್ಲಿ ನಡೆದಿದೆ
ಸುಪ್ರೀಂ ಕೋರ್ಟ್ ನಿರ್ದೇಶನ ಮೇರೆಗೆ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆದಿದ್ದು ಬಹು-ಹಂತದ ಗ್ರಾಮೀಣ ಮತ್ತು ನಗರ ಚುನಾವಣೆಗಳ ಈ ಆರಂಭಿಕ ಸುತ್ತಿನಲ್ಲಿ ಸುಮಾರು ಒಂದು ಕೋಟಿ ಮತದಾರರು ತಮ್ಮ ಮತ ಚಲಾಯಿಸಲಿದ್ದಾರೆ. ಮತದಾನಕ್ಕೆ ವಿದ್ಯುನ್ಮಾನ ಮತಯಂತ್ರ ಬಳಕೆ ಮಾಡಿರುವುದು ವಿರೋಧ ಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದೆ


ಆಡಳಿತಾರೂಢ ಭಾರತೀಯ ಜನತಾ ಪಕ್ಷದ ನೇತೃತ್ವದ ಮಹಾಯುತಿ ಮೈತ್ರಿಕೂಟ ಮತ್ತು ವಿರೋಧ ಪಕ್ಷ ಮಹಾ ವಿಕಾಸ್ ಅಘಾಡಿ ನಡುವಿನ ಹೋರಾಟಕ್ಕೆ ಸಾಕ್ಷಿಯಾಗಿದೆ. ಸ್ಥಳೀಯ ಸಂಸ್ಥೆಗಳ 6,705 ಸದಸ್ಯ ಸ್ಥಾನಗಳು ಮತ್ತು 264 ಪುರಸಭೆಯ ಅಧ್ಯಕ್ಷರ ಫಲಿತಾಂಶವನ್ನು ಮತದಾರರು ನಿರ್ಧರಿಸಲಿದ್ದಾರೆ


ಮಹಾಯುತಿ ನಿರ್ಣಾಯಕ ಜಯ ಸಾಧಿಸಿದ ವಿಧಾನಸಭಾ ಚುನಾವಣೆಯ ಒಂದು ವರ್ಷದ ನಂತರ ಚುನಾವಣೆಗಳು ಬರುತ್ತಿರುವುದರಿಂದ ಹೆಚ್ಚಿನ ರಾಜಕೀಯ ಮಹತ್ವ ಹೊಂದಿವೆ.