ಸ್ಥಳದಲ್ಲೇ ಚಿತ್ರ ಬಿಡಿಸುವ ಜಿಲ್ಲಾ ಮಟ್ಟದ ಕಾರ್ಯಕ್ರಮಕ್ಕೆ ತಹಸಿಲ್ದಾರ್ ಸುರೇಂದ್ರ ಮೂರ್ತಿ ಚಾಲನೆ

ಸಂಜೆವಾಣಿ ವಾರ್ತೆ
ಕೆ.ಆರ್.ನಗರ,ನ.24:-
ಮೈಸೂರು ದೃಶ್ಯ ಕಲಾವಿದರ ಸಂಘದಿಂದ ಸ್ಥಳದಲ್ಲೇ ಚಿತ್ರ ಬಿಡಿಸುವ ಜಿಲ್ಲಾ ಮಟ್ಟದ ಕಾರ್ಯಕ್ರಮ ಪಟ್ಟಣದ ವಾಲ್ಮೀಕಿ ಸಮುದಾಯ ಭವನದಲ್ಲಿ ನಡೆಯಿತು ಕಾರ್ಯಕ್ರಮಕ್ಕೆ ತಹಸಿಲ್ದಾರ್ ಸುರೇಂದ್ರ ಮೂರ್ತಿ ಚಾಲನೆ ನೀಡಿದರು.


ಮಕ್ಕಳಲ್ಲಿರುವ ಪ್ರತಿಭೆಯನ್ನು ಹೊರ ಚೆಲ್ಲಲು ಶಿಕ್ಷಕರು ಮತ್ತು ಶಿಕ್ಷಣ ಇಲಾಖೆ ವಿವಿಧ ರೀತಿಯಲ್ಲಿ ಪ್ರಯತ್ನ ಪಡುತ್ತಿದೆ ಯಾವ ವಿದ್ಯಾರ್ಥಿಯಲ್ಲಿ ಯಾವ ಪ್ರತಿಭೆ ಅಡಗಿದೆ ಎಂದು ಯಾರಿಗೂ ತಿಳಿದಿಲ್ಲ ಮನಸಲ್ಲಿರುವ ಪ್ರತಿಭೆಯನ್ನು ಹೊರ ಹಾಕಿದ ನಂತರವೇ ಆ ವಿದ್ಯಾರ್ಥಿಯ ಸಾಧನೆ ಅರ್ಥ ಆಗುವುದು.ಅಂತಹ ಪ್ರಯತ್ನದ ಕಾರ್ಯಕ್ರಮವನ್ನು ಕನ್ನಡ ಕಲರವ ಎಂಬ ಕಾರ್ಯಕ್ರಮದಡಿ ಜಿಲ್ಲಾ ದೃಶ್ಯ ಕಲಾವಿದರ ಸಂಘ ಮಾಡುತ್ತಿದೆ ಎಂದರು.


ಅದೇ ರೀತಿ ಜಿಲ್ಲಾ ದೃಶ್ಯ ಕಲಾವಿದರ ಸಂಘವು ಒಂದನೇ ತರಗತಿಯಿಂದ ನಾಲ್ಕನೇ ತರಗತಿ 5 ರಿಂದ 8ನೇ ತರಗತಿ. 9 10ನೇ ತರಗತಿ ವಿದ್ಯಾರ್ಥಿಗಳಿಂದ ಮೂರು ಹಂತದಲ್ಲಿ ಸ್ಥಳದಲ್ಲೇ ಚಿತ್ರ ಬರೆಯುವ ಸ್ಪರ್ಧೆ ಏರ್ಪಡಿಸಿರುವುದು ಒಳ್ಳೆಯ ಕಾರ್ಯಕ್ರಮ ಇಂತಹ ಸಂಘ ಸಂಸ್ಥೆಗಳು ಇನ್ನಷ್ಟು ಶೈಕ್ಷಣಿಕ ಮತ್ತು ಸಾಮಾಜಿಕ ಕೆಲಸಗಳನ್ನು ಮಾಡಲಿ ಎಂದು ಶುಭ ಹಾರೈಸಿದರು.
ಪೆÇಲೀಸ್ ವೃತ ನಿರೀಕ್ಷಕ ಶಿವಪ್ರಕಾಶ್ ವೇದಿಕೆ ಕಾರ್ಯಕ್ರಮಕ್ಕಿಂತ ಮುನ್ನ ಚಿತ್ರ ಬಿಡಿಸುವ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟು.ಮಾತನಾಡಿದ ಅವರು ಇತ್ತೀಚಿನ ದಿನಗಳಲ್ಲಿ ಕಂಪ್ಯೂಟರ್ ಡಿಜಿಟಲ್ ಚಿತ್ರಗಳು ದಿನನಿತ್ಯ ರಾರಾಜಿಸುತ್ತಿದ್ದರು ಕೈ ಬರವಣಿಗೆಯಲ್ಲಿ ಬಿಡಿಸುತ್ತಿರುವ ಚಿತ್ರಗಳಿಗೆ ಹೆಚ್ಚು ಬೇಡಿಕೆ ಇದೆ. ಅಂತಹ ಹಿರಿಯ ಕಲಾವಿದರನ್ನು ಪ್ರೀತಿಸಿ ಗೌರವಿಸುವ ಕೆಲಸ ನಾವೆಲ್ಲರೂ ಮಾಡೋಣ. ಜತೆಗೆ ಯುವ ಪ್ರತಿಭೆ ಇರುವ ವಿದ್ಯಾರ್ಥಿಗಳಿಗೂ ಪೆÇ್ರೀತ್ಸಾಹಿಸಿ ಇಂತಹ ವೇದಿಕೆಗಳನ್ನು ಕಲ್ಪಿಸಿ ಕೊಡೋಣ ಎಂದು ಸ್ಪರ್ಧಾರ್ಥಿಗಳಿಗೆ ಮತ್ತು ಪೆÇೀಷಕರಿಗೆ ಕಿವಿಮಾತು ಹೇಳಿದರು.


ವಾಲ್ಮೀಕಿ ಸಂಘದ ತಾಲೂಕು ಅಧ್ಯಕ್ಷ ಸಿ.ಸಿ.ಮಹದೇವ್ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬ ಮನುಷ್ಯನು ತಮ್ಮದೇ ಆದ ಸಾಧನೆಯನ್ನು ಮಾಡಲು ಸಾಕಷ್ಟು ರೀತಿಯಲ್ಲಿ ಯೋಜನೆಗಳನ್ನು ರೂಪಿಸಿಕೊಳ್ಳುತ್ತಾರೆ ಆದರೆ ಅದನ್ನು ಹೊರಹಾಕಲು ವೇದಿಕೆ ಸಿಗದೇ ತಮ್ಮಲ್ಲೇ ಅಡಗಿಸಿಕೊಂಡು ಬಿಡುತ್ತಾರೆ. ಅಂತಹ ಸಾಧಕ ವಿದ್ಯಾರ್ಥಿಗಳಿಗೆ ಇಂತಹ ಕಲಾವಿದರ ಸಂಘ ಬೆನ್ನೆಲುಬಾಗಿ ನಿಂತು ಉತ್ತಮ ವೇದಿಕೆ ಸೃಷ್ಟಿಸಿಕೊಂಡಿದೆ. ಕಲಾವಿದ ವಿದ್ಯಾರ್ಥಿಗಳು ಬರೆದಂತ ಒಂದೊಂದು ಚಿತ್ರವು ಒಂದೊಂದು ರೀತಿಯಲ್ಲಿ ಎಲ್ಲರ ಗಮನ ಸೆಳೆದಂತೆ ಸುಂದರವಾಗಿದ್ದವು. ಎಲ್ಲಾ ಸಂಘ ಸಂಸ್ಥೆಗಳು ಇಂತಹ ಕಾರ್ಯಕ್ರಮಗಳನ್ನು ಮಾಡಿದರೆ ಬಾಲ್ಯದಿಂದಲೇ ವಿದ್ಯಾರ್ಥಿಗಳು ಸಾಧನೆ ಮಾಡುವ ದಾರಿಯಲ್ಲಿ ಸಾಗುತ್ತಾರೆ ಇಲ್ಲಿ ಆಯ್ಕೆಯಾದ ಕಲಾವಿದ ವಿದ್ಯಾರ್ಥಿಗಳಿಗೆ ರಾಜ್ಯ ಮಟ್ಟದಲ್ಲೂ ಅವಕಾಶ ಸಿಗಲಿ ಎಂದರು.
ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೂ ಜಿಲ್ಲಾ ಸಂಘದಿಂದ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. ಇದಲ್ಲದೇ ಅತ್ಯುತ್ತಮ ಚಿತ್ರ ಬರೆದ ಸ್ಪರ್ಧಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.


ಮುಂದಿನ ದಿನಗಳಲ್ಲಿ ಉಳಿದ ಜಿಲ್ಲೆಗಳಲ್ಲಿಯೂ ಸ್ಪರ್ದೆ ಏರ್ಪಡಿಸಲಾಗುವುದು ಜೊತೆಗೆ ಈ ಕಾರ್ಯಕ್ರಮ ನಡೆಸಲು ಸ್ಥಳದ ಅವಕಾಶ ಕಲ್ಪಿಸಿಕೊಟ್ಟ ತಾಲೂಕು ನಾಯಕರ ಸಂಘಕ್ಕೆ ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸುತ್ತೇವೆ ಎಂದು ಅನಿಲ್ ತಿಳಿಸಿದರು.


ದೃಶ್ಯ ಕಲಾವಿದರ ಸಂಘದ ಜಿಲ್ಲಾಧ್ಯಕ್ಷ ಬಾಲಸ್ವಾಮಿ, ಪ್ರದಾನ ಕಾರ್ಯದರ್ಶಿ ಗಣೇಶ ಎಸ್.ಜೆ.ಸಂಘದ ನಿರ್ದೇಶಕ ಕಲಾವಿದರಾದ ಅನಿಲ್ ಕುಮಾರ್, ಸೋಮಶೇಖರ್ ಡಿ.ಪಿ, ಚಾಮರಾಜ್, ಉಲ್ಲಾಸ್ ಡಿ.ಬಿ.ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಶಂಕರಮೂರ್ತಿ, ಕೆ ಆರ್ ನಗರ ತಾಲೂಕು ವಾಲ್ಮೀಕಿ ಸಂಘದ ಅಧ್ಯಕ್ಷ ಸುಬ್ಬಕೃಷ್ಣ, ಕಾರ್ಯದರ್ಶಿ ಗಣೇಶ್, ಖಜಾಂಚಿ ಹೊಸೂರು ಸಂತೋಷ್, ಉದ್ಯಮಿ ಶ್ಯಾಮ್ ಸುಂದರ್, ತುಳಸಿ ಕುಮಾರ್, ಮಾದೇವ್, ಅಭಿಲಾಷ್ ಚನ್ನಂಗೆರೆ ಕುಮಾರ್ ಸೇರಿದಂತೆ ಪೆÇೀಷಕರು ಇದ್ದರು.