
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಫೆ.21: ಮಹಾರಾಷ್ಟ್ರದ ಪುಣೆಯಲ್ಲಿ ನಡೆದ ಫೆಡರೇಷನ್ ಎಂಡ್ಯುರನ್ಸ್ ರಾಷ್ಟ್ರೀಯ ಚಾಂಪಿಯನ್ಶಿಪ್ನಲ್ಲಿ ನಗರದ ಅಥ್ಹೇನಾ ರೋಲರ್ ಸ್ಕೆಟಿಂಗ್ ಕ್ಲಬ್ ಅನ್ನು ಪ್ರತಿನಿಧಿಸಿದ ವಿದ್ಯಾರ್ಥಿಗಳು ಮುಖ್ಯ ತರಬೇತುದಾರ ರವಿ ಕುಮಾರ್ ಅವರ ಮಾರ್ಗದರ್ಶನದಲ್ಲಿ ಹಾಗೂ ಸಹಾಯಕ ತರಬೇತುದಾರ ಲೇಪಾಕ್ಷಿ ಮತ್ತು ಮಧನ್ ಕುಮಾರ್ ಅವರ ಪರಿಶ್ರಮದಿಂದ ಮೋಹ್ಸಿನ್ ಚಿನ್ನದ ಪದಕ ಪಡೆದಿದ್ದಾರೆ. ಮೆಘನ್ ಒಂದು ಬೆಳ್ಳಿ ಹಾಗೂ ಎರಡು ಕಂಚಿನ ಪದಕಗಳನ್ನು ಗೆದ್ದಿದ್ದಾನೆ.
ತನೂಶ್ರೀ, ಭುವಿತ್ ನಿಗಮ್, ವಿಜಯ್ ರಾಜ್ ಕೆ, ಆರಾಧ್ಯ, ಆರಾದ್ಯ, ಅಭಿರಾಮ್, ಕೆ ಹರ್ಷಿತ್, ಪ್ರಥಮ್ ಬಿ ಎಂ, ಆರ್ಯನ್ ಪಾಟೀಲ್ ಸರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಾಗಿದ್ದಾರೆ.



























