Home ಜಿಲ್ಲೆ ಮೈಸೂರು ಸೋಲಾರ್ ಬ್ಯಾಟರಿ ಕಳ್ಳತನ-ಬಂಧನ

ಸೋಲಾರ್ ಬ್ಯಾಟರಿ ಕಳ್ಳತನ-ಬಂಧನ

ಸಂಜೆವಾಣಿ ವಾರ್ತೆ
ಹನೂರು ಮೇ 6:-
ನೀರೆತ್ತುವ ಮೋಟಾರ್‍ಗಳು ಮತ್ತು ಸೋಲಾರ್ ಬ್ಯಾಟರಿ ಕಳ್ಳತನ ಮಾಡಿದ್ದ ಆರೋಪಿಗಳನ್ನು ಬಂಧಿಸಿರುವ ರಾಮಾಪುರ ಪೆÇಲೀಸರು ಬಂಧಿತರಿಂದ 2,18,500/- ರೂ ಮೌಲ್ಯದ ಸ್ವತ್ತುಗಳು ಹಾಗೂ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.


ತಾಲೂಕಿನ ಚಂಗದಾರಹಳ್ಳಿ ಗ್ರಾಮದ ಮಣಿ ಎಂಬುವರು ತಮ್ಮ ಜಮೀನನ ವೆಡ್ ನಲ್ಲಿ ಇಟ್ಟಿದ್ದ ಕೊಳವೆಬಾವಿಯ 02 ಸಬ್‍ಮರ್ಸಿಬಲ್ ಪಂಪ್ ಸೆಟ್ ಮೋಟಾರ್‍ಗಳು ಕಳ್ಳತನವಾಗಿರುವ ಬಗ್ಗೆ ರಾಮಾಪುರ ಪೆÇಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿರುವ ಪೆÇಲೀಸರು ತನಿಖೆ ನಡೆಸಿ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸರ್ಕಲ್ ಇನ್ಸ್ಪೆಕ್ಟರ್ ಚಿಕ್ಕರಾಜಶೆಟ್ಟಿ ರವರ ನಿರ್ದೇಶನದ ಮೇರೆಗೆ ಪಿ.ಎಸ್.ಐ ಮಂಜುನಾಥ ಪ್ರಸಾದ್ ಮತ್ತು ಸಿಬ್ಬಂದಿಗಳ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳಾದ ಮಾರಸ್ವಾಮಿ, ಮಣಿಕಂಠ, ಶ್ರೀರಂಗ, ಕಾರ್ತಿಕ್ ರವರುಗಳನ್ನು ವಾಹನದ ಸಮೇತ ವಶಕ್ಕೆ ಪಡೆದು ನೀರೆತ್ತುವ 02 ಮೋಟಾರ್ ಮತ್ತು 01 ಪಂಪ್ ಹಾಗೂ ಸೋಲಾರ್ ಫೆನ್ಸಿಂಗ್ ಬ್ಯಾಟರಿ, ಎನರ್ಜರ್, ಚಾರ್ಜರ್ (2,18,500 ಮೌಲ್ಯ) ಅನ್ನು ವಶಕ್ಕೆ ಪಡೆದಿದ್ದಾರೆ. ಈ ಪ್ರಕರಣದಲ್ಲಿ ಕಾರ್ತಿಕ್ ಎಂಬುವನ ತಲೆಮರೆಸಿಕೊಂಡಿದ್ದು ಪತ್ತೆಗಾಗಿ ಕ್ರಮ ಕೈಗೊಂಡಿದ್ದಾರೆ.


ಈ ಕಳವು ಪ್ರಕರಣದ ಪತ್ತೆ ಕಾರ್ಯಕ್ಕೆ ಮಾನ್ಯ ಪೆÇಲೀಸ್ ಅಧೀಕ್ಷಕರಾದ ಮುತ್ತುರಾಜು.ಎಂ ಐ.ಪಿ.ಎಸ್. ರವರು ಪ್ರಶಂಸನೆ ವ್ಯಕ್ತಪಡಿಸಿ, ಮುಂದಿನ ದಿನಗಳಲ್ಲಿಯೂ ಸಹ ಇನ್ನೂ ಹೆಚ್ಚಿನ ಕಳ್ಳತನ ಪ್ರಕರಣಗಳನ್ನು ಪತ್ತೆ ಹಚ್ಚಿ ನಿಗ್ರಹಿಸುವಂತೆ ಸೂಚನೆಗಳನ್ನು ನೀಡಿರುತ್ತಾರೆ.