ಸೈಕಲ್ ಸವಾರಿ ಮಾಡಿ ಪಾರಂಪರಿಕ ಕಟ್ಟಗಳ ವೀಕ್ಷಣೆ

ಸಂಜೆವಾಣಿ ನ್ಯೂಸ್
ಮೈಸೂರು: ಸೆ.26:-
ನೂರಾರು ಯುವಕ-ಯುವತಿಯರು ಟ್ರಿನ್ ಟ್ರಿನ್ ಸೈಕಲ್ ಏರಿ ಸವಾರಿ ಮಾಡಿ ಮೈಸೂರಿನಲ್ಲಿರುವ ಪ್ರಮುಖ ಪಾರಂಪರಿಕ ಕಟ್ಟಡಗಳ ಇತಿಹಾಸ, ಅದರ ಹಿನ್ನೆಲೆ, ಪ್ರಾಮುಖ್ಯತೆ, ಹಾಗೂ ವಾಸ್ತುಶಿಲ್ಪಗಳ ಬಗ್ಗೆ ಮಾಹಿತಿ ಪಡೆದು ಪುಳಕಿತರಾದರು.


ನಾಡಹಬ್ಬ ದಸರಾ ಮಹೋತ್ಸವ ಹಿನ್ನೆಲೆ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ವತಿಯಿಂದ ಪಾರಂಪರಿಕ ಸೈಕಲ್ ಸವಾರಿ ಆಯೋಜಿಸಿದ್ದು, ಬೆಳ್ಳಂ ಬೆಳಗ್ಗೆ ನಮ್ಮ ಪರಂಪರೆ ನಮ್ಮ ಹೆಮ್ಮೆ ಎಂಬ ಟೀ ಶರ್ಟ್ ಧರಿಸಿದ್ದ ನೂರಾರು ಜನರು ಸೈಕಲ್ ಸವಾರಿ ಮಾಡುತ್ತಾ ಪುರಭವನ, ದೊಡ್ಡ ಗಡಿಯಾರ, 10ನೇ ಚಾಮರಾಜೇಂದ್ರ ವೃತ್ತ, ಅರಮನೆ,ನಾಲ್ವಡಿ ಕೃಷ್ಣರಾಜ ಒಡೆಯರ್ ವೃತ್ತ ಸೇರಿದಂತೆ ನಗರದ 20 ಪಾರಂಪರಿಕ ಕಟ್ಟಡಗಳತ್ತಾ ಸಾಗಿ ಆಯಾ ಕಟ್ಟಡದ ಮುಂಭಾಗದಲ್ಲಿ ಇತಿಹಾಸ ತಜ್ಞ ಪೆÇ್ರ.ಡಾ.ಶೆಲ್ವ ಪಿಳೈ ಅಯ್ಯಂಗಾರ್ ಹಾಗೂ ನಿವೃತ್ತ ಪೆÇ್ರ.ರಂಗನಾಥ ಕಟ್ಟಡಗಳ ಹಿನ್ನೆಲೆ, ವಾಸ್ತುಶಿಲ್ಪ ಸೇರಿ ರೋಚಕ ಇತಿಹಾಸದ ಸಂಗತಿ ತಿಳಿಸಿದರು.


ರಂಗಚಾರ್ಲು ಪುರಭವನದ ಮುಂಭಾಗ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಸೈಕಲ್ ಸವಾರಿ ಮಾಡಿದ ಮೈಸೂರಿಗ ಅಲ್ಟ್ರಾ ಸೈಕಲಿಸ್ಟ್ ನವೀನ್ ಡಿ.ಎಸ್.ಸೌಲಂಕಿ ಹಸಿರು ನಿಶಾನೆ ತೋರಿ ಸೈಕಲ್ ಸವಾರಿಗೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ 10 ದಿನಗಳಲ್ಲಿ 15 ಗಂಟೆಗಳ ಅವಧಿಯಲ್ಲಿ 3758 ಕಿ.ಮೀ ಸೈಕ್ಲಿಂಗ್ ಮಾಡಿರುವುದು ಹೆಮ್ಮೆ ತಂದಿದೆ. ದೇಹವನ್ನು ಆರೋಗ್ಯ ಹಾಗೂ ಸದೃಢವಾಗಿ ಇಟ್ಟುಕೊಳ್ಳಬೇಕು. ಪ್ರತಿದಿನ ಸೈಕ್ಲಿಂಗ್ ಅಭ್ಯಾಸ ಮಾಡಿ, ಇದಕ್ಕೆ ಮೈಸೂರು ಉತ್ತಮವಾದ ಸ್ಥಳವಾಗಿದೆ ಎಂದರು.


ಪಾರಂಪರಿಕ ಸೈಕಲ್ ಸವಾರಿ ಹಾದಿ: ರಂಗಾಚಾರ್ಲು ಪುರಭವನದಿಂದ ಪ್ರಾರಂಭವಾಗಿ, ಸಿಲ್ವರ್ ಜೂಬಿಲಿ ಕ್ಲಾಕ್ ಟವರ್(ದೊಡ್ಡ ಗಡಿಯಾರ), ಫ್ರಿಮೇಸನ್ಸ್ ಕ್ಲಬ್, ಹತ್ತನೆ ಚಾಮರಾಜ ಒಡೆಯರ್ ವೃತ್ತ, ಅರಮನೆ, ನಾಲ್ಕನೇ ಕೃಷ್ಣರಾಜ ಒಡೆಯರ್ ವೃತ್ತ, ಲ್ಯಾನ್ಸ್ಡೌನ್ ಕಟ್ಟಡ, ಜಗನ್ ಮೋಹನ ಅರಮನೆ, ಪರಕಾಲ ಮಠ, ವಾಣಿಜ್ಯ ತೆರಿಗೆ ಕಚೇರಿ, ಪದ್ಮಾಲಯ, ಹಳೇ ಜಿಲ್ಲಾಧಿಕಾರಿಗಳ ಕಚೇರಿ, ಕ್ರಾಫರ್ಡ್ ಹಾಲ್, ಮೆಟ್ರೊಪೆÇೀಲ್ ವೃತ್ತ, ರೈಲ್ವೆ ನಿಲ್ದಾಣ, ಕೃಷ್ಣ ರಾಜೇಂದ್ರ ಆಸ್ಪತ್ರೆ (ಕೆ.ಆರ್.ಆಸ್ಪತೆ) ವೃತ್ತ, ಚಾಮರಾಜೇಂದ್ರ ಟೆಕ್ನಿಕಲ್ ಇನ್ಸಿಟಿಟ್ಯೂಟ್, ಕಾವೇರಿ ಎಂಪೆÇೀರಿಯಂ, ಗಾಂಧಿ ವೃತ್ತ ಹಾದು ರಂಗಾಚಾರ್ಲು ಪುರಭವನದ ಹತ್ತಿರ ಮುಕ್ತಾಯಗೊಂಡಿತು.


ಕಾರ್ಯಕ್ರಮದಲ್ಲಿ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಆಯುಕ್ತ ಎ.ದೇವರಾಜು, ಇಲಾಖೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಂಜುಳ, ತಾರಕೇಸ್ ಹಾಗೂ ಅಂಬರೀಶ್ ಸೇರಿ ಹಲವರು ಉಪಸ್ಥಿತರಿದ್ದರು.