Home ಜಿಲ್ಲೆ ಮೈಸೂರು ಸೇವಾಲಾಲ್ ಜಯಂತೋತ್ಸವ ಕಾರ್ಯಕ್ರಮಕ್ಕೆ ಸರ್ವರೂ ಆಗಮಿಸಿ ಯಶಸ್ವಿಗೊಳಿಸಿ: ಗೌರವ ಅಧ್ಯಕ್ಷ ಶಾಂತರಾಜು

ಸೇವಾಲಾಲ್ ಜಯಂತೋತ್ಸವ ಕಾರ್ಯಕ್ರಮಕ್ಕೆ ಸರ್ವರೂ ಆಗಮಿಸಿ ಯಶಸ್ವಿಗೊಳಿಸಿ: ಗೌರವ ಅಧ್ಯಕ್ಷ ಶಾಂತರಾಜು

ಸಂಜೆವಾಣಿ ವಾರ್ತೆ
ಹನೂರು.ಫೆ.27:-
ಹನೂರು ವಿಭಾಗೀಯ ಮಟ್ಟದ 287ನೇ “ಸೇವಾಲಾಲ್” ಜಯಂತೋತ್ಸವ-2026ರ “ಬಂಜಾರ ಮೇಳಾವೋ” ಕಾರ್ಯಕ್ರಮಕ್ಕೆ ಸರ್ವರೂ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಚಾಮರಾಜನಗರ ಜಿಲ್ಲಾ ಬಂಜಾರ ಸೇವಾ ಸಂಘ ಗೌರವ ಅಧ್ಯಕ್ಷ ಶಾಂತರಾಜು ಅವರು ತಿಳಿಸಿದರು.
ಹನೂರು ಪಟ್ಟಣದ ಲೋಕೋಪಯೋಗಿ ಇಲಾಖೆ ವಸತಿ ಗೃಹದಲ್ಲಿ ಮಾಧ್ಯಮಕ್ಕೆ ತಿಳಿಸಿದ ಅವರು ದಿನಾಂಕ :28-02-2026ನೇ ಶನಿವಾರದಂದು ಪಟ್ಟಣದ ಶ್ರೀ ಮಹದೇಶ್ವರ ಕ್ರೀಡಾಂಗಣದಲ್ಲಿ ಸಮಾರೋಪ ಸಮಾರಂಭ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.ಚಾಮರಾಜನಗರ, ಮೈಸೂರು, ಮಂಡ್ಯ ಜಿಲ್ಲೆ ಬಂಜಾರ ಸೇವಾ ಸಂಘಗಳ ಒಕ್ಕೂಟ ಹಾಗೂ ಹನೂರು ತಾಲ್ಲೂಕು ಬಂಜಾರ ಸೇವಾ ಸಂಘದಿಂದ ಕಾರ್ಯಕ್ರಮ ನಡೆಯಲಿದೆ.


ಪಟ್ಟಣದ ಆರ್.ಎಂ.ಸಿ ಆವರಣದಲ್ಲಿ ಬಂಜಾರ ಕಲಾ ತಂಡಗಳ ಉದ್ಘಾಟನೆ ಹಾಗೂ ಮೆರವಣಿಗೆ ಪ್ರಾರಂಭಿಸಿ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ಸಾಗಿ ಬಂಜಾರ ವಿವಿಧ ತಾಂಡಗಳ ‘ನಾಯಕ್’ ‘ಡಾವೋ’ ‘ಕಾರ್‍ಬಾರಿ’ ಗಾಡಿಗೊಂಬೆ ಕುಣಿತ ವಾದ್ಯ ಮೇಳಗಳೊಂದಿಗೆ ವಿಜೃಂಭಣೆಯಿಂದ ಮೆರವಣಿಗೆ ಮೂಲಕ ಸಾಗಿ ಮಹದೇಶ್ವರ ಕ್ರೀಡಾಂಗಣದ ಸಮಾರಂಭ ಕಾರ್ಯಕ್ರಮಕ್ಕೆ ತೆರಳುವುದು.
ಮಧ್ಯಾಹ್ನ 2-00 ಗಂಟೆಗೆ ವೇಳೆಗೆ ಸಮಾರೋಪ ಸಮಾರಂಭ ನಡೆಯಲಿದ್ದು ರಾಷ್ಟ್ರೀಯ ಬಂಚಾರ ಸೇವಾ ಸಂಘ ರಾಜ್ಯಾಧ್ಯಕ್ಷ ವಿಜಯ್ ಜಾದವ್ ಅಧ್ಯಕ್ಷತೆ ವಹಿಸಲಿದ್ದಾರೆ. ಕೆ.ಪಿ.ಸಿ.ಸಿ. ಪ್ರಕಾ, ಮಾಜಿ ಅಧ್ಯಕ್ಷರು ಬಂಚಾರ ತಾಂಡ ನಿಗಮ ಸುಭಾಷ್ ಚಂದ್ರರಾರೋಡ್ ರವರು ಮುಖ್ಯ ಭಾಷಣಕಾರರಾಗಿ ಮಾತನಾಡಲಿದ್ದಾರೆ. ಬಂಜಾರ ತಾಂಡ ಕಲಾ ಪ್ರತಿಭೆ ಟಿ.ವಿ. ಸೆಲೆಬ್ರೆಟಿಗಳು ಹಾಗೂ ಗಾಯಕರುಗಳಾದ ಹುಮಂತು, ರಮೇಶ್ ಲಮಾಣಿರವರಿಂದ ರಸಮಂಜರಿ, ಕನಕಪುರ ಹನುಮಂತು ಜಾನಪದ ಕಲಾತಂಡಗಳ ಕಾರ್ಯಕ್ರಮ ನಡೆಯಲಿದೆ.
ಪರಮಪೂಜ್ಯ ಜಗದ್ಗುರು ಶ್ರೀ ಸರ್ದಾರ್ ಸೇವಾಲಾಲ್ ಸ್ವಾಮೀಜಿರವರು ಚಿತ್ರದುರ್ಗಮಠ, ಪರಮಪೂಜ್ಯ ಶ್ರೀ ಸೇವಾಲಾಲ್‍ಸೈನಾಭಗತ್ ರವರು ಶಿವಮೊಗ್ಗ ರವರ ದಿವ್ಯ ಸಾನಿಧ್ಯದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ


ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ವೆಂಕಟೇಶ್, ಹಾಗೂ ಶಾಸಕ ಎಂ.ಆರ್. ಮಂಜುನಾಥ್ ಅವರು ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ. ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಹೆಚ್.ಸಿ.ಮಹದೇವಪ್ಪರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಜಿಲ್ಲಾಧಿಕಾರಿ ಶ್ರೀರೂಪ, ಲೋಕಸಭಾ ಸದಸ್ಯರ ಸುನೀಲ್‍ಬೋಸ್, ಶಾಸಕರುಗಳಾದ ಪುಟ್ಟರಂಗಶೆಟ್ಟಿ, ಕೃಷ್ಣಮೂರ್ತಿ, ಮಳವಳ್ಳಿ ಶಾಸಕ ನರೇಂದ್ರಸ್ವಾಮಿ ಹಾಗೂ ಮಾಜಿ ಶಾಸಕರಾದ ಪರಿಮಳನಾಗಪ್ಪ, ಆರ್.ನರೇಂದ್ರ, ಎನ್.ಮಹೇಶ್, ಜಿ.ಎನ್. ನಂಜುಂಡಸ್ವಾಮಿ, ಜನಧ್ವನಿ ಬಿ.ವೆಂಕಟೇಶ್, ನಿಶಾಂತ್, ಡಾ. ದತ್ತೇಶ್‍ಕುಮಾರ್, ತಹಶೀಲ್ದಾರ್ ಚೈತ್ರಾ, ಕರ್ನಾಟಕ ಪ್ರದೇಶ ಬಂದಾದ ಸೇವಾ ಸಂಘ ರಾಜ್ಯಾಧ್ಯಕ್ಷರು ಸಿದ್ದನಾಯಕ, ಚಾಮರಾಜನಗರ ಕಾನೂನು ಕಾಲೇಜು ಪ್ರಾಂಶುಪಾಲರು ಲಕತಬಾಯಿ, ಮಹಿಳಾ ವಿಭಾಗ ಜಿ.ಭಾ. ಬಂದಾರ ಸೇವಾ ಸಂಘ ರಾಜ್ಯಾಧ್ಯಕ್ಷೆ ಶೈಲಾಬಾಯಿ ಸೇರಿದಂತೆ ಇನ್ನಿತ ಗಣ್ಯರು ಆಗಮಿಸಲಿದ್ದಾರೆ ಎಂದರು.


ಚಾಮರಾಜನಗರ, ಮೈಸೂರು, ಮಂಡ್ಯ ಜಿಲ್ಲಾ ಬಂಜಾರ ಸಂಘಟನೆಗಳ ಒಕ್ಕೂಟ ಅಗ್ರಹರು, ಕಾರ್ಯದರ್ಶಿಗಳು, ವಿವಿದ ತಾಂಡಗಳ ಗ್ರಾಮಸ್ಥರುಗಳು ವಿವಿಧ ಸಂಘಗಳ ಪ್ರತಿನಿಧಿಗಳು, ಅಧ್ಯಕ್ಷರುಗಳು ಹಾಗೂ ಪದಾಧಿಕಾರಿಗಳು, ಮಹಿಳಾ ಸಂಘಗಳು, ಯುವಕರ ಸಂಘಗಳು ಸೇರಿದಂತೆ ಹೆಚಿನ ಸಂಖ್ಯೆಯಲ್ಲಿ ಎಲ್ಲರೂ ತಪ್ಪದೆ ಬನ್ನಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯತಿ ಮಾಜಿ ಸದಸ್ಯ ಕುಮಾರ್ ನಾಯಕ್, ಬಂಜಾರ ಸಂಘದ ಅಧ್ಯಕ್ಷ ಶಿವಾಜಿನಾಯಕ್, ಸಮುದಾಯದ ಮುಖಂಡರಾದ ಮುನಿನಾಯಕ್, ಗೋಪಾಲನಾಯ್ಕ, ಮಹಾದೇವನಾಯ್ಕ, ಗುರು, ನಾಗರಾಜು, ನಾಗೇಶ್ , ಕೃಷ್ಣನಾಯಕ್ ಸೇರಿದಂತೆ ಇನ್ನಿತರರು ಇದ್ದರು.