Home ಜಿಲ್ಲೆ ಮಂಗಳೂರು ಸೇತುವೆಯಿಂದ ಕೆಳಗೆ ಬಿದ್ದ ಸ್ಕೂಟಿ -ಸ್ಕೂಟಿ ಜಖಂ, ಸವಾರನಿಗೆ ಗಾಯ

ಸೇತುವೆಯಿಂದ ಕೆಳಗೆ ಬಿದ್ದ ಸ್ಕೂಟಿ -ಸ್ಕೂಟಿ ಜಖಂ, ಸವಾರನಿಗೆ ಗಾಯ

ಸುಳ್ಯ:ಸ್ಕೂಟಿ ಸವಾರ ನಿಯಂತ್ರಣ ತಪ್ಪಿ ಕುಕ್ಕುಂಬಳ ಸೇತುವೆ ಮೇಲಿನಿಂದ ಕೆಳಗೆ ಬಿದ್ದು ಸ್ಕೂಟಿ ಜಖಂ ಗೊಂಡು ಸವಾರ ಸಣ್ಣ ಪುಟ್ಟ ಗಾಯದಿಂದ ಪಾರಾದ ಘಟನೆ ಸಂಭವಿಸಿದೆ.
ಅಂಜಿಕ್ಕಾರ್ ಸುಂದರ ನಾಯ್ಕ ರವರ ಪುತ್ರ ರವಿಚಂದ್ರ ನಾಯ್ಕ ಗಾಯಗೊಂಡ ಸ್ಕೂಟಿ ಸವಾರ. ಅವರು ರಾತ್ರಿ ಸುಮಾರು ೮ ಗಂಟೆಗೆ ಸುಳ್ಯದಿಂದ ಅಂಜಿಕ್ಕಾರ್‌ಗೆ ಹೋಗುತ್ತಿದ್ದ ವೇಳೆ ಕುಕ್ಕುಂಬಳ ಸೇತುವೆ ಬಳಿ ಅವಘದ ಸಂಭವಿಸಿದೆ. ಘಟನೆಗೆ ಸೇತುವೆಗೆ ತಡೆ ಬೇಲಿ ಇಲ್ಲದೇ ಇರುವುದರಿಂದ ಕಾರಣವಾಗಿದೆ. ಈ ಹಿಂದೆ ಆಟೋ ರಿಕ್ಷಾವೊಂದು ಸೇತುವೆಯಿಂದ ಕೆಳಕ್ಕೆ ಬಿದ್ದು ಸವಾರ ಗಾಯಗೊಂಡಿದ್ದರು. ಗಾಯಗೊಂಡ ರವಿಚಂದ್ರರನ್ನು ಸುಳ್ಯದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು