ಸೇತುವೆಗೆ ಡಿಕ್ಕಿ ಹೊಡೆದ ಕಂಟೈನರ್ ಲಾರಿ; ತಪ್ಪಿದ ಭಾರೀ ಅನಾಹುತ

ಬೈಂದೂರು- ಸೇತುವೆಗೆ ಕಂಟೈನರ್ ಲಾರಿಯೊಂದು ಡಿಕ್ಕಿ ಹೊಡೆದು, ಭಾರೀ ಅನಾಹುತವೊಂದು ತಪ್ಪಿದ ಘಟನೆ ರಾಷ್ಟ್ರೀಯ ಹೆದ್ದಾರಿ ೬೬ ರ ಕಂಬದಕೋಣೆ ಬಳಿ ಅಕ್ಟೋಬರ್ ೨ರಂದು ನಡೆದಿದೆ.
ಡಿಕ್ಕಿಯ ರಭಸಕ್ಕೆ ವಾಹನವು ನದಿಗೆ ಬೀಳುವ ಸಾಧ್ಯತೆ ಇತ್ತು. ಆದರೆ ಅದೃಷ್ಟವಶಾತ್, ಲಾರಿಯು ಸೇತುವೆಯ ಮೇಲೆಯೇ ನಿಂತಿದೆ. ಇದರಿಂದ ಚಾಲಕ ಮತ್ತು ಕ್ಲೀನರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಈ ಕಂಟೈನರ್ ಲಾರಿಯು ಮಂಗಳೂರಿನಿಂದ ಗೋವಾ ಕಡೆಗೆ ಸಾಗುತ್ತಿತ್ತು ಎಂದು ತಿಳಿದುಬಂದಿದೆ.