ಸೆ.24 ರೆಡ್ಡಿ ಜನ ಸಂಘದ ಶತಮಾನೋತ್ಸವಜನಗಣತಿಯಲ್ಲಿ ಹಿಂದು ರೆಡ್ಡಿ ಎಂದು ಬರೆಸಲು ಶ್ರಿಗಳ ಮನವಿ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಸೆ.05:
ಕರ್ನಾಟಕ ರೆಡ್ಡಿ ಜನ ಸಂಘದ ಶತಮಾನೋತ್ಸವವನ್ನು ಸೆ.24 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿದೆ‌ ಎಂದು ರೆಡ್ಡಿ ಗುರುಪೀಠದ  ವೇಮನಾನಂದ ಸ್ವಾಮೀಜಿ ತಿಳಿಸಿದ್ದಾರೆ.
ನಗರದಲ್ಲಿಂದು ಸುದ್ದಿಗೋಷ್ಟಿ ನಡೆಸಿದ ಅವರು
ನೆರೆಯ ಆಂದ್ರಪ್ರದೇಶದಿಂದ 400 ವರ್ಷಗಳ ಹಿಂದೆ ಕರ್ನಾಟಕಕ್ಕೆ ವಲಸೆ ಬಂದ ರೆಡ್ಡಿ ಸಮುದಾಯ ವಿಭಿನ್ನ ರೀತಿಯಲ್ಲಿ ವೈಶಿಷ್ಟ್ಯ, ಸಂಸ್ಕೃತಿಯನ್ನು ಹೊಂದಿದೆ. ಮೂಲ ಕಸಬು ಕೃಷಿ, ನದಿ ಇದ್ದ ಕಡೆ ನೆಲಸಿದರು.
ರಾಜ್ಯದಲ್ಲಿ 35 ಲಕ್ಷ ಜನ ಸಂಖ್ಯೆ ಇದ್ದರೂ 20 ಕ್ಕೂ ಹೆಚ್ಚು ಶಾಸಕರು ಇರುತ್ತಾರೆ. ಅದೇರೀತಿ ಸಂಪುಟದಲ್ಲಿ ಸಚಿವರಾಗಿರುತ್ತಾರೆ. ರಾಜ್ಯದ ಮೊದಲ ಮುಖ್ಯ ಮಂತ್ರಿ ಕೆ.ಸಿ.ರೆಡ್ಡಿ ಅವರು ಸಹ ರೆಡ್ಡಿ ಸಮುದಾಯಕ್ಕೆ ಸೇರಿದವರು.
ಕಳೆದ ನೂರು ವರ್ಷಗಳ ಹಿಂದೆ ಸಂಘ ಸ್ಥಾಪನೆ ಮಾಡಿ.
ವೈದ್ಯಕೀಯ ಕಾಲೇಜು ಒಂದನ್ನು ಬಿಟ್ಟು ಉಳಿದಂತೆ ಎಲ್ಲಾ ರೀತಿಯ ಶಿಕ್ಷಣ ಸಂಸ್ಥೆಗಳನ್ನು ಹೊಂದಿ ಬೃಹತ್ ಪ್ರಮಾಣದಲ್ಲಿ ಬೆಳೆದು ಎಲ್ಲ ಸಮುದಾಯದ 12 ಸಾವಿರ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿದೆ. ವೈದ್ಯಕೀಯ ಕಾಲೇಜು ಆರಂಭಿಸುವ. ಪ್ರಕ್ರಿಯೆಯೂ ನಡೆದಿದೆ. ಇಂತಹ ಸಂಘ ಸ್ಥಾಪನೆಗೊಂಡು ಶತಮಾನದ ಸಂಭ್ರಮದಲ್ಲಿದೆ. ಸೆ. 24 ರಂದು ಬೆಂಗಳೂರಿನಲ್ಲಿ ಶತಮಾನೋತ್ಸವ ಹಮ್ಮಿಕೊಂಡಿದೆ. ಇದರಲ್ಲಿ ರಾಜ್ಯದ, ಆಂದ್ರಪ್ರದೇಶ, ತೆಲಂಗಾಣ ರಾಜ್ಯದ ಗಣ್ಯರು, ಮುಖ್ಯ ಮತ್ರಿಗಳು, ಸಚಿವರು ಪಾಲ್ಗೊಳ್ಳಲಿದ್ದಾರೆಂದು ತಿಳಿಸಿದರು.‌
ಕಾಂತರಾಜ್ ಆಯೋಗ ನೀಡಿದ ಜನಸಂಖ್ಯಾ ವರದಿಯಲ್ಲಿ ಕೇವಲ 7 ಲಕ್ಷ ಎಂದು ತೋರೊಸಿದ್ದು. ಇದನ್ನು ವಿರೋಧಿಸಿದೆ. ಮತ್ತೆ ಜನಗಣತಿ ನಡೆಯಲಿದೆ.
ಅದಕ್ಕಾಗಿ ಸಂಪ್ರದಾಯ ಏನೇ ಇರಲಿ ತಿರುಪತಿಗೆ ಹೋಗಲಿ, ಶ್ರೀಶೈಲಕ್ಕೆ ಹೋಗಲಿ “ಹಿಂದು  ರೆಡ್ಡಿ” ಎಂದು ಬರೆಸಲು ಮನವಿ ಮಾಡಿದರು. 
ಸಂಘದ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಎ.ಕೃಷ್ಣಾರೆಡ್ಡಿ ಮಾತನಾಡಿ, ರೆಡ್ಡಿ ಜನ ಸಂಘ ಕೇವಲ ಬೆಂಗಳೂರಿಗೆ ಸೀಮಿತ ಎಂಬ ಮಾತು ಇತ್ತು. ಆದರೆ ಈಗ ಸಮುದಾಯ ಇರುವ  ಎಲ್ಲ ಜಿಲ್ಲೆಗಳಲ್ಲಿ ಕಾರ್ಯಪ್ರವೃತ್ತವಾಗಿದೆ.‌ ಜನಸಂಖ್ಯೆ ಗಣತಿಯಲ್ಲಿ ಸಮುದಾಯಕ್ಕೆ ರಾಜಕೀಯ, ವಿದ್ಯಾಭ್ಯಾಸ, ಉದ್ಯೋಗ ಮೊದಲಾದವುಗಳಿಗೆ ಸಹಕಾರಿಯಾಗಲು ಸಮುದಾಯದ ಎಲ್ಲರೂ 1105  ಹಿಂದು ರೆಡ್ಡಿ ಎಂದು ನಮೂದಿಸಲು ಮನವಿ ಮಾಡಿದರು.
ಸಂಘದ ಬಳ್ಳಾರಿ ಜಿಲ್ಲಾ ಅಧ್ಯಕ್ಷ ಎನ್.ಪ್ರತಾಪರೆಡ್ಡಿ ಮಾತನಾಡಿ ಬರುವ ವರ್ಷ ಸಂಘಕ್ಕೆ 75 ವರ್ಷ ಆಗಲಿದೆ. ವಜ್ರಮಹೋತ್ಸವ ಸಂದರ್ಭದಲ್ಲಿ ನಗರದಲ್ಲಿನ ಸಂಘದ ಕಚೇರಿ ಆವರಣದಲ್ಲಿ
ಕಲ್ಯಾಣ ಮಂಟಪ ಬರುವ ಐದಾರು ತಿಂಗಳಲ್ಲಿ ಮುಗಿಯಲಿದೆ. ಇದು ಉತ್ತರ ಕಾರ್ನಾಟಕದಲ್ಲಿಯೇ ಬೃಹತ್ ಮಂಟಪ  ಇದಾಗಲಿದೆ. ಹತ್ತರಿಂದ ಹದಿನೈದು ಕೋಟಿ ವೆಚ್ಚದಲ್ಲಿ ನಿರ್ಮಾಣ ಆಗುತ್ತಿದೆ. ವಾಣಿಜ್ಯ ಸಂಕೀರ್ಣ ಸಹ  ನಿರ್ಮಾಣ ಮಾಡಲಿದೆಂದು ತಿಳಿಸಿದರು.
ಈ ವೇಳೆ ಸಂಘದ  ಖಜಾಂಚಿ ಹೇಮಚಂದ್ರರೆಡ್ಡಿ, ರಾಜ್ಯ ಸಂಘದ ಉಪಾಧ್ಯಕ್ಷ ಲಕ್ಷ್ಮಣರೆಡ್ಡಿ,  ನಿರ್ದೇಶಕರಾದ ಬಾಬುರೆಡ್ಡಿ ಭೈರತಿ, ರಾಜಾರೆಡ್ಡಿ, ಪ್ರಭಾಕರರೆಡ್ಡಿ, ಶಾಂತರಾಜ್, ಗಣಪಾಲ್ ಐನಾಥರೆಡ್ಡಿ, ಸಿದ್ದಮ್ಮನಹಳ್ಳಿ ತಿಮ್ಮಾರೆಡ್ಡಿ ಮೊದಲಾದವರು ಇದ್ದರು.