
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಸೆ.18: ನಗರದ ವೀರಶೈವ ವಿದ್ಯಾವರ್ಧಕ ಸಂಘದ ಅಲ್ಲಂ ಸುಮಂಗಳಮ್ಮ ಮಹಿಳಾ ಕಾಲೇಜಿನ ಸುವರ್ಣ ಮಹೋತ್ಸವ ಸಮಾರಂಭ ಸೆ.21 ಮತ್ತು 22 ರಂದು ಕಾಲೇಜಿನ ಆವರಣದಲ್ಲಿ ಹಮ್ಮಿಕೊಂಡಿದೆ.
ಈ ಕುರಿತು ಇಂದು ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಟಿಯಲ್ಲಿ , ಸಂಘದ ಖಜಾಂಚಿ ಬೈಲುವದ್ದಿಗೇರಿ ಎರ್ರಿಸ್ವಾಮಿ, ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷೆ ಕಾತ್ಯಾಯಿನಿ ಮರಿದೇವಯ್ಯ,
ತಿಳಿಸಿದರು.
ಕೇವಲ 164 ವಿದ್ಯಾರ್ಥಿನಿಯರೊಂದಿಗೆ 1969ರಲ್ಲಿ ಆರಂಭಗೊಂಡ, ಈ ಕಾಲೇಜಿನಲ್ಲಿ ಈಗ 2500 ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಅಭ್ಯಾಸ ಮಾಡುತ್ತಿದ್ದು. ಅಕ್ಕಮಹಾದೇವಿ ಮಹಿಳಾ ವಿವಿಗೆ ಸಂಲಗ್ನತೆಯನ್ನು ಹೊಂದಿದೆ. ಎಂಕಾಂ ಸ್ನಾತಕೋತ್ತರ ಪದವಿಯನ್ನು ಸಹ ಇಲ್ಲಿ ಭೋದಿಸಲಾಗುತ್ತಿದೆ.
ವಿದ್ಯಾರ್ಥಿನಿಯರು ಪದವಿ ಪಡೆಯಲು ಬೇರೆ ಕಡೆ ಹೋಗುವುದನ್ನು ತಪ್ಪಿಸಲು ಈ ಮಹಿಳಾ ವಿದ್ಯಾಲಯ ಅರಂಭ ಮಾಡಿತು. ಇಲ್ಲಿವರೆಗೆ 200 ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ರ್ಯಾಂಕ್ ಪಡೆದಿದ್ದಾರೆ.
ಈ ಕಾಲೇಜಿಗೆ ಸರ್ಕಾರದಿಂದ 54 ಉಪನ್ಯಾಸಕ ಹುದ್ದೆಗಳು ಆದರೆ ಈಗ ಇರುವುದು 14 ಮಾತ್ರ. ಉಳಿದಂತೆ 60 ಅರೆಕಾಲಿಕ ಉಪನ್ಯಾಸಕರಿದ್ದಾರೆಂದು ಖಜಾಂಚಿ ಬೈಲು ವದ್ದೀಗೇರಿ ಎರ್ರಿಸ್ವಾಮಿ ಹೇಳಿದರು
2015 ರಿಂದ ಹುದ್ದೆಗಳನ್ನು ಸರ್ಕಾರ ಮಂಜೂರು ಮಾಡುತ್ತಿಲ್ಲ. ಒಟ್ಟಾರೆ ಸಂಘದಲ್ಲಿ 108 ಹುದ್ದೆಗಳು ಖಾಲಿ ಇವೆ ಎಂದರು.
ಸೆ.20 ರಂದು ಬೆಳಿಗ್ಗೆ ನಗರದ ಬಸವ ಭವನದಿಂದ ವಿದ್ಯಾರ್ಥಿಗಳು, ಸಿಬ್ಬಂದಿ ಮತ್ತು ಸಂಘದ ಸದಸ್ಯರು, ಪದಾಧಿಕಾರಿಗಳೊಂದಿಗೆ ಶೋಭಾ ಯಾತ್ರೆ ಹಮ್ಮಿಕೊಂಡಿದೆ.
ಸೆ. 21 ರಂದು ಬೆಳಿಗ್ಗೆ 10 ಕ್ಕೆ ಉದ್ಘಾಟನಾ ಸಮಾರಂಭ ಉಜ್ಜಯಿನಿ ಪೀಠದ ಸಿದ್ದಲಿಂಗ ಶ್ರೀಗಳು, ಎಮ್ಮಿಗನೂರಿನ ವಾಮದೇವ ಮಹಾಂತ ಶ್ರೀಗಳು ಸಾನಿಧ್ಯವಹಿಸಲಿದ್ದಾರೆ.
ಸಂಸದ ಇ.ತುಕರಾಂ ಸಮಾರಂಭವನ್ನು ಉದ್ಘಾಟನೆ ಮಾಡಲಿದ್ದಾರೆ. ಸಂಘದ ಅಧ್ಯಕ್ಷ ಡಾ ಕಣೇಕಲ್ ಮಹಾಂತೇಶ್ ಅಧ್ಯಕ್ಷತೆವಹಿಸಲಿದ್ದಾರೆ.
ಅಕ್ಕಹಾದೇವಿ ವಿವಿಯ ಕುಲಪತಿ ಪ್ರೊ. ವಿಜಯಾ ಬಿ. ಕೋರಿಶೆಟ್ಟಿ, ಜಯದೇವ ಆಸ್ಪತ್ರೆಯ ಪ್ರಾಧ್ಯಾಪಕರಾದ ಡಾ|| ವಿಜಯಲಕ್ಷ್ಮಿ ಬಾಳೆಕುಂದ್ರಿ, ಮೇಯರ್ ಪಿ.ಗಾದೆಪ್ಪ, ವಿಧಾನ ಪರಿಷತ್ ಸದಸ್ಯರಾದ ವೈ.ಎಂ.ಸತೀಶ್, ಡಾ. ಚಂದ್ರಶೇಖರ ಪಾಟೀಲ್, ಶಶೀಲ್ ಜಿ.ನಮೋಶಿ ಶಾಸಕರಾದ ಲತಾ ಮಲ್ಲಿಕಾರ್ಜುನ,
ತೊಗರಿ ವೀರಪ್ಪನವರ ವಂಶಸ್ಥರಾದ ಚಂದ್ರಶೇಖರ ಪಾಶ್ಚಾಪುರ ಅವರು ಆಗಮಿಸಲಿದ್ದು.
“ಸುವರ್ಣ ಸಿರಿ”- ಸ್ಮರಣ ಸಂಚಿಕೆಯನ್ನು ಅಲ್ಲಂ ವೀರಭದ್ರಪ್ಪ ಮತ್ತು ಅಲ್ಲಂ ಸುನಂದಾ ಇವರು ಬಿಡುಗಡೆ ಮಾಡಲಿದ್ದಾರೆ.
ಅಂದು ಸಂಜೆ 4.30 ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಿವೃತ್ತ ನ್ಯಾಯಮೂರ್ತಿ ಮಂಜುಳಾ ಚೆಲ್ಲೂರು ಉದ್ಘಾಟನೆ ಮಾಡಲಿದ್ದಾರೆ, ಎಸ್ಪಿ ಡಾ.ಸುಮನ್ ಡಿ.ಪೆನ್ನೇಕರ್, ಪಾಲಿಕೆಯ ಆಯುಕ್ತ ಪಿ.ಎಸ್.ಮಂಜುನಾಥ, ಉದ್ಯಮಿ ಗಾಲಿ ಲಕ್ಷ್ಮೀ ಅರುಣಾ ಸೇರಿದಂತೆ ಸಂಘದ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ.
ಶಾಲೆಯ ಹಳೇ ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಡಲಿದ್ದು. ನಂತರ ಸಂಜೆ 6.30ರಿಂದ 9.30ರವರೆಗೆ “ಗಾಯನ ಸುಧೆ” ಶ್ರೀ ರಾಮಚಂದ್ರ ಜಿ. ಹಡಪದ್ ಕಲಾತಂಡದಿಂದ ನಡೆಯಲಿದೆ.
ಸೆ.22 ಬೆಳಿಗ್ಗೆ 10 ಗಂಟೆಗೆ ಕೊಟ್ಟೂರು ಸಂಸ್ಥಾನದ ಬಸವಲಿಂಗಸ್ವಾಮಿಗಳು ಸಾನಿಧ್ಯದಲ್ಲಿ ವಿವಿಧ ಮಠಾಧೀಶರು ಪಾಲ್ಗೊಳ್ಳಲಿದ್ದಾರೆ. ಗುರುವಂದನ ಕಾರ್ಯಕ್ರಮ ನಿವೃತ್ತ ಪ್ರಾಂಶುಪಾಲ ಪಿ.ಗುರುಬಸಪ್ಪ ಅಧ್ಯಕ್ಷತೆಯಲ್ಲಿ ನಡೆಯಲಿದೆ. ನಗರದ ಮಾಜಿ ಶಾಸಕ ಜಿ. ಸೋಮಶೇಖರ ರೆಡ್ಡಿ ಮೊದಲಾದವರು ಪಾಲ್ಗೊಳ್ಳಲಿದ್ದಾರೆ.ಡಾ. ಮೈತ್ರೇಯಿಣಿ ಗದಿಗೆಪ್ಪಗೌಡರ, ಸದಸ್ಯರು, ಕರ್ನಾಟಕ ಸಾಹಿತ್ಯ ಅಕಾಡೆಮಿ, ಇವರಿಂದ ವಿಶೇಷ ಉಪನ್ಯಾಸವಿದೆ.
ಸಂಜೆ 4.30 ಕ್ಕೆ ಸಮಾರೋಪ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಜನಪ್ರತನಿಧಿಗಳು, ಗಣ್ಯರುಪಾಲ್ಗೊಳ್ಳಲಿದ್ದು. ನಂತರ ವಿದ್ಯಾರ್ಥಿನಿಯರಿಂದ ಮತ್ತು ನಾಡಿನ ಖ್ಯಾತ ಕಲಾವಿದರಿಂದ ಸಂಗೀತ, ನೃತ್ಯ, ಸೇರಿದಂತೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಸಂಘದ ಸಹ ಕಾರ್ಯದರ್ಶಿ ಯಾಳ್ಪಿ ಮೇಟಿ ಪಂಪನಗೌಡ, ಕಾಲೇಜು ಆಡಳಿತ ಮಂಡಳಿಯ ಸದಸ್ಯ ಜೆ.ಎಂ ಪರ್ವತೀಶ, ಸಂಘದ ಆಜೀವ ಸದಸ್ಯ ಐಎಂ ಮಹೇಶ್ ಪ್ರಾಂಶುಪಾಲರಾದ ದೂಪಂ ಸತೀಶ್, ಡಾ. ಗೋವಿಂದರಾಜುಲು ಇದ್ದರು.
























