
ಸಂಜೆವಾಣಿ ವಾರ್ತೆ
ಹನೂರು.ಏ.4:- ಸುಳ್ವಾಡಿ ಸಂತ್ರಸ್ತರಿಗೆ ಪ್ರತಿ ತಿಂಗಳು ನೀಡುತ್ತಿದ್ದoತಹ ಆಹಾರ ಕಿಟ್ ಇದೀಗ ಕೊಡುವುದನ್ನ ನಿಲ್ಲಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಡಿ.ಎಸ್.ಎಸ್ ಸಂಘಟನೆ ಮೈಸೂರು ವಿಭಾಗೀಯ ಸಂಚಾಲಕ ಸಿದ್ದರಾಜು ಅವರು ಅಧಿಕಾರಿಗಳು ಆಹಾರ ಕಿಟ್ ಕೊಡುವುದನ್ನು ನಿಲ್ಲಿಸದೆ ಮತ್ತೆ ಆಹಾರ ಕಿಟ್ ನೀಡುವುದನ್ನು ಮುಂದುವರಿಸಬೇಕು ಎಂದು ತಿಳಿಸಿದರು.
ಪಟ್ಟಣದ ಲೋಕೋಪಯೋಗಿ ಇಲಾಖೆ ವಸತಿಗೃಹದಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ನಂತರ ಅವರು ಮಾತನಾಡಿದ ಅವರು ಇಡೀ ರಾಜ್ಯವೇ ಬೆಚ್ಚಿ ಬಿದ್ದಿದ್ದಂತಹ ಘಟನೆ ಸುಲುವಾಡಿ ಘಟನೆ ಇಲ್ಲಿ ಅನೇಕರು ಇಂದಿಗೂ ಸಹ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.
ಇಂತಹ ಜನರಿಗೆ ಸಂತ್ರಸ್ತರಿಗೆ ಸರ್ಕಾರ ಆಹಾರ ಕಿಟ್ ನೀಡುತ್ತಿದ್ದು ಇದೀಗ ಆಹಾರಕ್ಕೆ ನೀಡುವುದನ್ನು ನಿಲ್ಲಿಸಿದ್ದಾರೆ. ಹಾಗಾಗಿ ಅಂತಹ ಸಂತ್ರಸ್ತರಿಗೆ ಆಹಾರ ಕಿಟ್ ನೀಡುವುದನ್ನು ಯಾವುದೇ ಕಾರಣಕ್ಕೂ ನಿಲ್ಲಿಸಬಾರದು ಮುಂದುವರಿಸಬೇಕು. ಜೊತೆಗೆ ಅವರಿಗೆ ಈಗಾಗಲೇ ನಿವೇಶನ ಕೊಡುವಂತೆ ಅನೇಕ ರೀತಿಯ ಪ್ರಯತ್ನ ನಡೆದಿದ್ದು ಆದಷ್ಟು ಬೇಗ ಸಂತ್ರಸ್ತರಿಗೆ ನಿವೇಶನವನ್ನು ಏಪ್ರಿಲ್ 14 ರೊಳಗೆ ಕೊಡಲು ಸರ್ಕಾರ ಮತ್ತು ಅಧಿಕಾರಿಗಳು ಮುಂದಾಗಬೇಕು ಎಂದರು.
ಹನೂರು ತಾಲೂಕು ವ್ಯಾಪ್ತಿಯಲ್ಲಿ ದಲಿತರ ಮೇಲೆ ನಡೆಯುವಂತಹ ದೌರ್ಜನ್ಯಗಳನ್ನು ತಡೆಗಟ್ಟು ಮೂಲಕ ದಲಿತರಿಗೆ ಇಲ್ಲದಿರುವ ಸ್ಮಶಾನ ವ್ಯವಸ್ಥೆಯನ್ನು ಕಲ್ಪಿಸಲು ಅಧಿಕಾರಿಗಳಿಗೆ ಮನವರಿಕೆ ಮಾಡಿ ಈಗಾಗಲೇ ಜಿ ಆರ್ ನಗರ ಹಾಗೂ ಅಂಬಿಕಾಪುರ ವಡಕೆ ಹಳ್ಳ ಗ್ರಾಮಗಳಿಗೆ ಸ್ಮಶಾನ ಮಂಜೂರು ಮಾಡಲಾಗಿದೆ. ಉಳಿದಂತೆ ನಮ್ಮ ಸಮುದಾಯದ ಜನರ ಮೇಲೆ ಯಾವುದೇ ರೀತಿಯ ದೌರ್ಜನ್ಯಗಳಾದರೂ ಮೊದಲ ಸ್ಥಾನದಲ್ಲಿ ಡಿ.ಎಸ್.ಎಸ್ ನ್ಯಾಯ ಕೊಡುವಲ್ಲಿ ಸದಾ ಮುಂದಿರುತ್ತದೆ ಎಂದು ತಿಳಿಸಿದರು.
ಬಾಬಾ ಸಾಹೇಬರ ಜನ್ಮದಿನಾಚರಣೆಯನ್ನು ಡಿ.ಎಸ್.ಎಸ್ ವತಿಯಿಂದ ಸಂತೆಮರಳ್ಳಿ ಗ್ರಾಮದಲ್ಲಿ ಅದ್ದೂರಿಯಾಗಿ ಆಚರಣೆ ಮಾಡಲು ನಿರ್ಧಾರ ಮಾಡಲಾಗಿದ್ದು ಈ ಭಾಗದ ಎಲ್ಲಾ ನಮ್ಮ ಸಮುದಾಯದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಬಾಬಾ ಸಾಹೇಬ್ರ ಜನ್ಮದಿನ ಸರಣಿಯನ್ನು ಆಚರಣೆಗೆ ಸಹಕಾರ ನೀಡಬೇಕೆಂದು ಮನವಿ ಮಾಡಿದರು. ಜೊತೆಗೆ ಕೊರಮ, ಲಂಬಾಣಿ, ಭೋವಿ ಸೇರಿದಂತೆ ಇನ್ನಿತರ ಸಮುದಾಯದ ಜನರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಕಾರ್ಯಕ್ರಮದ ಯಶಸ್ವಿಗೆ ಸಹಕಾರ ನೀಡಬೇಕು ಎಂದು ತಿಳಿಸಿದರು.
ಇದೆ ಸಂದರ್ಭದಲ್ಲಿ ಚೇತನ ಬುದ್ಧ ವಿಹಾರದ ಕಾರ್ಯದರ್ಶಿ ಪ್ರೇಮ ಕುಮಾರ್, ಡಿ.ಎಸ್.ಎಸ್ ತಾಲೂಕು ಅಧ್ಯಕ್ಷ ಮಹದೇಶ್, ಮುಖಂಡರಾದ ಚಿಕ್ಕತಾಯಿ, ನಾಗರಾಜು, ಮಾರಿಯಪ್ಪ, ಭಾಗ್ಯಮ್ಮ, ನಿರ್ಮಲ ಕುಮಾರಿ, ಹಿಂಡಯ್ಯ, ಮುರುಗೇಶ್, ಸಂಘಟನಾ ಸಂಚಾಲಕರಾಗಿ ನೂತನವಾಗಿ ದೇವರಾಜು, ಕುಮಾರ್, ದಿವಾನ, ಪ್ರಸಾದ್ ಸೇರಿದಂತೆ ಇನ್ನಿತರರು ಇದ್ದರು.























