Home ಜಿಲ್ಲೆ ಮಂಗಳೂರು ಸುಳ್ಳುಗಳಿಂದಲೇ ಶಾಸಕರ ಬಟ್ಟೆ ಬಿಚ್ಚುತ್ತೇನೆ- ಛಲವಾದಿ ನಾರಾಯಣಸ್ವಾಮಿ

ಸುಳ್ಳುಗಳಿಂದಲೇ ಶಾಸಕರ ಬಟ್ಟೆ ಬಿಚ್ಚುತ್ತೇನೆ- ಛಲವಾದಿ ನಾರಾಯಣಸ್ವಾಮಿ

ಪುತ್ತೂರು; ಪರಿಷ್ಕರಣೆಗೊಂಡ ವಿಬಿಜಿರಾಮ್‌ಜಿ ಕಾಯ್ದೆಯ ಪ್ರಕಾರ ಮುಂದೆಯೂ ಕಾಮಗಾರಿಗಳನ್ನು ಗ್ರಾಪಂಗಳಲ್ಲಿಯೇ ನಿರ್ಧರಿಸಲಾಗುತ್ತದೆ. ಯೋಜನೆಯ ಬಗ್ಗೆ ಕಾಂಗ್ರೇಸಿಗರು ಸುಳ್ಳು ಹೇಳುತ್ತಿದ್ದಾರೆ. ಶಾಸಕ ಅಶೋಕ್ ರೈ ಅವರೇ ನಿಮಗೆ ತಾಕತ್ತಿದ್ದರೆ ಈ ವೇದಿಕೆಗೆ ಬನ್ನಿ. ನಿಮ್ಮ ಒಂದೊಂದು ಸುಳ್ಳಿನಿಂದಲೇ ನಿಮ್ಮ ಬಟ್ಟೆ ಬಿಚ್ಚುತ್ತೇನೆ. ಇಷ್ಟು ಲಘುವಾಗಿ ಜನರನ್ನು ಪರಿಗಣಿಸಬೇಡಿ. ನಿಮ್ಮ ಸುಳ್ಳುಗಳನ್ನು ನಂಬುವಂತಹ ಜನ ಈಗ ಉಳಿದಿಲ್ಲ ಎಂದು ವಿಧಾನಪರಿಷತ್ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದರು.
ಶನಿವಾರ ವಿಬಿಜಿ ರಾಮ್ ಜಿ ಕಾಯ್ದೆಯ ಅರಿವು ಹಾಗೂ ಉಪ್ಪಿನಂಗಡಿಯಲ್ಲಿ ಪಾದಯಾತ್ರೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನಿಮ್ಮ ಪ್ಯಾಕೇಜ್, ನಿಮ್ಮ ಗಂಜಿಕೇಂದ್ರಗಳಲ್ಲಿ ಕೆಲಸ ಮಾಡುವವರು ನಿಮ್ಮನ್ನು ಒಪ್ಪಬಹುದು. ನಾವು ಜನರಿಗೆ ಗೌರವ ಕೊಡುತ್ತೇವೆ. ನಾವು ನಮ್ಮ ಕಾರ್ಯಕರ್ತರನ್ನು, ಬೆಂಬಲಿಗರನ್ನು ಗಂಜಿ ಕೇಂದ್ರಗಳಲ್ಲಿ ಉಳಿಸುವುದಿಲ್ಲ. ಸರ್ವರನ್ನೂ ಒಟ್ಟುಗೂಡಿಸಿಕೊಂಡು ಹೋಗುವ ಕೆಲಸವನ್ನು ಮೋದಿ ಮಾಡುತ್ತಿದ್ದಾರೆ. ಆದರೆ ಕಾಂಗ್ರೇಸ್ ನವರು ಅಲ್ಪಸಂಖ್ಯಾತರ ತಲೆಯಲ್ಲಿ ಹುಳ ಬಿಡುತ್ತಾರೆ. ನಾವಿಲ್ಲದಿದ್ದರೆ ನೀವು ಬದುಕೋದಿಲ್ಲ ಎನ್ನುತ್ತಾರೆ. ಒಂದು ವೇಳೆ ಕಾಂಗ್ರೇಸ್ ದೇಶದಲ್ಲಿ ನಾಶವಾಯಿತು. ಅಲ್ಪಸಂಖ್ಯಾತರು ಇಲ್ಲಿ ಬದುಕುವುದಿಲ್ವಾ. ಅವರನ್ನು ಅರಬ್ಬೀ ಸಮುದ್ರದಲ್ಲಿ ಯಾರಾದರೂ ಹಾಕ್ತಾರಾ ಹಾಕೋದಿಲ್ಲ. ನಾವು ಮುಸಲ್ಮಾನರ ಕೈಸ್ತರ ವಿರೋಧಿಗಳಲ್ಲ. ದೇಶಕ್ಕಾಗಿ ಮೊದಲು ಆಮೇಲೆ ಸಮಾಜಕ್ಕಾಗಿ ನಂತರ ಕುಟುಂಬಕ್ಕಾಗಿ ಬದುಕಬೇಕು ಎನ್ನುವ ಜನ ನಾವು. ಈ ತತ್ವ ಕಾಂಗ್ರೇಸಿನಲ್ಲಿಲ್ಲ. ಅದು ದೆಹಲಿಯಲ್ಲಿರುವ ಒಂದುಕುಟುಂಬಕ್ಕಾಗಿ ಗುಲಾಮಗಿರಿ ಮಾಡುತ್ತದೆ. ಬಿಜೆಪಿ ಎಂದಿಗೂ ಗುಲಾಮಗಿರಿ ಮಾಡುವುದಿಲ್ಲ ಎಂಬುವುದನ್ನು ಜನರು ಅರ್ಥ ಮಾಡಿಕೊಳ್ಳಬೇಕು ಎಂದರು.
ಕಾಂಗ್ರೆಸ್ ಒಂದೇ ಸಮಸ್ಯೆ ಕೇಂದ್ರ ಸರ್ಕಾರ ಮನರೇಗಾ ಕಾಯ್ದೆಯಲ್ಲಿ ಬದಲಾವಣೆ ಮಾಡಿರೋದನ್ನ ಸಹಿಸಲು ಆಗುತ್ತಿಲ್ಲ. ಆ ಕಾರಣಕ್ಕಾಗಿ ಕಾಂಗ್ರೆಸ್ ಹೊಸ ಬದಲಾವಣೆಯನ್ನು ವಿರೋಧಿಸುತ್ತಿದೆ ಮಹಾತ್ಮ ಗಾಂಧಿಯ ಹೆಸರಿಟ್ಟು ಕಾಂಗ್ರೆಸ್ ನವರು ಭ್ರಷ್ಟಾಚಾರ ಮಾಡಿದ್ದಾರೆ ಗಾಂಧಿಯ ಹೆಸರಿನಲ್ಲಿ ಭ್ರಷ್ಟಾಚಾರ ಆಗೋದನ್ನ ನಾವು ಸಹಿಸಲ್ಲ ಮಹಾತ್ಮಾಗಾಂಧಿಗೆ ಅವರದೇ ಆದ ಗೌರವವಿದೆ ಆದರೆ ಇಂದು ಕೆಲವು ನಕಲಿ ಗಾಂಧಿಗಳಿದ್ದಾರೆ. ಇವರು ಗಾಂಧಿ ಹೆಸರಿಗೆ ಕಳಂಕ ತರೋ ಕೆಲಸ ಮಾಡುತ್ತಿದ್ದಾರೆ. ಇಂದು ರಾಮನ ಹೆಸರಲ್ಲಿಯೇ ಕಾಯ್ದೆಯಾಗಿದೆ. ೧೨೫ ಮಾನವದಿನಗಳನ್ನು ನೀಡಲಾಗಿದೆ. ಅದನ್ನು ಸಹಿಸಲು ಕಾಂಗ್ರೇಸಿಗೆ ಆಗುತ್ತಿಲ್ಲ. ಕಾಂಗ್ರೇಸ್ ಉದ್ಯೋಗಖಾತ್ರಿ ಯೋಜನೆಯ ಹಣವನ್ನು ನುಂಗಿಹಾಕಿದೆ ಎಂದವರು ಆರೋಪಿಸಿದರು.
ಪಾದಯಾತ್ರೆಯಲ್ಲಿ ವಿಧಾನಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಉಪಾಧ್ಯಕ್ಷ ಪ್ರಸನ್ನ ಕುಮಾರ್ ಮಾರ್ತ, ಮಾಜಿ ಶಾಸಕ ಸಂಜೀವ ಮಠಂದೂರು, ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು, ನಗರ ಮಂಡಲ ಅಧ್ಯಕ್ಷ ಶಿವಕುಮಾರ್ ಪಿ.ಬಿ, ಬಿಜೆಪಿ ಮುಖಂಡರಾದ ಆರ್.ಸಿ.ನಾರಾಯಣ, ಪ್ರೇಮಾನಂದ ಶೆಟ್ಟಿ ಸುನೀಲ್ ಕುಮಾರ್ ದಡ್ಡು, ದೀಕ್ಷಾ ಪೈ, ವಸಂತಲಕ್ಷ್ಮಿ, ಡಾ.ಕೃಷ್ಣಪ್ರಸನ್ನ ಮತ್ತಿತರರು ಭಾಗವಹಿಸಿದ್ದರು.