ಸುಳ್ಯ ಸೈಂಟ್ ಜೋಸೆಫ್ ಸ್ಕೂಲ್ ನಲ್ಲಿ ಈದ್ ಮಿಲಾದ್ ಆಚರಣೆ

ಎಲ್ಲಾ ಧರ್ಮಗಳ ಆದರ್ಶದಿಂದ ಮಕ್ಕಳ ಮಧ್ಯೆ ಸಹೋದರತೆ ನೆಲೆ – ಕೆ. ಎಂ. ಮುಸ್ತಫ
ಸುಳ್ಯ:ಸುಳ್ಯ ಸೈಂಟ್ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪ್ರವಾದಿ ಮುಹಮ್ಮದ್ ಮುಸ್ತಫ ಅವರ ಜನ್ಮ ದಿನಾಚರಣೆ ಅಂಗವಾಗಿ ಈದ್ ಮಿಲಾದ್ ಕಾರ್ಯಕ್ರಮ ವಿಶಿಷ್ಟ ರೀತಿಯಲ್ಲಿ ನಡೆಯಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಸುಳ್ಯ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಕೆ. ಎಂ. ಮುಸ್ತಫ ಮಾತನಾಡಿ ಪೈಗಂಬರರು ಶಿಕ್ಷಣಕ್ಕೆ ಹೆಚ್ಚು ಆದ್ಯತೆ ಕೊಟ್ಟವರು, ಜೀವನದುದ್ದಕ್ಕೂ ತಂದೆ ತಾಯಿ ಮತ್ತು ಗುರುಗಳಿಗೆ ಪ್ರಾರ್ಥಿಸಲು, ಗೌರವಿಸಲು ಕಲಿಸಿ ಕೊಟ್ಟವರು, ಎಲ್ಲಾ ಧರ್ಮಗಳ ತತ್ವ, ಆದರ್ಶಗಳನ್ನು ತಿಳಿದುಕೊಂಡಾಗ ಸಹೋದರತೆ ಮತ್ತು ಸೌಹಾರ್ದತೆ ಗಟ್ಟಿಗೊಳ್ಳುತ್ತದೆ, ಸೇವೆಯೇ ಧರ್ಮದ ಅಸ್ಮಿತೆ ಎಂದರು
ಮುಖ್ಯ ಶಿಕ್ಷಕಿ ಸಿಸ್ಟರ್ ಮೇರಿ ಸ್ಟೆಲ್ಲಾ, ರಕ್ಷಕ ಶಿಕ್ಷಕ ಸಮಿತಿ ಉಪಾಧ್ಯಕ್ಷೆ ಸುನಿತಾ ಮೊಂತರೊ, ಚರ್ಚ್ ಪರಿಪಾಲನಾ ಸಮಿತಿಯ ನವೀನ್ ಮಚಾದೊ ಉಪಸ್ಥಿತರಿದ್ದರು
ವಿದ್ಯಾರ್ಥಿಗಳಿoದ ಖವ್ವಾಲಿ ಗಾಯನ, ಪ್ರವಾದಿ ಪ್ರಕೀರ್ತನೆ, ಗಮನ ಸೆಳೆಯಿತು. ಶಿಕ್ಷಕಿ ಚೇತನಾ ಕಾರ್ಯಕ್ರಮ ನಿರ್ವಹಿಸಿದರು.