Home ಜಿಲ್ಲೆ ಮಂಗಳೂರು ಸುಳ್ಯ ಶಾಸಕಿ ಪ್ರಯಾಣಿಸುತ್ತಿದ್ದ ಕಾರು ಅಪಘಾತ-ಅಪಾಯದಿಂದ ಪಾರು

ಸುಳ್ಯ ಶಾಸಕಿ ಪ್ರಯಾಣಿಸುತ್ತಿದ್ದ ಕಾರು ಅಪಘಾತ-ಅಪಾಯದಿಂದ ಪಾರು

ಸುಳ್ಯ:ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು ಪ್ರಯಾಣಿಸುತ್ತಿದ್ದ ಕಾರು ನಿಂತಿಕಲ್ಲಿನ ಮುಚ್ಚಿಲ ಎಂಬಲ್ಲಿ ಅಪಘಾತಕ್ಕೀಡಾದ ಘಟನೆ ನಡೆದಿದ್ದು, ಶಾಸಕರು ಗಾಯಗಳಿಲ್ಲದೆ ಪಾರಾಗಿದ್ದಾರೆ.
ಕರಿಕ್ಕಳ ನಿಂತಿಕಲ್ಲು ಮಧ್ಯೆ ಇರುವ ಮುಚ್ಚಿಲ ಎಂಬಲ್ಲಿ ಶಾಸಕರ ಕಾರಿನ ಎದುರಿನಿಂದ ಹೋಗುತ್ತಿದ್ದ ಕಾರು ಸಡನ್ ಬ್ರೇಕ್ ಹಾಕಿದ ಹಿನ್ನೆಲೆಯಲ್ಲಿ ಶಾಸಕರ ಇನ್ನೋವಾ ಕಾರು ಎದುರಿನ ಕಾರಿಗೆ ಢಿಕ್ಕಿ ಹೊಡೆದಿದ್ದು ಕಾರಿನ ಮುಂಭಾಗ ಜಖಂಗೊಂಡಿದೆ. ಕಾರಿನಲ್ಲಿದ್ದ ಶಾಸಕಿ ಮತ್ತು ಚಾಲಕ ಯಾವುದೇ ಗಾಯಗಳಿಲ್ಲದೆ ಅಪಾಯದಿಂದ ಪಾರಾಗಿದ್ದಾರೆ.