
ಸುಳ್ಯ:ಸುಳ್ಯ ನಗರದ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ದ.ಕ. ಜಿಲ್ಲಾಧಿಕಾರಿ ದರ್ಶನ್.ಹೆಚ್.ವಿ. ಅವರಿಗೆ ನಗರ ಕಾಂಗ್ರೆಸ್ ಮನವಿ ಮಾಡಿದೆ.
ಸುಳ್ಯಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಅವರಿಗೆ ನಗರ ಕಾಂಗ್ರೆಸ್ ಅಧ್ಯಕ್ಷ ಎಂ. ಜೆ. ಶಶಿಧರ್ ರವರ ನೇತೃತ್ವದ ನಿಯೋಗ ಭೇಟಿ ಮಾಡಿ ಸುಳ್ಯ ನಗರದ ಪ್ರಮುಖ ಸಮಸ್ಯೆಗಳಾದ ಕಸ ವಿಲೇವಾರಿಯ ಅವ್ಯವಸ್ಥೆಯ ಬಗ್ಗೆ ಗಮನ ಸೆಳೆದರು. ನಗರ ಪಂಚಾಯಿತಿ ಆವರಣದಲ್ಲಿ ಮತ್ತೆ ಡಂಪಿಂಗ್ ಯಾರ್ಡ್ ಮಾಡಿರುವುದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ ಎಂದು ಹೇಳಿದರು.
ಅಮೃತ್ ೨.೦ ಯೋಜನೆಗಾಗಿ ಅಗೆದ ರಸ್ತೆ ಇನ್ನೂ ನಾದುರಸ್ತಿ ಯಲ್ಲಿದ್ದು ಮುಖ್ಯ ರಸ್ತೆಯಲ್ಲಿ ಜನ ನಡೆದಾಡಲು ಸಾಧ್ಯವಿಲ್ಲದ ಸ್ಥಿತಿ ನಿರ್ಮಾಣವಾಗಿದೆ ದುರಸ್ಥಿಗೆ ಆದೇಶ ನೀಡಬೇಕು, ೮ ವರ್ಷಗಳಿಂದ ನಗರ ವ್ಯಾಪ್ತಿಯಲ್ಲಿ ನಿವೇಶನ ರಹಿತರಿಗೆ ಒಂದೇ ಒಂದು ನಿವೇಶನ ನೀಡಿಲ್ಲ, ನಗರ ಆಶ್ರಯ ಸಮಿತಿ ಸಭೆ ಕರೆಯಲು ಮೀನ ಮೇಷ ಎನಿಸುತ್ತಿದ್ದಾರೆ, ನಗರ ವ್ಯಾಪ್ತಿಯಲ್ಲಿ ಮಳೆಗಾಲ ಮುಗಿಯುತ್ತಾ ಬಂದರೂ ರಸ್ತೆ, ಚರಂಡಿ ದುರಸ್ತಿ ಕಾರ್ಯ ಮಾಡದೆ ನೀರು ರಸ್ತೆಯಲ್ಲೇ ಹರಿದು ಸಣ್ಣ ಮಳೆ ಬಂದರೂ ಜನರ ಜನ ಜೀವನ ಅಸ್ತವ್ಯಸ್ತ ವಾಗುತ್ತಿದೆ. ಇದನ್ನು ಸರಿಪಡಿಸಲು ಕೂಡಲೇ ಆದೇಶ ನೀಡಿ ಎಂದು ವಿನಂತಿಸಲಾಯಿತು.
ಈ ಸಂದರ್ಭದಲ್ಲಿ ಸುಳ್ಯ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಕೆ. ಎಂ. ಮುಸ್ತಫ, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ, ಕೆಡಿಪಿ ಸದಸ್ಯ ಧರ್ಮಪಾಲ ಕೊಯಿಂಗಾಜೆ, ಅಚ್ಚುತ ಮೆಲ್ಕಜೆ, ನಂದರಾಜ ಸಂಕೇಶ್ ಮೊದಲಾದವರು ಉಪಸ್ಥಿತರಿದ್ದರು.


































