ಸುಳ್ಯ : ಆಟೋ ಚಾಲಕರಿಬ್ಬರ ಪರಸ್ಪರ ಹೊಡೆದಾಟ

ಸುಳ್ಯ:ಸುಳ್ಯ ಖಾಸಗಿ ಬಸ್ ನಿಲ್ದಾಣದ ಬಳಿ ಆಟೋರಿಕ್ಷಾ ಚಾಲಕರಿಬ್ಬರು ಪಾಕಿಂಗ್ ವಿಷಯದಲ್ಲಿ ಪರಸ್ಪರ ಹೊಡೆದಾಡಿಕೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಡೆದಿದೆ.
ಆಟೋರಿಕ್ಷಾ ಪಾಕಿಂಗ್ ಜಾಗದಲ್ಲಿ ಪಾಕಿಂಗ್ ವಿಷಯಕ್ಕೆ ಪರಸ್ಪರ ಜಗಳ ಉಂಟಾಗಿ ಮಾತಿಗೆ ಮಾತು ಬೆಳೆದುಕೊಂಡಿದ್ದು ಪರಸ್ಪರ ಕೈಕೈ ಮಿಲಾಯಿಸಿಕೊಂಡಿದ್ದಾರೆ ಎನ್ನಲಾಗಿದೆ. ಘಟನೆಯಿಂದ ಇಬ್ಬರಿಗೂ ಸಣ್ಣಪುಟ್ಟ ಗಾಯವಾಗಿದ್ದು, ಗಾಯಗೊಂಡವರ ಪೈಕಿ ಓರ್ವ ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು ಮತ್ತೋರ್ವ ಸುಳ್ಯದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದುಬಂದಿದೆ. ಘಟನೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.