ಸುಳ್ಯದ ಕುರುಂಜಿ ಭಾಗ್‌ನಲ್ಲಿ ಯುವಕರ ನಡುವೆ ಹೊಡೆದಾಟ; ಇತ್ತಂಡದ ಮೇಲೆ ಪ್ರಕರಣ ದಾಖಲು – ಆರೋಪಿಗಳಿಗೆ ನ್ಯಾಯಂಗ ಬಂಧನ

ಸುಳ್ಯ:ಸುಳ್ಯದ ಕುರುಂಜಿಭಾಗ್ ಸರ್ಕಲ್ ಬಳಿ ಎರಡು ತಂಡದ ಯುವಕರ ನಡುವೆ ಮಾತಿನ ಚಕಮಕಿ ನಡೆದು ಹೊಡೆದಾಟವಾದ ಘಟನೆ ನಡೆದಿದ್ದು, ಇತ್ತಂಡದಲ್ಲಿದ್ದ ಆರೋಪಿಗಳಿಗೆ ನ್ಯಾಯಂಗ ಬಂಧನ ವಿಧಿಸಿದ ಘಟನೆ ನಡೆದಿದೆ.
ಸುಳ್ಯದ ಕುರುಂಜಿಭಾಗ್ ಬಳಿ ಎರಡು ತಂಡದ ಯುವಕರ ನಡುವೆ ಮಾತಿನ ಚಕಮಕಿ ನಡೆದು ಹೊಡೆದಾಟವಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಸುಳ್ಯ ಪೊಲೀಸರು ಯುವಕರನ್ನು ಠಾಣೆಗೆ ಕರೆ ದೊಯ್ದು ವಿಚಾರಣೆ ನಡೆಸಿ ಎರಡು ತಂಡದವರ ಮೇಲೆ ಸುಮೋಟೋ ಪ್ರಕರಣ ದಾಖಲಿಸಿ ರಾತ್ರಿಯೇ ನ್ಯಾಯಾಧಿಶರ ಮುಂದೆ ಹಾಜರು ಪಡಿಸಿದರು. ಈ ವೇಳೆ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಹೊಡೆದಾಟ ನಡೆಸಿದ ಆರೋಪಿಗಳಾದ ಜಯನಗರದ ಮಹಮ್ಮದ್ ರಾಶಿಕ್(೧೯), ಜಯನಗರದ ಮಹಮ್ಮದ್ ಸುನೈಪ್(೨೩) ನಾವೂರಿನ ಅಂಕಿತ್(೨೨), ಜಾಲ್ಸೂರು ಕದಿಕಡ್ಕದ ಕೀರ್ತನ್(೨೧), ಕದಿಕಡ್ಕದ ಆದಿತ್ಯನ್(೨೦) ಕದಿಕಡ್ಕ ಎಂಬುವವರಿಗೆ ನ್ಯಾಯಂಗ ಬಂಧನ ವಿಧಿಸಲಾಗಿದೆ. ಕೆವಿಜಿ ಜಂಕ್ಷನ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಭಯ ಉಂಟಾಗುವ ರೀತಿಯಲ್ಲಿ ಗುಂಪು ಸೇರಿಕೊಂಡು ಸಾಮಾಜಿಕ ಸಾಮರಸ್ಯ ಹದಗೆಡುವ ರೀತಿಯಲ್ಲಿ ಯಾವುದೋ ಕೇಡನ್ನು ಮಾಡುವ ಉದ್ದೇಶದಿಂದ ಹೊಡೆದಾಟ ಮಾಡಿಕೊಂಡಿರುವ ಕಾರಣ ಸುಳ್ಯ ಪೊಲೀಸರು ಸುಮೋಟೋ ಪ್ರಕಾರ ಪ್ರಕರಣ ದಾಖಲಿಸಿದ್ದಾರೆ.