ಸಿ.ಐ.ಟಿ.ಯು ಸಮಿತಿ ವತಿಯಿಂದ ಕೇಂದ್ರ ಸರ್ಕಾರದ ಕಾನೂನು ನೀತಿಯನ್ನು ವಿರೋಧಿಸಿ ಪ್ರತಿಭಟನೆ


ಸಂಜೆವಾಣಿ ವಾರ್ತೆ
ಸಿರುಗುಪ್ಪ :ಮೇ,22-
ನಗರದ ತಾಲ್ಲೂಕು ಸಿ.ಐ.ಟಿ.ಯು ಸಮಿತಿ ವತಿಯಿಂದ ಕೇಂದ್ರ ಸರ್ಕಾರದ ಕಾನೂನು ನೀತಿಯನ್ನು ವಿರೋಧಿಸಿ ಮಹಾತ್ಮ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
 ಸಿ.ಐ.ಟಿ.ಯು ಜಿಲ್ಲಾ ಉಪಾಧ್ಯಕ್ಷ ಎಚ್.ತಿಪ್ಪಯ್ಯ ಮಾತನಾಡಿ, ಕೇಂದ್ರ ಸರ್ಕಾರವು ಈ ಹಿಂದೆ ಇದ್ದ 44 ಕಾರ್ಮಿಕ ಕಾನೂನುಗಳನ್ನು ನಾಲ್ಕು ಕೋಡಗಳಾಗಿ ಪರಿವರ್ತಿಸಿರುವುದು ಕಾರ್ಮಿಕರ ವಿರೋಧಿ ನೀತಿಯಾಗಿದೆ. ಹಳೆಯ ಕಾನೂನುಗಳನ್ನು ಹಾಗೆ ಮುಂದುವರಿಸುವಂತೆ ಒತ್ತಾಯಿಸಿದರು.
ಮಹಾತ್ಮ ಗಾಂಧೀಜಿ ವೃತ್ತದಲ್ಲಿ  ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕಾರ್ಮಿಕರ ನಾಲ್ಕು ಕಾನೂನು ಕೋಡುಗಳ ಪ್ರತಿಗಳಿಗೆ ಬೆಂಕಿ ಹಚ್ಚಿ ಪ್ರತಿಭಟಿಸಿದರು.
ಸಿ ಐ ಟಿ ಯು ಜಿಲ್ಲಾ ಸಹ ಕಾರ್ಯದರ್ಶಿ ಬಿ.ಸುರೇಶ, ಜಿಲ್ಲಾ ಖಜಾಂಚಿ ಬಿ.ಉಮಾದೇವಿ, ತಾಲ್ಲೂಕು ಸಂಚಾಲಕರಾದ ಎಚ್. ಬಿ. ಓಬಳೇಶಪ್ಪ, ಎಂ.ಲಕ್ಷ್ಮಣ, ಎಂ ಹುಲೆಪ್ಪ, ಲತೀಫ್ ಖಾಜ, ಆರ್.ಮಲ್ಲಯ್ಯ ರಮೇಶ, ಖಾಜಾ ಬೀ ಭಾಗವಹಿಸಿದ್ದರು.