ಸಿಬ್ಬಂದಿ ಕೂಡಿ ಹಾಕಿದ್ದಕ್ಕೆ ರೈತರ ಮೇಲೆ ಎಫ್‍ಐಆರ್: ಅರಣ್ಯ ಇಲಾಖೆ ಕ್ರಮಕ್ಕೆ ವ್ಯಾಪಕ ಆಕ್ರೋಶ

ಸಂಜೆವಾಣಿ ವಾರ್ತೆ
ಚಾಮರಾಜನಗರ, ಸೆ.11-
ಹುಲಿ, ಚಿರತೆ ಉಪಟಳಕ್ಕೆ ಬೇಸತ್ತು ಅರಣ್ಯ ಇಲಾಖೆ ಸಿಬ್ಬಂದಿಯನ್ನೇ ಬೋನಿನಲ್ಲಿ ಬಂಧಿಸಿ ಆಕ್ರೋಶ ಹೊರಹಾಕಿದ್ದ ಘಟನೆಗೆ ಸಂಬಂಧಿಸಿದಂತೆ ಐವರು ರೈತರ ಮೇಲೆ ಎಫ್‍ಐಆರ್ ದಾಖಲಾಗಿದೆ. ಇದಕ್ಕೆ ಪರಿಸರವಾದಿಗಳು, ರೈತ ಹೋರಾಟಗಾರರು ತೀವ್ರ ಆಕ್ರೋಶ ಹೊರಹಾಕಿದ್ದಾರೆ.


ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರ ಗ್ರಾಮದ ರಘು, ಪ್ರಸಾದ್, ದೀಪು, ಗಂಗಾಧರ ಸ್ವಾಮಿ ಹಾಗೂ ರೇವಣ್ಣ ಎಂಬುವರ ವಿರುದ್ಧ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಾಗೂ ಜೀವ ಬೆದರಿಕೆ ಹಾಕಿದ ಆರೋಪದಡಿ ಗುಂಡ್ಲುಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಅರಣ್ಯ ಇಲಾಖೆಯ ದೂರೇನು : ಗುಂಡ್ಲುಪೇಟೆ ಬಫರ್ ವಲಯ ವ್ಯಾಪ್ತಿಗೆ ಬರುವ ಬೊಮ್ಮಲಾಪುರ ಗ್ರಾಮದಲ್ಲಿ ಕಾಡುಪ್ರಾಣಿಗಳ ಕೂಂಬಿಂಗ್ ಕಾರ್ಯಾಚರಣೆಗೆ ವಿಶೇಷ ಹುಲಿ ಸಂರಕ್ಷಣಾ ದಳದ ಪ್ಲಟೂನ್-1 ರ ಉಪ ವಲಯ ಅರಣ್ಯಾಧಿಕಾರಿಗಳಾದ ಜ್ಞಾನಶೇಖರ್, ಕಾರ್ತಿಕ್ ಯಾದವ್, ವಿನಯ್, ಗಸ್ತು ಪಾಲಕರಾದ ಬಸವೇಗೌಡ ಹಾಗೂ ಸುಚಿತ್ರಾ ಇಲಾಖೆಯ ವಾಹನದಲ್ಲಿ ಹೋಗುವಾಗ ಅವರನ್ನು ಅಡ್ಡಗಟ್ಟಿದ ಸ್ಥಳೀಯರು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು.


ವಾಹನದ ಚಕ್ರದ ಗಾಳಿ ತೆಗೆದು ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಬಲವಂತವಾಗಿ ಕೆಳಗಿಳಿಸಿ ಪ್ರಾಣಿಗಳ ಸೆರೆಗೆ ಇರಿಸಲಾಗಿದ್ದ ಬೋನಿನೊಳಗೆ ಕೂಡಿ ಹಾಕಿದ್ದಾರೆ. ಬಫರ್ ವಲಯದ ಸಿಬ್ಬಂದಿ ಸಂತೋμï, ಪ್ರವೀಣ್, ಸುಬ್ರಹ್ಮಣ್ಯ, ಮಣಿಕಂಠ, ಶಿವಣ್ಣ, ರಾಜಪ್ಪ, ಬಸವರಾಜು, ರಾಘವೇಂದ್ರ ಅವರನ್ನೂ ಬೋನಿನ ಒಳಗೆ ಕೂಡಿಹಾಕಿ ಬೆದರಿಕೆ ಹಾಕಿದ್ದಾರೆ ಎಂದು ಡಿಆರ್‍ಎಫ್‍ಒ ಜ್ಞಾನಶೇಖರ್ ದೂರು ಕೊಟ್ಟಿದ್ದರು.
ರೈತರ ಮೇಲಿನ ಎಫ್‍ಐಆರ್‍ಗೆ ತೀವ್ರ ಆಕ್ರೋಶ: ರೈತರ ಮೇಲೆ ಎಫ್‍ಐಆರ್ ಹಾಕಿರುವುದಕ್ಕೆ ರೈತ ಸಂಘ ತೀವ್ರ ಆಕ್ರೋಶ ಹೊರಹಾಕಿದೆ. ಬೋನಿಗೆ ಕರು ತಂದು ಕಟ್ಟಿ ನೀರು- ಮೇವು ಕೊಡದೇ ಅರಣ್ಯ ಇಲಾಖೆ ಸಾಯಿಸಿದೆ. ಹುಲಿ ಓಡಾಟವಿದೆ ಎಂದೂ ಹೇಳಿದರೂ ಸ್ಪಂದಿಸದೇ ನಿರ್ಲಕ್ಷ್ಯ ತೋರಿದ್ದಕ್ಕೆ ಲಾಕ್ ಮಾಡಿದ್ದಾರೆ. ರೈತರು ಯಾರಿಗೂ ಜೀವಹಾನಿ ಮಾಡಿಲ್ಲ, ಬೆದರಿಕೆ ಹಾಕಿಲ್ಲ. ಸುಳ್ಳು ಕೇಸ್ ಹಾಕಿ ರೈತರನ್ನು ಸುಮ್ಮನಿರಿಸುತ್ತೇವೆ ಎಂದುಕೊಂಡಿದ್ದರೆ, ರೈತರು ಬಗ್ಗಲ್ಲ ಎಂದು ರೈತ ಮುಖಂಡ ಗುರುಪ್ರಸಾದ್ ಕಿಡಿಕಾರಿದರು.


ದೂರು ಕೊಟ್ಟ ತಕ್ಷಣ ಪೆÇಲೀಸರು ಎಫ್‍ಐಆರ್ ಹಾಕಿದ್ದಾರೆ. ಮುಂದಿನ ದಿನಗಳಲ್ಲಿ ಮೇಕೆ, ಜಾನುವಾರು ಮೃತಪಟ್ಟರೆ ಅರಣ್ಯ ಸಿಬ್ಬಂದಿ ವಿರುದ್ಧ ಅವರು ಅμÉ್ಟೀ ತ್ವರಿತವಾಗಿ ಎಫ್‍ಐಆರ್ ಹಾಕಬೇಕು ಎಂದು ಆಗ್ರಹಿಸಿದರು.


ಪರಿಸರವಾದಿ ಜೋಸೆಫ್ ಹೂವರ್ ಮಾತನಾಡಿ, ಹಲವು ದಿನಗಳ ಹಿಂದೆ ಮಂಗಲ ಸಮೀಪ ಬೆಂಗಳೂರು ಮೂಲದ ವ್ಯಕ್ತಿ ಜಮೀನು ರಕ್ಷಣೆಗೆ ಬ್ಲೇಡ್ ಬೇಲಿ ಹಾಕಿದ್ದನು. ಇದು ಬೆಳಕಿಗೆ ಬಂದು ಆತನಿಂದ ಬ್ಲೇಡ್ ಬೇಲಿ ತೆರವು ಮಾಡಿ ಅಪಾಲಜಿ ಪಡೆದಿದ್ದರು. ಈಗ ಅರಣ್ಯ ಇಲಾಖೆ ನಿರ್ಲಕ್ಷ್ಯಕ್ಕಾಗಿರುವ ಘಟನೆಗೆ ರೈತರ ಮೇಲೆ ಎಫ್‍ಐಆರ್ ಹಾಕಿರುವುದು ಸರಿಯಲ್ಲ. ರೈತರಿದ್ದರμÉ್ಟೀ ಕಾಡು ಎಂಬುದನ್ನು ಅರಣ್ಯ ಇಲಾಖೆ ತಿಳಿದುಕೊಳ್ಳಲಿ. ಅರಣ್ಯ ಇಲಾಖೆಯು ಕಾಡಂಚಿನ ಗ್ರಾಮಸ್ಥರು, ರೈತರ ಜೊತೆ ಉತ್ತಮ ಸಂಬಂಧ- ಸ್ಪಂದನೆ ಇರಿಸಿಕೊಳ್ಳಬೇಕಿದೆ ಎಂದು ಅಭಿಪ್ರಾಯಪಟ್ಟರು.


ಹುಲಿ ಸೆರೆಗೆ ಕೂಂಬಿಂಗ್: ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರ ಗ್ರಾಮದಲ್ಲಿ ಹುಲಿ ಸೆರೆಗೆ ಬಂಡೀಪುರ ಅರಣ್ಯಾಧಿಕಾರಿಗಳು ಕೂಂಬಿಂಗ್ ಆರಂಭಿಸಿದ್ದು, ಸಾಕಾನೆ ಮೂಲಕ ಕಾರ್ಯಾಚರಣೆಗೆ ಇಳಿದಿದ್ದಾರೆ.
ಹುಲಿ ಸೆರೆ ಹಿಡಿಯಲು ಅರಣ್ಯಾಧಿಕಾರಿಗಳು ವಿಫಲರಾದ ಹಿನ್ನೆಲೆ ಆಕ್ರೋಶಗೊಂಡ ರೈತರು ಅರಣ್ಯಾಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಬೋನಿನಲ್ಲಿ ಕೂಡಿ ಹಾಕಿ ಅಸಮಾಧಾನ ಹೊರ ಹಾಕಿದ್ದರು. ಇದಕ್ಕೆ ಮಣಿದ ಎಸಿಎಫ್ ಸುರೇಶ್ ಹಾಗೂ ನವೀನ್ ಕುಮಾರ್ ಕೂಂಬಿಂಗ್ ನಡೆಸಿ ಹುಲಿ ಸೆರೆ ಹಿಡಿಯುವುದಾಗಿ ಭರವಸೆ ನೀಡಿದ್ದರು. ಅದರಂತೆ ಗುಂಡ್ಲುಪೇಟೆ ಬಫರ್ ಜೋನ್ ಅರಣ್ಯಾಧಿಕಾರಿಗಳು ಬುಧವಾರ ಬೆಳಗ್ಗೆಯಿಂದ ಪಾರ್ಥ ಸಾರಥಿ ಎಂಬ ಸಾಕಾನೆಯನ್ನು ಬಳಕೆ ಮಾಡಿಕೊಂಡು ಸಿಎಫ್ ಪ್ರಭಾಕರನ್ ಮಾರ್ಗದರ್ಶನ ಹಾಗೂ ಎಸಿಎಫ್ ನೇತೃತ್ವದಲ್ಲಿ ಸುಮಾರು 30ಕ್ಕೂ ಅಧಿಕ ಅರಣ್ಯ ಸಿಬ್ಬಂದಿ ಮೂಲಕ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಡಿಆರ್‍ಎಫ್‍ಒ ಶಿವಕುಮಾರ್ ಮಾಹಿತಿ ನೀಡಿದರು.


ಸಾಕಾನೆ ಬಳಕೆ ಮಾಡಿಕೊಂಡು ಬೊಮ್ಮಲಾಪುರದ ಕೆ.ಇ.ಬಿ ಆಸುಪಾಸು, ವಡೆಯ್ಯನಪುರ ಮತ್ತು ಬೊಮ್ಮಲಾಪುರ ಅಕ್ಕಪಕ್ಕದಲ್ಲಿ ಕೂಂಬಿಂಗ್ ಆರಂಭಿಸಿರುವ ಅರಣ್ಯಾಧಿಕಾರಿಗಳ ತಂಡ ಹೆಜ್ಜೆಗುರುತು ಆಧರಿಸಿ ಕಾರ್ಯಾಚರಣೆ ನಡೆಸುತ್ತಿದೆ. ಜೊತೆಗೆ ಪ್ರಮುಖ ಸ್ಥಳಗಳಲ್ಲಿ 10 ಕಡೆ ಕ್ಯಾಮರಾ ಅಳವಡಿಕೆ ಮಾಡಲಾಗುತ್ತಿದೆ. ಇನ್ನೂ ಹೆಚ್ಚುವರಿ 10 ಕ್ಯಾಮರಾ ಬಳಕೆ ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.