
ಸಂಜೆವಾಣಿ ನ್ಯೂಸ್
ಮೈಸೂರು.ಡಿ.02:- ಜಾತ್ಯಾತೀತ ಜನತಾದಳದಿಂದ ಉಚ್ಚಾಟನೆಗೊಂಡು, ಎ.ಹೆಚ್.ವಿಶ್ವನಾಥ್ ರ ಮೂಲಕ ಕಾಂಗ್ರೆಸ್ ಪಕ್ಷ ಸೇರಿ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ ನಂತರ ಮುಖ್ಯಮಂತ್ರಿಸ್ಥಾನ ಪಡೆಯಲೇಬೇಕೆಂದು ಹಠ ಮಾಡಿ ಅಹಿಂದ ಸಂಘಟನೆ ಕಟ್ಟಿದ್ದಲ್ಲದೆ.
ಮೂಲ ಕಾಂಗ್ರೆಸ್‍ನ ಹಿರಿಯರಾದ ಮಲ್ಲಿಕಾರ್ಜುನ ಖರ್ಗೆಯವರನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿ ಮೂಲ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದ ಜಿ. ಪರಮೇಶ್ವರ್ ರವರನ್ನು ತನ್ನ ಜಾತಿ ಜನಗಳ ಬೆಂಬಲದಿಂದ ಸೋಲಿಸಿ ಪ್ರಥಮ ಬಾರಿಗೆ ಮುಖ್ಯಮಂತ್ರಿ ಸ್ಥಾನ ಪಡೆದದ್ದು ಎಲ್ಲಿರಿಗೂ ತಿಳಿದ ವಿಷಯ. ಅಷ್ಟಲ್ಲದೆ, ಕಾಂಗ್ರೆಸ್ ಪಕ್ಷಕ್ಕೆ ಕರೆತಂದ ಎ.ಹೆಚ್. ವಿಶ್ವನಾಥ್ ರವರನ್ನು ಕಾಂಗ್ರೆಸ್ ಬಿಟ್ಟು ಹೋಗುವಂತೆ ರಾಜಕೀಯ ಮಾಡಿದ್ದಲ್ಲದೆ ಕಾಂಗ್ರೆಸ್‍ನಲ್ಲಿ ಸಿಂಹದಂತಿದ್ದ ವಿ.ಶ್ರೀನಿವಾಸ ಪ್ರಸಾದ್ ರವರನ್ನು ಹೇಳದೆ ಕೇಳದೆ ಸಚಿವ ಸಂಪುಟದಿಂದ ತೆಗೆದುಹಾಕಿ ಪಕ್ಷ ಬಿಡುವಂತೆ ಮಾಡಿದ್ದಲ್ಲದೆ ಈಗ 2ನೇ ಬಾರಿ ಮುಖ್ಯಮಂತ್ರಿಯಾಗುವಾಗ ಕಾಂಗ್ರೆಸ್‍ನ ಹೈಕಮಾಂಡ್ ಮುಂದೆ 24 ವರ್ಷಗಳಿಂದ ಡಿ.ಕೆ.ಶಿವಕುಮಾರ್ ರವರಿಗೆ 22 ವರ್ಷ ಎಂದು ಹೇಳಿ ಮೂಲ ಕಾಂಗ್ರೆಸ್ಸಿನವರನ್ನು ಮೂಲೆ ಗುಂಪು ಮಾಡುತ್ತಿರುವುದು ಇವರಿಗೆ ಶೋಭೆ ತರುವುದಿಲ್ಲ. ಇವರಂತೆಯೇ ಪ್ರತಿಯೊಬ್ಬರಿಗೂ ಆಸೆ ಇರುವುದು ಮಾನವನ ಸಹಜ ಗುಣ, ಕಾಂಗ್ರೆಸ್ ಪಕ್ಷ 135 ಸ್ಥಾನ ಪಡೆಯಲು ಇವರ ಶ್ರಮವು ಇರುವುದು ಜನಸಾಮಾನ್ಯರಿಗೆ ತಿಳಿದಿರುವ ವಿಷಯ.
ಅಲ್ಲದೆ, “ನಿಂತ ನೀರಿಗೆ ಹರಿಯುವ ನೀರು ತಳ್ಳಿದಂತೆ” ಆಗಬಾರದು. ಮತ್ತು ಆಡದೆ ಮಾಡುವವನು ರೂಢಿಯಲ್ಲಿ ಸಿ.ಎಂ.ಸಿದ್ದರಾಮಯ್ಯನವರು ಡಿ.ಕೆ.ಶಿವಕುಮಾರ್‍ಗೆ ಸಿ.ಎಂ. ಪದವಿ ಬಿಡುವುದಲ್ಲದೆ, ತಾವುಗಳು ಸಹ ಅವರ ಅವಧಿ ಉತ್ತಮನಾಂತಾಗಲು ಪೂರ್ಣಗೊಳಿಸುವುದಕ್ಕೆ ಸಹಕಾರ ನೀಡಿ ಇತಿಹಾಸದಲ್ಲಿ ದಾಖಲಾಗಬೇಕೆಂದು ನನ್ನ ಮನವಿ.



























