
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ನ.6: ಜಿಲ್ಲೆಯ ಕುರುಗೋಡು ತಾಲೂಕಿನ ಸಿದ್ದಮ್ಮನಹಳ್ಳಿಯ ರೈತ ಹನುಂತಪ್ಪನಜಮೀನಿಲ್ಲಿ ಸಿಜೆಂಟ ಕಂಪನಿಯ ಸೀಮೋಡಿಸ್ ಕೀಟನಾಶಕ ಸಿಂಪಡಿಸಿ ಹಾಗಿದೆ ಎನ್ನಲಾಗುವ ಬೆಳೆ ಹಾನಿಗೆ ಪರಿಹಸರ ನೀಡುವ ಸಂಬಂಧ ನಿನ್ನೆ ಜಮೀನಿಗೆ ಬರಬೇಕಿದ್ದ ತಹಸಿಲ್ದಾರ್, ತೋಟಗಾರಿಕೆ, ಕಂಪನಿಯ ಅಧಿಕಾರಿಗಳು ಬರಲಿಲ್ಲ ಆದರೆ ಕೂಡಿ ಹಾಕಿದ್ದ ಅಧಿಕಾರಿ ಬಿಡಿಸಿದ್ದ ಪೊಲೀಸ್ ಅಧಿಕಾರಿಗಳು ಮಾತ್ರ ಬಂದರು. ರೈತನ ಗೋಳು ಮಾತ್ರ ಮುಂದುವರೆದಿದೆ.
ಕರೂರು ಅರ್ ಮಾಧವರೆಡ್ಡಿ ನೇತೃತ್ವದ ರೈತ ಸಂಘದ ಮುಖಂಡರ ನೇತೃತ್ವದಲ್ಲಿ ನಿನ್ನೆ ಪರಿಹಾರ ಕುರಿತು ಅಧಿಕಾರಿಗಳು ಸಭೆ ನಡೆಸಿ ಒಂದು ಮಾರ್ಗ ಸೂಚಿ ಸೂಚಿಸಬೇಕಿತ್ತು. ಆದರೆ ಈ ಕಾರ್ಯ ಮಧ್ಯಾಹ್ನವಾದರೂ ಆಗದ ಕಾರಣ ರೈತ ಸಂಘದ ಮುಖಂಡರು ತಮ್ಮ ಆಕ್ರೋಶ ವ್ಯಕ್ತಪಡಿಸಿದರೆ. ಅವರ ಬೇಡಿಕೆಗಳನ್ನು, ಹೇಳಿಕೆಗಳನ್ನು ಪೊಲೀಸರು ಶಾಂತ ಚಿತ್ತದಿಂದ ಆಲಿಸಿದ್ದಾರೆ.
ರೈತ ಸಂಘದ ಅಧ್ಯಕ್ಷ ಕರೂರು ಆರ್ ಮಾಧವರೆಡ್ಡಿ ಅವರು ಈ ವೇಳೆ ಮಾತನಾಡಿ. ಅಧಿಕಾರಿಗಳು ಸಂಕಷ್ಟಕ್ಕೆ ಒಳಗಾದ ರೈತನಿಗೆ ಸ್ಪಂದಿಸಬೇಕು.ಕಂಪನಿ ಅಧಿಕಾರಿ ರಾಜಕುಮಾರ್ ಈಗ ಬರದೇ ತಪ್ಪಿಸಿಕೊಂಡಿರಬಹುದು. ಆದರೆ ಅವರನ್ನು ಹುಡುಕಿ ಈ ಸಮಸ್ಯೆ ಪರಿಹರಿಸುವವರೆಗೆ ಕಟ್ಟಿಹಾಕಲಿದೆಂದಿದ್ದಾರೆ.
ರೈತ ಹನುಂಮತಪ್ಪ ಸಿದ್ದಮ್ಮನಹಳ್ಳಿಯ ಮನು ಟ್ರೇಡರ್ಸ್ ಎಂಬ ಕ್ರಿಮಿನಾಶಕ ಮಾರಾಟಗಾರರ ಬಳಿ ಸೀಮೋಡಿನ್ ತೆಗೆದುಕೊಂಡು ಸಿಂಪಡಿಸಿದ್ದಾನಂತೆ. ಇದರಿಂದ ಉತ್ತಮವಾಗಿ ಬೆಳೆದು ನಿಂತಿದ್ದ ಮೆಣಸಿನಕಾಯಿ ಬೆಳೆ ಈಗ ಸಂಪೂರ್ಣ ಸುಟ್ಟು ಹೋಗಿದೆ. ಇದರಿಂದ 3 ಲಕ್ಷ ರೂ ಬೆಳೆ ನಷ್ಟ ಉಂಟಾಗಿದೆ.
























