ಸಿಡಿಮದ್ದು ಸಿಡಿದು: ಹಸುವಿನ ಮುಖ ಬಾಯಿ ಛಿದ್ರ

ಸಂಜೆವಾಣಿ ವಾರ್ತೆ
ಹನೂರು ಜು 4 :-
ಕಾಡು ಪ್ರಾಣಿಗಳ ಬೇಟೆಗೆ ಬೇಟೆಗಾರರು ಇಡಲಾಗುವ ಸಿಡಿಮದ್ದು (ಹಂದಿಗುಂಡು) ಸಿಡಿದು ಹಸುವಿನ ಬಾಯಿ ಮತ್ತು ಮುಖ ಛಿದ್ರವಾಗಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ಒಡೆಯರಪಾಳ್ಯ ಸಮೀಪದ ಟಿಬಿಟಿಯನ್ ಕ್ಯಾಂಪ್ ಎನ್ ವಿಲೇಜ್‍ನಲ್ಲಿ ನಡೆದಿದೆ.


ತಾಲೂಕಿನ ಹುತ್ತೂರು ಗ್ರಾಪಂ ವ್ಯಾಪ್ತಿಯ ವಿ.ಎಸ್.ದೊಡ್ಡಿ ಗ್ರಾಮದ ಮಂಟೇಸ್ವಾಮಿ ಅವರಿಗೆ ಸೇರಿದ ಹಸುವನ್ನು ಮೇಯಿಸಲು ಟಿಬೆಟಿಯನ್ ಕ್ಯಾಂಪ್ ಎನ್ ವಿಲೇಜ್ ಬಳಿ ಬಿಡಲಾಗಿತ್ತು. ಈ ವೇಳೆ ಕಿಡಿಗೇಡಿಗಳು ಕಾಡುಹಂದಿಗಳ ಬೇಟೆಗೆ ಮೇವಿನ ಮಧ್ಯೆ ಇಡಲಾಗಿದ್ದ ಸಿಡಿಮದ್ದನ್ನು ಹಸು ಜಿಗಿದ ತಕ್ಷಣ ಸ್ಫೋಟಗೊಂಡಿದೆ ಇದರಿಂದ ಹಸು ತೀವ್ರವಾಗಿ ಗಾಯಗೊಂಡು ಸಾವು ಬದುಕಿನ ನಡುವೆ ಹೋರಾಟ ನಡೆಸುವಂತಾಗಿದೆ.
ಹನೂರು ರಾಮಾಪುರ ಭಾಗದಲ್ಲಿ ಮರುಕಳುಹಿಸುತ್ತಿದ್ದ ಸಿಡಿಮದ್ದು (ಹಂದಿಗುಂಡು) ಪ್ರಕರಣ ಒಡೆಯರಪಾಳ್ಯದಲ್ಲಿ ಕಂಡು ಬಂದಿದ್ದು, ಮತ್ತೆ ಪೆÇಲೀಸರಿಗೆ ತಲೆ ನೋವಾಗಿ ಪರಿಣಮಿಸಿದೆ. ಈ ಸಂಬಂಧ ಎಸ್ ಪಿ ಅವರ ನೇತೃತ್ವದಲ್ಲಿ ಈ ಕೃತ್ಯದಲ್ಲಿ ತೊಡಗಿದ್ದ ಕೆಲವರನ್ನು ಬಂಧಿಸಿ ಜೈಲಿಗಟ್ಟಲಾಗಿತ್ತು. ಇಷ್ಟಿದ್ದರೂ ಮತ್ತೆ ಈ ಪ್ರಕರಣಗಳು ಮರುಕಳುಹಿಸಿದ್ದು, ತಪ್ಪಿತಸ್ಥರನ್ನು ಪತ್ತೆ ಹಚ್ಚಿ ಸೂಕ್ತ ಕ್ರಮವಹಿಸಬೇಕಾಗಿದೆ.