ಸಿಎಂಎಸ್-೩ ಉಪಗ್ರಹ ವಿಡಿಯೋ ಹಂಚಿಕೊಂಡ ಇಸ್ರೋ

ಶ್ರೀಹರಿಕೋಟಾ,ನ.೩- ಅತ್ಯಂತ ಭಾರವಾದ ರಾಕೆಟ್ ಸಿಎಂಎಸ್-೩ ಉಪಗ್ರಹ ಯಶಸ್ವಿಯಾಗಿ ಉಡಾವಣೆಗೊಂಡ ಬೆನ್ನಲ್ಲೇ ಬಾಹ್ಯಾಕಾಶಕ್ಕೆ ಹಾರಿದ ವಿಡಿಯೋಗಳನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಹಂಚಿಕೊಂಡಿದೆ.

ಹೊಸ ಪೀಳಿಗೆಯ ಸಿಎಂಎಸ್-೩ ಉಪ್ರಗ್ರಹವಾದ ‘ಬಾಹುಬಲಿ’ ರಾಕೆಟ್‌ನಲ್ಲಿ ಯಶಸ್ವಿಯಾಗಿ ಬಾಹ್ಯಾಕಾಶಕ್ಕೆ ಕಳುಹಿಸಲಾಗಿದ್ದು ಅಲ್ಲಿಂದ ಹಲವು ವಿಡಿಯೋ ಮತ್ತು ಭಾವಿಚಿತ್ರಗಳನ್ನು ಕಳುಹಿಸಲಾಗಿದೆ, ಇದಕ್ಕಾಗಿ ರಾಕೆಟ್‌ನಲ್ಲಿ ಕ್ಯಾಮರ್ ಅಳವಡಿಸಿದ್ದು ಅದು ವಿಡಿಯೋ ಮಾಡಿ ಕಳುಹಿಸಿದೆ.

ಉಡಾವಣೆಯ ಕೆಲವು ಗಂಟೆಗಳ ನಂತರ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಯಶಸ್ವಿ ಉಡಾವಣೆ ಮತ್ತು ಆನ್-ಬೋರ್ಡ್ ಕ್ಯಾಮೆರಾ ವೀಕ್ಷಣೆಗಳ ವೀಡಿಯೊ ಹಂಚಿಕೊಂಡಿದೆ. ೪,೪೧೦ ಕೆಜಿ ತೂಕದ ಸಂವಹನ ಉಪಗ್ರಹ ಸಿಎಂಎಸ್-೦೩ ಬಾಹ್ಯಾಕಾಶಕ್ಕೆ ಉಡಾವಣೆಯಾಗುವುದನ್ನು ವಿಡಿಯೋದಲ್ಲಿ ವೀಕ್ಷಣೆ ಮಾಡಬಹುದಾಗಿದೆ.

ವೀಡಿಯೊದಲ್ಲಿ ಎರಡು ಎಸ್೨೦೦ ಘನ ರಾಕೆಟ್ ಬೂಸ್ಟರ್‌ಗಳು ಮತ್ತು ಎಲ್ ೧೧೦ ಲಿಕ್ವಿಡ್ ಕೋರ್ ಹಂತವನ್ನು ಬೇರ್ಪಡಿಸುವುದನ್ನು ಸಹ ಸೆರೆಹಿಡಿದಿದೆ, ನಂತರ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಯಿತು ಎಂದು ಇಸ್ರೋ ಮಾಹಿತಿ ಹಂಚಿಕೊಂಡಿದೆ.

ಗಮನಾರ್ಹ ಸಂಗತಿ ಎಂದರೆ ಎಸ್ ೨೦೦ ಬೂಸ್ಟರ್‍ಗಳನ್ನು ರಾಕೆಟ್‌ನ ಎರಡೂ ಬದಿಗಳಲ್ಲಿ ಅಳವಡಿಸಲಾಗಿದ್ದು, ಉಡಾವಣೆಗೆ ಅಗತ್ಯವಾದ ಒತ್ತಡವನ್ನು ಒದಗಿಸಲಾಗುತ್ತದೆ ಮತ್ತು ಎಲ್ ೧೧೦ ಲಿಕ್ವಿಡ್ ಸ್ಟೇಜ್ ಎರಡು ವಿಕಾಸ್ ಎಂಜಿನ್‌ಗಳಿಂದ ಚಾಲಿತವಾಗಿದೆ ಎಂದು ತಿಳಿಸಿದೆ.

ಸಿಎಂಎಸ್- ೦೩ ಭಾರತೀಯ ನೆಲದಿಂದ ಕಕ್ಷೆಗೆ ಉಡಾಯಿಸಲಾದ ಅತ್ಯಂತ ಭಾರವಾದ ಉಪಗ್ರಹವಾಗಿದೆ. ರಾಕೆಟ್ ಈ ಹಿಂದೆ ೨೦೨೩ ರಲ್ಲಿ ಚಂದ್ರಯಾನ-೩ ಕಾರ್ಯಾಚರಣೆಯ ಯಶಸ್ವಿ ಉಡಾವಣೆಗೆ ಅನುಕೂಲ ಮಾಡಿಕೊಟ್ಟಿತು. ಉಪಗ್ರಹದ ತೂಕ ೩೮೪೧.೪ ಕೆಜಿ ತೂಕಹೊಂದಿದ್ದು ಇದುವರೆಗಿನ ಅತ್ಯಂತ ಹೆಚ್ಚು ತೂಕದ ಉಪ ಗ್ರಹ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.

ಸಿಎಂಎಸ್ -೩ ಬಹು-ಬ್ಯಾಂಡ್ ಸಂವಹನ ಉಪಗ್ರಹವಾಗಿದ್ದು, ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಯಾದ ನಂತರ ಜಿಯೋಸಿಂಕ್ರೋನಸ್ ಟ್ರಾನ್ಸ್‌ಫರ್ ಆರ್ಬಿಟ್‌ನಲ್ಲಿ ಇರಿಸಲಾಗಿದೆ.