ಸಾಹಸಸಿಂಹ ಡಾ. ವಿಷ್ಣುವರ್ಧನ್ ಅಭಿಮಾನಿಗಳಿಂದ ಚಲನಚಿತ್ರ ವಾಣಿಜ್ಯ ಮಂಡಳಿಗೆ ಮುತ್ತಿಗೆ

ಬೆಂಗಳೂರು, ಆ.12- ಅಭಿಮಾನ್ ಸ್ಟುಡಿಯೊದಲ್ಲಿರುವ ಸಾಹಸಿಂಹ ಡಾ. ವಿಷ್ಣುವರ್ಧನ್ ರವರ ಸಮಾಧಿಯನ್ನು ಏಕಾಎಕಿ ತೆರುವು ಮಾಡಿರುವುದು ಅಭಿಮಾನಿಗಳಿಗೆ ಬಹಳ ನೋವುಂಟಾಗಿದೆ ಅದರೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ನರಸಿಂಹಲುರವರು ಇದರ ಕುರಿತು ಮೌನವಹಿಸಿರುವುದು, ಸರ್ಕಾರ ಜೊತೆಯಲ್ಲಿ ಕ್ರಮ ಕೈಗೊಳ್ಳಲು ಮನವಿ ಮಾಡದೇ ಇರುವುದು ಖಂಡಿಸಿ ಸಾಹಸಸಿಂಹ ಡಾ||ವಿಷ್ಣುವರ್ಧನ್ ಅಭಿಮಾನಿಗಳಾದ ಕ್ರಾಂತಿರಾಜುರವರು, ವೆಂಕಟೇಶ್ ಗೌಡ, ಶ್ರೀನಿವಾಸ್ ಗೌಡ ಮತ್ತು ವಿಷ್ಣು ಅಭಿಮಾನಿಗಳು ಚಲನಚಿತ್ರ ವಾಣಿಜ್ಯ ಮಂಡಳಿ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

ವಿಷ್ಣುವರ್ಧನ್ ಅಭಿಮಾನಿಗಳನ್ನು ನಿರ್ಮಾಪಕ ಸಾ.ರಾ.ಗೋವಿಂದುರವರು ಮಧ್ಯ ಪ್ರವೇಶ ಮಾಡಿ ಸಮಾಧಾನ ಪಡಿಸಿದರು. ಸರ್ಕಾರ ಜೊತೆಯಲ್ಲಿ ಮಾತುಕತೆ ಮಾಡಿ ಸಮಸ್ಯೆ ಬಗೆಹರಿಸುವುದಾಗಿ ಹೇಳಿದರು.

ವಿಷ್ಣುವರ್ಧನ್ ಅಭಿಮಾನಿ ಕ್ರಾಂತಿ ರಾಜುರವರು ಮಾತನಾಡಿ ಸಾಹಸಸಿಂಹ ವಿಷ್ಣುವರ್ಧನ್ ಬದುಕಿದ್ದಾಗ ನೂರಾರು ತೊಂದರೆ ಅನುಭವಿಸಿದರು, ಸತ್ತ ಮೇಲು ನೆಮ್ಮದ್ದಿಯಾಗಿ ಇರಲು ಬಿಡುತ್ತಿಲ್ಲ.

ಸಾಹಸಸಿಂಹ ವಿಷ್ಣುವರ್ಧನ್ ರವರು ಕೊಟ್ಯಂತರ ಜನರ ಅಭಿಮಾನ ಗಳಿಸಿದ್ದಾರೆ. ಕನ್ನಡ, ಹಿಂದಿ, ತಮಿಳು, ಮಾಲಯಾಳಂ ವಿವಿಧ ಭಾಷೆಗಳ ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ವಿಷ್ಣುವರ್ಧನ್ ರವರ ಸಮಾಧಿ ಸ್ಥಳವನ್ನು ಸರ್ಕಾರ ವಶಪಡಿಸಿಕೊಂಡು, ನಟ ಬಾಲಕೃಷ್ಣರವರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಿದ್ದರೆ ಈ ಸಮಸ್ಯೆ ಬರುತ್ತಿರಲಿಲ್ಲ. ಕಾಲ ಮಿಂಚಿಲ್ಲ ಸರ್ಕಾರ ವಿಷ್ಣುವರ್ಧನ್ ರವರ ಸಮಾಧಿ ಜಾಗ ಉಳಿಸಿಕೊಡಬೇಕು ಎಂದು ವಿನಂತಿ ಮಾಡುತ್ತೇನೆ ಎಂದು ಹೇಳಿದರು.