ಸಾವಿರಾರು ಭಕ್ತಾದಿಗಳ ಸಾನಿಧ್ಯದಲ್ಲಿ ಪಾರ್ಶ್ವನಾಥನ 101 ನೇ ಧ್ವಜಾರೋಹಣ

(ಸಂಜೆವಾಣಿ ಪ್ರತಿನಿಧಿಯಿಂದ)
 ಬಳ್ಳಾರಿ ಜೂ 6 :  ನಗರದ ತೇರು ಬೀದಿಯ  ಶ್ರೀ ಪಾರ್ಶ್ವನಾಥ ಜೈನ್ ಶ್ವೇತಂಬರ್ ಮಂದಿರದ ಶತಮಾನೋತ್ಸವದ ಅಂಗವಾಗಿ  ಪಾರ್ಶ್ವನಾಥ ದೇಗುಲದ  101 ನೇ ವರ್ಷದ ಧ್ವಜಾರೋಹಣ  ಆಚಾರ್ಯ ವಿಮಲ್ಸಾಗರ್ ಸುರಿಸ್ರಿಜಿ ಸಾನಿಧ್ಯದಲ್ಲಿ ಇಂದು ಮಂತ್ರೋಚರದೊಂದಿಗೆ ನಡೆಯಿತು.
ಈ ವೇಳೆ  ಶ್ರೀ ಪಾರ್ಶ್ವನಾಥ ಜೈನ್ ಶ್ವೇತಾಂಬರ್ ಸಂಘದ  ಅಧ್ಯಕ್ಷ ಉತ್ಸವಲಾಲ್ ಬಾಗ್ರೇಚಾ, ಉಪಾಧ್ಯಕ್ಷ ಸೂರಜ್ ಮಲ್ ದಾಂತೆವಾಡಿಯ, ಪ್ರಧಾನ ಕಾರ್ಯದರ್ಶಿ  ರೋಷನ್ ಜೈನ್ , ಸಹ ಕಾರ್ಯದರ್ಶಿ ಅನಿಲ್ ಬಾಗ್ರೇಚಾ, ಜಾಯಿಂಟ್ ಕಾರ್ಯದರ್ಶಿ  ಭರತ್ ಲಂಕಡ್,  ಟ್ರೇಸರ್ರಿ ಗೌತಮ್ ಬಗ್ರೇಚಾ, ವಿನೋದ್ ಬಾಗ್ರೇಚಾ,  ಜೈನ ಸಮುದಾಯದ  ಬಾಂಧವರು   ಭಾಗವಹಿಸಿದ್ದರು.