
ಸಂಜೆವಾಣಿ ವಾರ್ತೆ
ಹನೂರು.ಜ.30:- ತಾಲೂಕಿನ ಶ್ರೀ ಮಲೆ ಮಹದೇಶ್ವರ ಬೆಟ್ಟದ ಸಾಲೂರು ಮಠದಲ್ಲಿ ಲಿಂಗೈಕ್ಯ ಶ್ರೀ ಶ್ರೀ ಮಹಾದೇವಸ್ವಾಮಿಯವರ ಪುಣ್ಯ ಸ್ಮರಣೆ ಕಾರ್ಯಕ್ರಮಕ್ಕೆ ಸುಳ್ವಾಡಿ ವಿಷಪ್ರಸಾದ ಪ್ರಕರಣದ ಪ್ರಮುಖ ಆರೋಪಿ ಇಮ್ಮಡಿ ಮಹದೇವಸ್ವಾಮಿ ಅವರು ಬರುತ್ತಾರೆ ಎಂದು ತಿಳಿದುಕೊಂಡು ಸಂತ್ರಸ್ತ ಕುಟುಂಬದವರು ಪ್ರತಿಭಟನೆ ನಡೆಸಿದರು.
ಮಾರ್ಟಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸುಳ್ವಾಡಿ ಕಿಚ್ ಗುತ್ತಿ ಮಾರಮ್ಮನ ದೇವಸ್ಥಾನದ ವಿಷಪ್ರಾಶನ ಘಟನೆಯಲ್ಲಿ ಮೃತಪಟ್ಟವರು ಅಂಗವೈಫಲ್ಯದಿಂದ ಸಾವು ನೋವುಗಳ ನಡುವೆ ಬದುಕು ಸಾಗಿಸುತ್ತಿರುವ ಬಿದರಳ್ಳಿ ಗ್ರಾಮದ ಸಂತ್ರಸ್ತ ಕುಟುಂಬದವರು ಮಲೆ ಮಹದೇಶ್ವರ ಬೆಟ್ಟ ಸಾಲೂರು ಬೃಹನ್ಮಠದ ಗೇಟ್ ಬಳಿ ಪ್ರತಿಭಟನೆ ನಡೆಸಿ ಆರೋಪಿ ಇಮ್ಮಡಿ ಮಹಾದೇವಸ್ವಾಮಿ ಮಠಕ್ಕೆ ಬರಬಾರದು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದರು.
ಇದೆ ವೇಳೆ ಬಾಬು ಜಗಜೀವನ್ ರಾಮ್ ಸಂಘದ ಅಧ್ಯಕ್ಷ ಷಣ್ಮುಗಂ ಅವರು ಮಾತನಾಡಿ ಸುಳ್ವಾಡಿ ಗ್ರಾಮದಲ್ಲಿರುವ ಕಿಚ್ ಗುತ್. ಮಾರಮ್ಮ ದೇವಸ್ಥಾನದಲ್ಲಿ 16-2018 ರಲ್ಲಿ ನಡೆದ ವಿಷ ಪ್ರಸಾದ ತಿಂದು ನೂರಕ್ಕೂ ಜನರು ಅಸ್ವಸ್ಥಗೊಂಡು 17 ಜನರು ಮೃತಪಟ್ಟಿ. 70 ಕ್ಕೆ ಹೆಚ್ಚು ಜನರು ವಿಷ ಪ್ರಸಾದ ತಿಂದು ಬದುಕು ಉಳಿದ ಸಾವು ಬಾಳಲ್ಲಿ ಹೋರಾಡುತ್ತಿದ್ದಾರೆ.
ಆರೋಪಿ ಇಮ್ಮಡಿ ಮಹದೇವಸ್ವಾಮಿಯವರನ್ನು ಘನ ನ್ಯಾಯಾಲಯ ಷರತ್ತು ಬದ್ಧ ಜಾಮೀನಿನಲ್ಲಿ ಒಂದು ವರ್ಷಗಳ ಕಾಲ ಬಿಡುಗಡೆ ಮಾಡಿರುವುದು ಅದನ್ನು ಘನ ನ್ಯಾಯಾಲಯ ಮರು ಪ್ರಶ್ನಿಸಿ ಆರೋಪಿ ಇಮ್ಮಡಿ ಮಹದೇವಸ್ವಾಮಿಯನ್ನು ಗಲ್ಲುಗೇರಿಸಿದರೆ ಮಾತ್ರ ಮೃತರ ಆತ್ಮಕ್ಕೆ ಶಾಂತಿ ಸಿಗುತ್ತದೆ ಎಂದು ಪ್ರತಿಭಟನೆ ವೇಳೆ ತಿಳಿಸಿದರು.
ಆದರೆ ಸುಳುವಾಡಿ ವಿಷ ಪ್ರಸಾದದಲ್ಲಿ ನೂರಕ್ಕೂ ಹೆಚ್ಚು ಜನರು ವಿಷ ಪ್ರಸಾದ ತಿಂದು ಅದರಲ್ಲಿ 17 ಜನ ಸತ್ತಿದ್ದು 70ಕ್ಕೂ ಹೆಚ್ಚು ಜನರು ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಗ್ರಾಮದಲ್ಲಿ ವಾಸಿಸುತ್ತಿದ್ದಾರೆ ನಮಗೆ ನ್ಯಾಯ ಒದಗಿಸುವ ಮೂಲಕ ಸರ್ಕಾರ ನಮ್ಮ ಬೆಂಬಲಕ್ಕೆ ನಿಲ್ಲಬೇಕು ಎಂದು ತಿಳಿಸಿದರು.
ಇದೆ ಸಂದರ್ಭದಲ್ಲಿ ಡಿ.ಎಸ್.ಎಸ್ ಸಂಚಾಲಕ ಮುರುಗೇಶ್, ಮಾದಮ್ಮ. ರೂಪ, ನೀಲಮ್ಮ, ಮೋಹನ್ ಕುಮಾರ್, ಶರವಣ ಹಾಗೂ ಇನ್ನಿತರರು ಇದ್ದರು ಹಾಗೂ ಮಹದೇಶ್ವರ ಬೆಟ್ಟ ಪೆÇೀಲಿಸ್ ಠಾಣೆ ಸಿ.ಪಿ.ಐ ಜಗದೀಶ್ ಹಾಗೂ ಸಿಬ್ಬಂದಿಗಳು ಹಾಜರಿದ್ದರು.




























