ವಿಟ್ಲ: ಯಕ್ಷಭಾರತ ಸೇವಾ ಪ್ರತಿಷ್ಠಾನ ಮತ್ತು ವಿಟ್ಲ ಲಯನ್ಸ್ ಕ್ಲಬ್ ವತಿಯಿಂದ ಲಯನ್ಸ್ ಅನ್ನಪೂರ್ಣ ಕಾರ್ಯಕ್ರಮದ ಪ್ರಯುಕ್ತ ಸಾರ್ವಜನಿಕರಿಗೆ ಆಹಾರ ಕಿಟ್ ನೀಡುವ ಕಾರ್ಯಕ್ರಮ ವಿಟ್ಲ ಶ್ರೀ ಭಗವತೀ ದೇವಸ್ಥಾನದ ಸಭಾ ಭವನದಲ್ಲಿ ನಡೆಯಿತು. ಭಗವತೀ ದೇವಸ್ಥಾನದ ಆಡಳಿತ ಮೊಕ್ತೇಸರ ಕೇಶವ ವಿಟ್ಲ, ಲಯನ್ಸ್ ಕ್ಲಬ್ ಅಧ್ಯಕ್ಷ ಸಂಜೀವ ಪೂಜಾರಿ, ಮಾಜಿ ಗವರ್ನರ್ ಡಾ. ಗೀತಪ್ರಕಾಶ್, ಮಂಗೇಶ್ ಭಟ್, ರಮಾನಾಥ ವಿಟ್ಲ, ಅಂತೋನಿ ಲೋಬೊ, ಸಬನಕೋಡಿ ರಾಮ ಭಟ್, ಡಾ. ಗಾಯತ್ರಿ ಗೀತಪ್ರಕಾಶ್, ಗಂಗಾಧರ ವಿಟ್ಲ, ದೇವಿಪ್ರಸಾದ್ ಶೆಟ್ಟಿ, ಬಾಲಕೃಷ್ಣ ಗೌಡ, ಸುನಿತಾ ಸತೀಶ್, ಸುಚಿತ್ರಾ ರಮಾನಾಥ್, ರಮೇಶ್ ಬಿ ಕೆ, ವಿಶ್ವನಾಥ ಗೌಡ ಮತ್ತಿತರರು ಉಪಸ್ಥಿತರಿದ್ದರು.
























