ಸಾರ್ವಕರ್ ಒಪ್ಪದ ಇಂದಿನ ಕಾಂಗ್ರೆಸ್ ಮನಸ್ಥಿತಿ

ಸಂಜೆವಾಣಿ ನ್ಯೂಸ್
ಮೈಸೂರು,ನ.21:-
ಇಂದಿರಾ ಗಾಂಧಿ ಕಾಲದಲ್ಲಿ ಕಾಂಗ್ರೆಸ್ಸಿಗರಿಂದ ವೀರ ಎನಿಸಿಕೊಂಡಿದ್ದ ಸಾವರ್ಕರ್ ಅವರನ್ನು ಇಂದು ಅವರ ಮೊಮ್ಮಗ ರಾಹುಲ್ ಗಾಂಧಿ ಟೀಕೆ ಮಾಡುತ್ತಾರೆ. ಹಳೆಯ ಕಾಂಗ್ರೆಸ್‍ನಂತೆ ಈಗೀನ ಕಾಂಗ್ರೆಸ್ ಇಲ್ಲ ಎಂದು ಅಂಕಣಕಾರ ಪ್ರವೀಣ್ ಕುಮಾರ್ ಮಾವಿನಕಾಡು ಹೇಳಿದರು.


ನಗರದ ಗ್ರೀನ್ ಹೆರಿಟೇಜ್ ಹೋಟೆಲ್ ನಲ್ಲಿ ಸಾವರ್ಕರ್ ಪ್ರತಿಷ್ಠಾನದ ವತಿಯಿಂದ ನಡೆದ ಇಂದಿರಾ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ಯಾಕೆಟ್ ಸೈಜಿನ ಸಂವಿಧಾನವನು ಕೈಯಲ್ಲಿಡಿದು ಓಡಾಡುವ ರಾಹುಲ್ ಗಾಂಧಿಗೆ ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಮೇಲೆ ನಂಬಿಕೆ ಇಲ್ಲವೆ. ಸಾವರ್ಕರ್ ಟೀಕೆ ಪ್ರಕರಣದಲ್ಲಿ ನ್ಯಾಯಮೂರ್ತಿ ದೀಪಾಂಕರ್ ದತ್ತ ಮತ್ತು ಮನ ಮೋಹನ್ ಅವರಿದ್ದ ಪೀಠ ಬಹಳ ಸ್ಪಷ್ಟವಾಗಿ ತೀರ್ಪು ನೀಡಿದೆ. ಆದರೆ, ಕೂಡ ರಾಹುಲ್ ಗಾಂಧಿ ಟೀಕೆ ಮಾಡುತ್ತಾರೆ. ನೀವು ಸುಪ್ರೀಂ ಕೋರ್ಟ್ ಅನ್ನು ಒಪ್ಪುದಿಲ್ಲವೇ? ನಿಮಗೆ ಸಂವಿಧಾನದ ಮೇಲೆ ನಂಬಿಕೆ ಇಲ್ಲವೇ? ಪ್ಯಾಕೆಟ್ ಸೈಜಿನ ಸಂವಿಧಾನ ಇಟ್ಟುಕೊಂಡು ?ಂಕೇ ಓಡಾಡುತ್ತೀರಾ?. ಮತ್ತೊಮ್ಮೆ ಇಂತಹ ಹೇಳಿಕೆ ನೀಡಿದರೆ ನ್ಯಾಯಾಲಯದ ಸ್ವಯಂ ಪ್ರೇರಣೆಯಿಂದ ಪ್ರಕರಣ ದಾಖಲಿಸುವುದಾಗಿ ಎಚ್ಚರಿಕೆ ನೀಡಿದೆ. 1980ರಲ್ಲಿ ಇಂದಿರಾ ಗಾಂಧಿಯವರು ಸಾವರ್ಕರ್ ರಾಷ್ಟ್ರೀಯ ಸ್ಮಾರಕದ ಕಾರ್ಯದರ್ಶಿಗಳಾಗಿದ್ದ ಪಂಡಿತ್ ಬಾಕ್ಲೆ ಅವರಿಗೆ ಪತ್ರ ಬರೆದು ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿದ್ದ ಸಾವರ್ಕರ್ ಪಾತ್ರ ಅವಿಸ್ಮರಣೀಯ. ಅವರೊಬ್ಬ ಮರೆಯಲಾಗದ ಭಾರತದ ಹೆಮ್ಮೆಯ ಸುಪುತ್ರ ಎಂದು ಬಣ್ಣಿಸಿದ್ದರು.


ರಾಷ್ಟ್ರದ ಭದ್ರತ ವಿಚಾರದಲ್ಲಿ ಇಂದಿರಾ ಗಾಂಧಿ ರಾಜೀ ಆಗಿರಲಿಲ್ಲ. ಆದರೆ, ಅವರ ಮೊಮ್ಮಗ ಭದ್ರತೆ ವಿಚಾರದಲ್ಲಿ ವಿರುದ್ಧ ಇದ್ದರೆ. ಇಂದಿರಾ ಗಾಂಧಿ ಪಾಕಿಸ್ತಾನ ಮೇಲೆ ಯುದ್ದ ಮಾಡಿ ಬಾಂಗ್ಲಾದೇಶಕ್ಕೆ ಸ್ವಾತಂತ್ರ್ಯ ಕೊಡಿಸಿದ್ದು, ಪರುಮಾಣು ಪರೀಕ್ಷೆ ಮಾಡಿದ್ದು, ಎಲ್ಲವೂ ಸಾವರ್ಕರ್ ಅವರ ತತ್ವವಾಗಿತ್ತು. ಗಾಂಧಿ ತತ್ವದಲ್ಲಿ ಪರಮಾಣು ಪರೀಕ್ಷೆ ಮಾಡಲಾಗುತ್ತಿತ್ತೋ ಎಂದು ಹೇಳಿದರು. ಸಾವರ್ಕರ್ ಅವರನ್ನು ತುಳಿ?ಂಲು ಕೆಲಸ ಕಾಂಗ್ರೆಸ್‍ನಲ್ಲಿ ನಿರಂತರವಾಗಿ ನಡೆಯುತ್ತಿತ್ತು. ಸಾವರ್ಕರ್ ಬ್ರಿಟಿಷರಿಗೆ ಕ್ಷವಾಪಣ ಪತ್ರ ಎನ್ನುವುದು ಸುಳ್ಳು. ಮಹಾತ್ಮ ಗಾಂಧಿಯವರು ಕೂಡ ಬ್ರಿಟಿಷ್ ವೈಸರಾಯ್‍ಗೆ ಬರೆದ ಪತ್ರಗಳಲ್ಲಿ `ಯುವರ್ ಫೈತ್ ಫುಲ್ ಸರ್ವೆಂಟ್’ ಎಂಬ ಅಭಿವಂದನಾ ಪದವನ್ನು ಬಳಸುತ್ತಿದ್ದರು. ಅವರನ್ನೂ ರಾಹುಲ್ ಗಾಂಧಿ ಟೀಕಿಸುತ್ತಾರಾ ಎಂದು ಪ್ರಶ್ನಿಸಿದ್ದಲ್ಲದೆ ಅಂದಿನ ಕಾಲದಲ್ಲಿ ಬ್ರಿಟಿಷರಿಗೆ ಬರೆಯುತ್ತಿದ್ದ ಪತ್ರಗಳಲ್ಲಿ ಈ ರೀತಿಯ ಅಭಿನಂದನಾ ಪದ ಬಳಸುವುದು ಸಾಮಾನ್ಯವಾಗಿತ್ತು ಎಂದು ಹೇಳಿದರು.


ನೆಹರೂ ಅವರನ್ನು ನಭಾ ಜೈಲಿಗೆ ಹಾಕಿದಾಗ ಅವರ ತಂದೆ ಮೋತಿಲಾಲ್ ನೆಹರು ಸಹ ಕ್ಷಮಾಪಣೆ ಪತ್ರವನ್ನು ವೈಸಾರಾಯ್ ಬಳಿ ಕೊಂಡೋಯಿದ್ದರು. ಅದು ಜೈಲಿಗೆ ಹಾಕಿದ ಕೇವಲ ನಾಲ್ಕ ದಿನಕ್ಕೆ ಎಂಬುದನ್ನು ಸಾವರ್ಕರ್ ಟೀಕಿಸುವ ಕಾಂಗ್ರೆಸ್ ನಾಯಕರು ನೆನೆಸಿಕೊಳ್ಳಬೇಕು. 1932ರಲ್ಲಿ ನಡೆದ ಕಾಂಗ್ರೆಸ್ ರಾಷ್ಟ್ರೀಂ ಆದಿವೇಶನದಲ್ಲಿ ಸಾವರ್ಕರ್ ಅವರನ್ನು ಬಿಡಗಡೆ ಮಾಡಬೇಕು. ಹೋರಾಟಗಾರರನ್ನು ಬಂಧಿಸಿರುವುದು ತಪ್ಪು ಎಂದು ಬ್ರಿಟಿಷರಿಗೆ ಪತ್ರ ಬರೆಯಲಾಗಿತ್ತು. ಈ ಸಂದರ್ಭದಲ್ಲಿ ಕಾಂಗ್ರೆಸ್‍ಗೆ ಕ್ರಾಂತಿಕಾರಗಳ ಬೆಂಬಲ ಬೇಕಿತ್ತು. ಆದರೆ, ಈಗ ಸಾವರ್ಕರ್ ಸ್ವಾತಂತ್ರ್ಯ ಹೋರಾಟ ವಾಡಿಲ್ಲ ಎನ್ನುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.


ಆದಿತ್ಯ ಅಧಿಕಾರಿ ಆಸ್ಪತ್ರೆಯ ವೈದ್ಯ ಡಾ.ಚಂದ್ರಶೇಖರ್, ಸಾವರ್ಕರ್ ಪ್ರತಿಷ್ಠಾನದ ಕಾರ್ಯದರ್ಶಿ ರಾಕೇಶ್ ಭಟ್, ಸಹ ಕಾರ್ಯದರ್ಶಿ ಶಿವು ಚಿಕ್ಕಕಾನ್ಯ, ಸಾವರ್ಕರ್ ಯುವ ಬಳಗದ ಸಂದೇಶ್ ಪವಾರ್, ಮೈಸೂರು ಕೇಂದ್ರ ಸಮಿತಿಯ ಶಿವು ಪಟೇಲ್, ಎಸ್.ಮಹೇಶ್ ಕುಮಾರ್, ಎಚ್.ಎಸ್.ಹಿರಿಯಣ್ಣ, ಡಿ.ರಾಘವೇಂದ್ರ ಕಾರ್ಯಕ್ರಮದಲ್ಲಿ ಹಾಜರಿದ್ದರು.