ಸಂಜೆವಾಣಿ ವಾರ್ತೆ
ಪಿರಿಯಾಪಟ್ಟಣ:ಆ.18:– ಸಾಮಾಜಿಕ ಸೇವೆಯೇ ಅಂತರಾಷ್ಟ್ರೀಯ ಸಂಸ್ಥೆ ರೋಟರಿಯ ಮುಖ್ಯ ಉದ್ದೇಶ ಎಂದು ರೋಟರಿ ವಲಯ 6 ರ ಸಹಾಯಕ ಗವರ್ನರ್ ತಿರುಮಲಾಪುರ ರಾಜೇಗೌಡ ತಿಳಿಸಿದರು.
ಬೆಟ್ಟದಪುರ ಸಮೀಪದ ಮುತ್ತಿನಮುಳಸೋಗೆ ಗ್ರಾಮದ ಎರಡು ಹಳೆಯ ಬಸ್ ನಿಲ್ದಾಣಗಳನ್ನು ರೋಟರಿ ಮಿಡ್ ಟೌನ್ ವತಿಯಿಂದ ನವೀಕರಿಸಿ ಸಾರ್ವಜನಿಕರ ಬಳಕೆಗೆ ಹಸ್ತಾಂತರಿಸಲಾಯಿತು ಬಳಿಕ ಬೆಣಗಾಲು ಬೋವಿ ಕಾಲೋನಿಯ ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಸಮವಸ್ತ್ರ ಹಾಗೂ ಶೈಕ್ಷಣಿಕ ಪರಿಕರಗಳ ವಿತರಣೆ ಮತ್ತು ಅಂಗನವಾಡಿ ಕೇಂದ್ರಕ್ಕೆ ಅಗತ್ಯವಿರುವ ಆಟೋಟ ಸಾಮಗ್ರಿ ಮತ್ತು ಕಲಿಕಾ ಪರಿಕರಗಳನ್ನು ವಿತರಿಸಿ ಅವರು ಮಾತನಾಡಿದರು, ಪಿರಿಯಾಪಟ್ಟಣ ರೋಟರಿ ಮಿಡ್ ಟೌನ್ ವತಿಯಿಂದ ಪಟ್ಟಣ ಸೇರಿದಂತೆ ಗ್ರಾಮಾಂತರ ಪ್ರದೇಶದ ಹಲವೆಡೆ ಶೈಕ್ಷಣಿಕ ಧಾರ್ಮಿಕ ಸಾಮಾಜಿಕ ಆರೋಗ್ಯ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಮಾಜದ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ ಎಂದರು.
ರೋಟರಿ ಮಿಡ್ ಟೌನ್ ಅಧ್ಯಕ್ಷರಾದ ಜಗನ್ ಗೌಡ ಮಾತನಾಡಿ ರೋಟರಿ ಜಿಲ್ಲಾ ಪ್ರಾಜೆಕ್ಟ್ ಅಂಗನವಾಡಿ ಉನ್ನತೀಕರಣ ಹಾಗೂ ಸರ್ಕಾರಿ ಶಾಲೆಗಳ ಶೈಕ್ಷಣಿಕ ಅಭಿವೃದ್ಧಿಗಾಗಿ ಗ್ರಾಮಾಂತರ ಪ್ರದೇಶದ ಅಂಗನವಾಡಿ ಕೇಂದ್ರ ಹಾಗೂ ಸರ್ಕಾರಿ ಶಾಲೆಗಳಿಗೆ ಅಗತ್ಯವಿರುವ ಮಕ್ಕಳಿಗೆ ಕುಳಿತುಕೊಳ್ಳಲು ಅಸನ ವ್ಯವಸ್ಥೆಗಾಗಿ ಚೇರ್ ಹಾಗೂ ಆಟೋಟ ಸಾಮಾಗ್ರಿ ಸಮವಸ್ತ್ರ ಸೇರಿದಂತೆ ಶೈಕ್ಷಣಿಕ ಪರಿಕರಗಳನ್ನು ನಮ್ಮ ಸಂಸ್ಥೆ ವತಿಯಿಂದ ನೀಡಿದ್ದು ಇದಕ್ಕೆ ಸಹಕರಿಸಿದ ಪ್ರತಿಯೊಬ್ಬರಿಗೂ ಧನ್ಯವಾದ ಹೇಳಿದರು.
ಗ್ರಾಮ ಪಂಚಾಯತಿ ಸದಸ್ಯ ಧನರಾಜ್ ಮಾತನಾಡಿ ಗ್ರಾಮಾಂತರ ಪ್ರದೇಶದ ಅಭಿವೃದ್ಧಿಗಾಗಿ ಸರ್ಕಾರದ ಅನುದಾನ ಜೊತೆ ಸಂಘ ಸಂಸ್ಥೆಗಳು ಸಹಕರಿಸಿದಾಗ ಬದಲಾವಣೆ ಕಾಣಬಹುದು ಈ ನಿಟ್ಟಿನಲ್ಲಿ ರೋಟರಿ ಮಿಡ್ ಟೌನ್ ಪಿರಿಯಾಪಟ್ಟಣ ಕಾರ್ಯ ಇತರರಿಗೆ ಮಾದರಿಯಾಗಿದೆ ಎಂದರು.
ಈ ಸಂದರ್ಭ ಗ್ರಾಮ ಪಂಚಾಯತಿ ಸದಸ್ಯೆ ದೇವಿರಮ್ಮ, ರೋಟರಿ ಕಾರ್ಯದರ್ಶಿ ಚೇತನ್ ಪದಾಧಿಕಾರಿಗಳಾದ ಐಕೆಪಿ ಹೆಗಡೆ, ಅಂಬಲಾರೆ ಬಸವೇಗೌಡ, ಎಂ.ಎಂ ರಾಜೇಗೌಡ, ಎಂ.ಪಿ ರಾಜು, ಗುರುದತ್, ಮಹದೇವಪ್ಪ, ಹೇಮೇಶ್, ಸುನಿಲ್, ಮುಖಂಡರಾದ ಗೋವಿಂದ್, ವೆಂಕಟೇಶ್, ಮಣಿಕಂಠ, ಚಂದ್ರು, ಸುನಿಲ್, ಗಣೇಶ್, ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ ಮತ್ತು ಶಿಕ್ಷಕರು ಇದ್ದರು


























