ಸಾಮಾಜಿಕ ಪಿಡುಗು ತೊಲಗಿಸಲು ಶಿಕ್ಷಣವೇ ಅಸ್ತ್ರ – ಶಾಸಕ ಡಾ ಶ್ರೀನಿವಾಸ.


ಸಂಜೆವಾಣಿ ವಾರ್ತೆ
ಕೂಡ್ಲಿಗಿ. ನ. 30 :
– ಬಾಲ್ಯವಿವಾಹ ಸೇರಿದಂತೆ ಇತರೆ ಸಾಮಾಜಿಕ ಪಿಡುಗೆoಬ ಮೌಢ್ಯತೆಯನ್ನು ತೊಡೆದು ಹಾಕಲು ಶಿಕ್ಷಣವೆಂಬ ಅಸ್ತ್ರದಿಂದ ಮಾತ್ರ ಸಾಧ್ಯ ಇದನ್ನರಿತು ತಾಲೂಕಿನ ಗಡಿಭಾಗದಲ್ಲಿ ಪಬ್ಲಿಕ್ ಶಾಲೆಗಳನ್ನು ತೆರೆಯುವ ಮೂಲಕ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತಿದ್ದೇನೆ ಇದನ್ನು ಮಕ್ಕಳ ಪಾಲಕ ಪೋಷಕರು ಮಕ್ಕಳನ್ನು ತಪ್ಪದೆ ಶಾಲೆಗೆ ಸೇರಿಸಿ ಸುಂದರ ಸಮಾಜ ನಿರ್ಮಾಣಕ್ಕೆ ಸಹಕರಿಸುವಂತೆ ಎಂದು ಕೂಡ್ಲಿಗಿ ಶಾಸಕ ಡಾ ಶ್ರೀನಿವಾಸ ಕರೆ ನೀಡಿದರು.
ಅವರು ತಾಲೂಕಿನತ ಪೂಜಾರಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಜನರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಒದಗಿಸುವ ನಿಟ್ಟಿನಲ್ಲಿ, ಶುಕ್ರವಾರದಂದು ಮನೆ ಮನೆಗೆ ನಮ್ಮ ಶಾಸಕರು – ಮನೆ ಬಾಗಿಲಿಗೆ ನಮ್ಮ ಸರ್ಕಾರ ಎಂಬ ವಿನೂತನ ಜನಸ್ಪಂದನ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡುತ್ತ ಬಾಲ್ಯವಿವಾಹ ಎನ್ನುವುದು ಕಾನೂನಿನಡಿ ಅಪರಾಧವಾಗಿದ್ದು 18 ವರ್ಷ ಮೇಲ್ಪಟ್ಟ ಯುವತಿ- 21 ರ ವಯಸ್ಸಿನ ಯುವಕರಿಗೆ ವಿವಾಹ ಮಾಡುವುದು ಕಾನೂನು ವ್ಯಾಪ್ತಿಯಲ್ಲಿ ಸರಿಯಾಗಿದೆ ಇದನ್ನು ಪ್ರತಿಯೊಬ್ಬ ನಾಗರೀಕರು ಅರಿತುಕೊಳ್ಳಬೇಕಾಗಿದೆ ಅಲ್ಲದೆ ಬಾಲ್ಯವಿವಾಹಕ್ಕೆ ಮುಂದಾಗುವ ಪಾಲಕ ಪೋಷಕರ ಮೇಲೆ ಕಾನೂನು ಕ್ರಮಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
  ತಾಲೂಕಿನ ಪೂಜಾರಹಳ್ಳಿ ವ್ಯಾಪ್ತಿಯ ಭಾಗದಲ್ಲಿ ಮಳೆಯ ಪ್ರಮಾಣ ಕಡಿಮೆ ಇದ್ದು ಕುಡಿಯುವ ನೀರಿನಲ್ಲಿ ಸಹ ಫ್ಲೋರೈಡ್ ಅಂಶ ಹೆಚ್ಚಾಗಿದ್ದು ಇದರ ಸೇವನೆ ಯಿಂದ ಎಳೇ ವಯಸ್ಸಿನ ಯುವಕರುಇಳೀ ವಯಸ್ಸಿನವರಂತೆ ಕಾಲಿನ ಮೂಲೆಗಳು ಸವೆದು ಅಂಗ ವೈಫಲ್ಯಾರಂತೆ ಕಾಣಸಿಗುತ್ತಾರೆ ಅದನ್ನು ಕಂಡ ನಾನು ವೃತ್ತಿಯಲ್ಲಿ ವೈದ್ಯನಾಗಿದ್ದು ಜನರ ಆರೋಗ್ಯ ಕಾಪಾಡಲು ಫ್ಲೋರೈಡ್ ಮುಕ್ತ ನೀರು ಬಳಸಿಕೊಳ್ಳಲು 217 ಕ್ಕೂ ಹೆಚ್ಚು ಹಳ್ಳಿಗಳಿಗೆ ತುಂಗಭದ್ರಾ ಹಿನ್ನಿರಿನಿಂದ ನೀರು ಸರಬರಾಜು ಮಾಡುವಲ್ಲಿ ಮುಂದಾಗಿದ್ದೇನೆ ಜನರ ಆರೋಗ್ಯ ಮಹಾ ಭಾಗ್ಯ ಎಂದು ಶಾಸಕರು ತಿಳಿಸಿದರು.
ಬಾಲ್ಯವಿವಾಹ ಇನ್ನು ಜೀವಂತವಾಗಿದೆ ಅಲ್ಲದೆ  ಸಂಬಂಧಿಗಳಲ್ಲಿ ಮದುವೆಯಾಗುವುದರಿಂದ ಹುಟ್ಟುವ ಮಕ್ಕಳಲ್ಲಿ ಅಂಗವೈಕಲ್ಯ ಸಮಸ್ಯೆ ಕಂಡುಬರುತ್ತಿದ್ದು, ಸುಮಾರು 117 ಮಕ್ಕಳು ಇದರಿಂದ ಬಳಲುತ್ತಿದ್ದಾರೆ. ಅಲ್ಲದೇ, ಪಂಚಾಯತಿ ವ್ಯಾಪ್ತಿಯಲ್ಲಿ 691 ವಿಧವೆಯರಿದ್ದಾರೆ. ಇಂತಹ ಸಾಮಾಜಿಕ ಸಮಸ್ಯೆಗಳನ್ನು ಮತ್ತು ಜನರು ಉದ್ಯೋಗ ಅರಸಿ ನಗರಗಳಿಗೆ ಗುಳೇ ಹೋಗುವುದನ್ನು ತಪ್ಪಿಸಲು ಸರ್ಕಾರ ಮತ್ತು ಸಮಾಜ ಒಂದಾಗಿ ಕೆಲಸ ಮಾಡಬೇಕಾಗಿದೆ ಎಂದು ಹೇಳಿದರು.
ಪೂಜಾರಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ‘ಕರ್ನಾಟಕ ಪಬ್ಲಿಕ್ ಶಾಲೆ’  ನಿರ್ಮಾಣಕ್ಕೆ ಕೆಲವೇ ದಿನಗಳಲ್ಲಿ ಭೂಮಿ ಪೂಜೆ ನೆರವೇರಿಸುವುದಾಗಿ ಭರವಸೆ ನೀಡಿದರು. ಇದೇ ವೇಳೆ, ಗಡಿ ಗ್ರಾಮವಾದ ಕಾತ್ರಿಕೆಹಟ್ಟಿಯ ಚಿನ್ನಹಗರಿ ಹಳ್ಳಕ್ಕೆ ಸೇತುವೆ ನಿರ್ಮಿಸಬೇಕೆಂದು ಅಲ್ಲಿನ ಜನರಲ್ಲಿ ಸು. 40 ವರ್ಷಗಳ ಬೇಡಿಕೆಯಾಗಿತ್ತು. ಈ ಸಮಸ್ಯೆಯನ್ನು ಬಗೆಹರಿಸಿರುವುದು ಗ್ರಾಮಸ್ಥರಲ್ಲಿ ಸಂತಸ ತಂದಿದೆ ಎಂಬ ಸಂತಸದ ವಿಷಯವನ್ನು ಹಂಚಿಕೊಂಡರು.
ಈ ಸಂದರ್ಭದಲ್ಲಿ ಕೂಡ್ಲಿಗಿ ತಹಶೀಲ್ದಾರ್ ವಿ ಕೆ ನೇತ್ರಾವತಿ, ಪಿಡಬ್ಲ್ಯೂಡಿ ಎಇಇ ನಾಗನಗೌಡ, ಪಿಆರ್ ಡಿ ಎಇಇ ಮಲ್ಲಿಕಾರ್ಜುನ, ತಾಲೂಕು ಪಂಚಾಯತಿ ಇಒ ನರಸಪ್ಪ, ಬಿಇಒ ಮೈಲೇಶ ಬೇವೂರು, ಅಧಿಕಾರಿ ತೇಜವರ್ಧನ, ಗ್ರಾ.ಪಂ. ಅಧ್ಯಕ್ಷೆ ಜ್ಯೋತಿ ವೆಂಕಟೇಶ ನಾಯ್ಕ, ಉಪಾಧ್ಯಕ್ಷೆ ದುರುಗಮ್ಮ ದುರುಗಪ್ಪ, ಕೂಡ್ಲಿಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ. ಗುರುಸಿದ್ದನಗೌಡ,  ಜಿ.ಪಂ.ಮಾಜಿ ಸದಸ್ಯ ಶಶಿಧರಸ್ವಾಮಿ, ಜಿ.ಪಂ. ನಾಮನಿರ್ದೇಶಿತ ಸದಸ್ಯ ಗವಿಯಪ್ಪ, ತಾ.ಪಂ. ನಾಮನಿರ್ದೇಶಿತ ಸದಸ್ಯೆ  ಭಾಗ್ಯಮ್ಮ ಓಬಣ್ಣ, ಕಾಂಗ್ರೆಸ್ ಮುಖಂಡರಾದ ಜಿ. ಓಬಣ್ಣ, ಮಾಜಿ ತಾ.ಪಂ. ಸದಸ್ಯ ಕಲ್ಲಹಳ್ಳಿ ಸಿದ್ದಣ್ಣ ಹಾಗೂ ಪೂಜಾರಹಳ್ಳಿ ಮಹೇಶ ಸೇರಿದಂತೆ ಗ್ರಾ.ಪಂ. ಸದಸ್ಯರು, ಪಿಡಿಒ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.