
ಸಂಜೆವಾಣಿ ವಾರ್ತೆ
ಬಳ್ಳಾರಿ, ಮೇ.16 ನಗರದ ಪ್ರತಿಷ್ಠಿತ ವೀ.ವಿ.ಸಂಘದ, ವೀರಶೈವ ಮಹಾವಿದ್ಯಾಲಯದಲ್ಲಿ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳನ್ನು ಕನ್ನಡ ವಿಭಾಗ ಮತ್ತು ಕನ್ನಡ ಸಾಂಸ್ಕೃತಿಕ ಸಂಘವತಿಯಿಂದ ಆಯೋಜಿಸಲಾಯಿತು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ, ಅಧ್ಯಕ್ಷ ಡಾ ನಿಷ್ಠಿ ರುದ್ರಪ್ಪ, ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತ ವಿದ್ಯಾರ್ಥಿಗಳಿಗೆ ಪಾಠ ಎಷ್ಟು ಮುಖ್ಯವೋ, ಪಾಠೇತರ ಚಟುವಟಿಕೆಗಳು ಅಷ್ಟೆ ಮುಖ್ಯವಾಗಿರುತ್ತವೆ. ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಸದೃಢ ಕಾಯ ಮತ್ತು ಮನಸ್ಸನ್ನ ಗಳಿಸಬಹುದು. ಹಾಗೇ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಕ್ರಿಯಾಶೀಲವಾಗುವುದರಿಂದ ಮನಸ್ಸು ಅಗುರ ಮತ್ತು ಉಲ್ಲಾಸ ವಾಗುತ್ತದೆ. ಒದುವ ವಿದ್ಯಾರ್ಥಿಗಳಿಗೆ ಪಾಠೇತರ ಚಟುವಟಿಕೆಗಳು ಪ್ರಧಾನ ಪಾತ್ರ ವಹಿಸಿ ಸೃಜನೆ ಶೀಲತೆಯನ್ನು ಹೆಚ್ಚಸುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಜಿ.ಮಲ್ಲನಗೌಡ ವಿದ್ಯಾರ್ಥಿಗಳಲ್ಲಿ ಅನೇಕ ಸೂಪ್ತ ಕಲೆಗಳು ಇರುತ್ತವೆ. ಆ ಕಲೆಗಳೆಗೆ ಪ್ರೋತ್ಸಾಹ ಮತ್ತು ಅವಕಾಶ ನೀಡುವುದರ ಮೂಲಕ ಅವರಲ್ಲಿರುವ ಕಲೆ ಮತ್ತು ಕಲಾವಿಗನನ್ನು ವರ ತೆಗೆಯಬಹುದು. ಆ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಕಲಾವಿಗರನ್ನ ಕಲೆಯನ್ನ ಬೆಳಸಿದಂತಾಗುತ್ತದೆ. ಕಾಲೇಜು ಮಟ್ಟದಲ್ಲಿ ಇತರ ಸೃಜನಶೀಲ ಚಟುವಟಿಕೆಗಳು ನಿರಂತರ ನಡೆದಷ್ಟು ಹೆಚ್ಚು ವಿದ್ಯಾರ್ಥಿಗಳು ಕ್ರೀಯಾಶೀಲಾರಾಗುತ್ತಾರೆಂದು ನುಡಿದರು.
ಡಾ.ಶ್ಯಾಮೂರ್ತಿ.ಜಿ, ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಚಾಲಕರು ಹಾಗೂ ಕನ್ನಡ ವಿಭಾಗದ ಮುಖ್ಯಸ್ಥರು, ಸಾಂಸ್ಕೃತಿಕ ಚಟುವಟಿಕೆಗಳ ಆಶೋತ್ತರಗಳು ತಿಳಿಸುತ್ತ ಸಾಂಸಕೃತಿಕ ಸ್ಪರ್ಧೆಗಳಲ್ಲಿ ಕ್ರಿಯಾಶೀಲರಾದಷ್ಟು ಬೇರೆ ಬೇರೆ ಕೌಶಲ್ಯಗಳನ್ನು ಬೆಳಸಿಕೊಳ್ಳಲ್ಲು ಸಹಕಾರಿ ಯಾಗುತ್ತದೆ ಎಂದು ಪ್ರಸ್ತಾವಿಕ ನುಡಿಗಳಲ್ಲಿ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಐಕ್ಯೂಎಸಿ ಸಂಯೋಜಕರಾದ ಡಾ.ವಿನೋದ್ ಕುಮಾರ್, ಡಾ ಶರಣಬಸವ, ಮುಖ್ಯಸ್ಥರು ಸಸ್ಯಶಾಸ್ತ್ರ ವಿಭಾಗ, ಕೆ.ಪಿ.ರಾಧಸ್ವಾಮಿ, ಮುಖ್ಯಸ್ಥರು, ರಾಜ್ಯಶಾಸ್ರ್ತ ವಿಭಾಗ, ಶ್ರೀಮತಿ ಶೈಲಜ ಎಸ್ ರೆಡ್ಡಿ, ಉಪನ್ಯಾಸಕರು, ಸಮಾಜಶಾಸ್ರ್ತ ವಿಭಾಗ, ಕುಮಾರಿ ರೇಖಾಶ್ರೀ.ಎಸ್ ಉಪನ್ಯಾಸಕರು, ಸಸ್ಯಶಾಸ್ರ್ತ ವಿಭಾಗ ಸೇರಿದಂತೆ ಬೋಧಕ, ಬೋಧೇತರ ಸಿಬ್ಬಂಧಿ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದರು. ಡಾ.ಭ್ರಮರಾಂಭ.ವೈ ಕಾರ್ಯಕ್ರಮವನ್ನು ನಿರೂಪಿಸಿದರು.






















