ಸವಿತಾ ಸಮಾಜದ ವತಿಯಿಂದ ಸವಿತಾ ಮಹರ್ಷಿ ಜಯಂತಿ ಆಚರಣೆ

ಸುಳ್ಯ:ಸುಳ್ಯ ಸವಿತಾ ಸಮಾಜದ ವತಿಯಿಂದ ಅಂಬಟಡ್ಕದ ವರ್ತಕರ ಭವನದಲ್ಲಿ ಸವಿತಾ ಮಹರ್ಷಿ ಜಯಂತಿ ಆಚರಣೆ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಕಾರ್ಯಧ್ಯಕ್ಷ ಉದಯ ಜಟ್ಟಿಪಳ್ಳ ವಹಿಸಿಕೊಂಡಿದ್ದರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಅರೆಭಾಷೆ ಅಕಾಡೆಮಿಯ ಅಧ್ಯಕ್ಷ ಸದಾನಂದ ಮಾವಜಿ, ರೆಡ್ ಕ್ರಾಸ್ ಸಂಸ್ಥೆಯ ಸುಳ್ಯ ತಾಲೂಕು ಸಭಾಪತಿ ಪಿ. ಬಿ. ಸುಧಾಕರ್ ರೈ , ಸರಕಾರಿ ಪಿಯು ಕಾಲೇಜಿನ ಉಪನ್ಯಾಸಕಿ ಚಂದ್ರಮತಿ, ಸುಳ್ಯ ತಾಲೂಕು ಬಾರ್ಬರ್ ಅಸೋಸಿಯೇಷನ್ ಅಧ್ಯಕ್ಷ ಪದ್ಮನಾಭ ಭಂಡಾರಿ ಉಪಸ್ಥಿತರಿದ್ದರು.
ಸವಿತಾ ಸಮಾಜದ ಕಾರ್ಯದರ್ಶಿ ನವೀನ ಸೂಂತೋಡು ಸ್ವಾಗತಿಸಿ, ಬಾರ್ಬರ್ ಅಸೋಸಿಯೇಷನ್ ಕಾರ್ಯದರ್ಶಿ ಭವಾನಿ ಶಂಕರ್ ಕೇರ್ಪಳ ಕಾರ್ಯಕ್ರಮ ನಿರೂಪಿಸಿದರು.
ಸಮಾರಂಭದಲ್ಲಿ ಅಂಚೆ ಇಲಾಖೆ ವತಿಯಿಂದ ಜೀವವಿಮೆ ಮತ್ತು ಅಪಘಾತ ವಿಮೆಯ ಬಗ್ಗೆ ಮಾಹಿತಿ ಕಾರ್ಯಗಾರ ಹಾಗೂ ಆಧಾರ್ ತಿದ್ದುಪಡಿ ಶಿಬಿರ ನಡೆಯಿತು.