Home ಜಿಲ್ಲೆ ಸರ್ವರಿಗೂ ಉಚಿತ ಚಿಕಿತ್ಸೆಗಾಗಿ

ಸರ್ವರಿಗೂ ಉಚಿತ ಚಿಕಿತ್ಸೆಗಾಗಿ

oplus_6291456

(ಸಂಜೆವಾಣಿ ಪ್ರತಿನಿಧಿಯಿಂದ)

ಬಳ್ಳಾರಿ, ಫೆ.07: ನಗರದಲ್ಲಿ ಫೆ.10 ರಂದು ಡ್ರಗ್ ಆಕ್ಷನ್ ಪೋರಂ, ಲಿಂಗತ್ವ ಮತ್ತು ಲೈಂಗಿಕ ಬಹುತ್ವಕ್ಕಾಗಿ ಚಳುವಳಿ, ಪ್ರಗತಿ ಸದಾ ಸೇವಾ ಸಂಘ, ಜನವಾದಿ ಮಹಿಳಾ ಸಂಘಟನೆಗಳು ಸಂಯುಕ್ತವಾಗಿ ಆರೋಗ್ಯ ಹಕ್ಕಿನ ಜಾಥಾ ಹಮ್ಮಿಕೊಂಡಿದೆ ಎಂದು ವೀಣಾ ತಿಳಿಸಿದರು.

ಸರ್ಕಾರಿ ಆಸ್ಪತ್ರೆಗಳಲ್ಲಿ ಬಿಪಿಎಲ್, ಎಪಿಎಲ್ ಪಡಿತರ ಕಾರ್ಡು ಹೊಂದಿದವರು ಎಂಬ ಬೇದ ಭಾವ ಬೇಡ, ಅನಾರೋಗ್ಯ ಎಂದು ಆಸ್ಪತ್ರೆ ಗೆ ಬರುವ ಎಲ್ಲರಿಗೂ ಉಚಿತ ಚಿಕಿತ್ಸೆ ನೀಡಬೇಕು ಎಂದರು. ಆರೋಗ್ಯ ಹಕ್ಕಿನ ಕಾಯ್ದೆ ಜಾರಿಗೆ ಬರಬೇಕು ಎಂದು ಆಗ್ರಹಿಸಿದರು.

ಆಯುಷ್ಯ್ಮಾನ್ ಕಾರ್ಡು ಹೊಂದಿದ ಲಿಂಗತ್ವ ಅಲ್ಪ ಸಂಖ್ಯಾತರಿಗೆ ಎಸ್ ಆರ್ ಎಸ್ ಚಿಕಿತ್ಸೆಗೂ ಅವಕಾಶ ನೀಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.

ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡುವಾಗ, ಹೆರಿಗೆ ಆದಾಗ ಅಲ್ಲಿನ ಡಿ ಗ್ರೂಪ್ ನೌಕರರಿಂದ ಹಣ ವಸೂಲಿ ಮಾಡಲಾಗುತ್ತಿದೆ. ಅದನ್ನು ನಿಯಂತ್ರಿಸಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಟಿಯಲ್ಲಿ: ಫರ್ವಿನ್ ಬಾನು, ಚಂದ್ರಕುಮಾರಿ, ನಾಗರಾಜ್, ವೆಂಕಟೇಶ್, ಪೂಜಾ ಮೊದಲಾದವರು ಇದ್ದರು.