Home Uncategorized ಸರ್ಕಾರಿ ಶಾಲೆಯಲ್ಲಿ ಕಲಿತವರು ಉನ್ನತ ಹುದ್ದೆಯಲ್ಲಿದ್ದಾರೆ  :ಕೆ.ನೇಮಿರಾಜ್

ಸರ್ಕಾರಿ ಶಾಲೆಯಲ್ಲಿ ಕಲಿತವರು ಉನ್ನತ ಹುದ್ದೆಯಲ್ಲಿದ್ದಾರೆ  :ಕೆ.ನೇಮಿರಾಜ್

Oplus_0

ಸಂಜೆವಾಣಿ ವಾರ್ತೆ

ಹಗರಿಬೊಮ್ಮನಹಳ್ಳಿ. ಫೆ.22 ಸ್ವತಂತ್ರ ಪೂರ್ವದಲ್ಲಿ ತೆರೆದ ಸರ್ಕಾರಿ ಶಾಲೆಗಳು ಕಲಿಕೆಯ ಬುನಾದಿಯಾಗಿದ್ದವು. ಅಂತಹ ಶಾಲೆಯಲ್ಲಿ ಕಲಿತು ಉನ್ನತ ಹುದ್ದೆ ಅಲಂಕರಿಸಿದ್ದಾರೆ. ಎಂದು ಶಾಸಕ ಕೆ ನೇಮಿರಾಜ ನಾಯ್ಕ್ ಹೇಳಿದರು.

 ತಾಲೂಕಿನ ಬೆಣಕಲ್ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶತಮಾನೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಆಗಿನ ಕಷ್ಟದ ದಿನಗಳಲ್ಲಿ ಶಿಕ್ಷಣ ಕಲಿಯುವುದು ಒಂದು ಹೋರಾಟವಾಗಿತ್ತು. ಅಂತಹ ಒಂದು ಸಂದಿಗ್ಧ  ಸ್ಥಿತಿಯಲ್ಲಿ ವ್ಯಾಸಂಗ ಮಾಡಿ ಉನ್ನತ ಹುದ್ದೆಗಳನ್ನು ಅಲಂಕರಿಸಿ ಜೀವನದಲ್ಲಿ ಯಶಸ್ಸು ಕಂಡಿರುವವರು ಸಾಕಷ್ಟು ಜನ ಇದ್ದಾರೆ. ಆಗಿನ ಎಸ್ ಎಸ್ ಎಲ್ ಸಿ ಈಗಿನ ಡಿಗ್ರಿ ಸಮ ಎಂದರು ತಪ್ಪಲ್ಲ.ಶಿಕ್ಷಣದ ಜೊತೆಗೆ ಸಂಸ್ಕಾರ ಇತ್ತು. ಇತ್ತೀಚಿಗೆ  ಸಂಸ್ಕಾರ ಕಡಿಮೆಯಾಗುತ್ತದೆ. ದೊಡ್ಡವರ ಬಗ್ಗೆ ಗೌರವ, ಭಯ ಹೊರಟುಹೋಗಿದೆ. ಪಾಲಕರು ತಮ್ಮ ಮಕ್ಕಳಿಗೆ ವಿದ್ಯಾಭ್ಯಾಸದ ಜೊತೆಗೆ ಸಂಸ್ಕಾರ ಸಂಸ್ಕೃತಿ ಕಲಿಸಬೇಕು ಎಂದರು.

 ಈ ಗ್ರಾಮದ ಸರ್ಕಾರಿ ಶಾಲೆಯನ್ನು ಮೇಲ್ದರ್ಜೆಗೇರಿಸಿ ಕೆಪಿಎಸ್ ಶಾಲೆಯನ್ನು ತೆರೆಯಲಾಗುವುದು. ಮಕ್ಕಳಿಗೆ ಎಲ್ಲಾ ಶಿಕ್ಷಣ ಒಂದೇ ಸೂರಿನಲ್ಲಿ ಸಿಗುವಂತೆ ಮಾಡಲಾಗುವುದು ಎಂದರು.

 ಕಾರ್ಯಕ್ರಮದ ಪ್ರಾಸ್ತಾವಿಕ ವನ್ನು ಪ್ರಾಂಶುಪಾಲ ಜಿ. ಬಸವರಾಜ್ ಮಾತನಾಡಿದರು.

 ಶಾಲೆಯ ಮುಖ್ಯ ಗುರುಗಳಾದ ಹುಸೇನ್ ಸಾಬ್ ಶಾಲಾ  ವರದಿ ವಾಚಿಸಿದರು.

. ಸಮಾರಂಭದ ಸಾನಿಧ್ಯ ಮರಿ ಶಾಂತವೀರ ಸ್ವಾಮೀಜಿ,

ಶಾಖಾ ಗವಿ ಮಠ ಕಡಲಬಾಳು ಶಿವಲಿಂಗೇಶ್ವರ ರುದ್ರಮುನಿ ಶಿವಚಾರ್ಯ ಮಹಾಸ್ವಾಮಿ ಹಂಪಸಾಗರ, ವಹಿಸಿದ್ದರು.

 ಹಳೆಯ ವಿದ್ಯಾರ್ಥಿಗಳು, ಊರಿನ ಗ್ರಾಮಸ್ಥರು ಮುಖಂಡರು ಎಲ್ಲರೂ ಸೇರಿ ಎರಡು ದಿನ ಅದ್ದೂರಿಯಾಗಿ ಶಾಲಾ ಶತಮಾನೋತ್ಸವವನ್ನು ಹಮ್ಮಿಕೊಂಡು ಹಳೆಯ ನೆನಪುಗಳನ್ನು ಮೆಲುಕು  ಹಾಕಿದರು.

 ಈ ಸಂದರ್ಭದಲ್ಲಿ ಪ್ರಭಾರಿ ಬಿಇಒ ಎಂ ಎಸ್ ಪ್ರಭಾಕರ್, ಪ್ರಭಾರಿ ಬಿ ಆರ್ ಸಿ  ಮಲ್ಲಿಕಾರ್ಜುನ, ಟಿ ಹೆಚ್ ಒ ಪ್ರವೀಣ್ ಕುಮಾರ , ಗ್ರಾ ಪಂ ಮಾಜಿ ಅಧ್ಯಕ್ಷರು ಲಕ್ಷ್ಮವ್ವ, ಜಿಲ್ಲಾ ಜೆ ಡಿ ಎಸ್ ಅಧ್ಯಕ್ಷ ಬಾದಾಮಿ ಮೃತ್ಯುಂಜಯ, ಬಿಜೆಪಿ ಮಂಡಲ ಅಧ್ಯಕ್ಷ ಬೆಣಕಲ್ ಪ್ರಕಾಶ್,  ಕನ್ನಿಹಳ್ಳಿ ಚಂದ್ರು ಶೇಖರ್,ಶ್ರೀ ವಾಸ್ತವ, ನಿಂಗಪ್ಪ, ಚಿದಾನಂದಪ್ಪ ಶಿವದೇವಯ್ಯ, ಗಣೇಶ, ಕೊಟ್ರಯ್ಯ ಒಡೆಯರ್,

ನಿರೂಪಣೆ ನಿವೃತ್ತ ಶಿಕ್ಷಕ ಲೋಕೇಶ್ ಶಿಕ್ಷಕ,ಬಸವರಾಜ್, ಸ್ವಾಗತ ನಿವೃತ್ತ ಶಿಕ್ಷಕ ಕೆ.ಕೊಟ್ರೇಶ್ ,ಪ್ರಾಥನೆ ಶಾರದಾ ಮಂಜುನಾಥ್ ಮತ್ತು ಸಂಗಡಿಗರು ನಿರ್ವಹಿಸಿದರು