
ಸಂಭಾಲ್,ಅ.6-ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯ ಅಸ್ಮೋಲಿ ಪೆÇಲೀಸ್ ಠಾಣೆ ವ್ಯಾಪ್ತಿಯ ರಾಯಾ ಬುಜುರ್ಗ್ ಗ್ರಾಮದಲ್ಲಿ ಸರ್ಕಾರಿ ಭೂಮಿಯಲ್ಲಿ ಅಕ್ರಮವಾಗಿ ಮಸೀದಿ ಮತ್ತು ಮದುವೆ ಮಂಟಪದ ವಿರುದ್ಧ ಆಡಳಿತ ಕ್ರಮ ಕೈಗೊಂಡಿದೆ. ಅಕ್ರಮವಾಗಿ ನಿರ್ಮಿಸಲಾಗಿದ್ದ ಮದುವೆ ಮಂಟಪವನ್ನು ಕೆಡವಲಾಗಿದೆ.
ಗೌಸುಲ್ಬರಾ ಮಸೀದಿಯನ್ನು ಕೆಡವಲು ಜಿಲ್ಲಾಡಳಿತ ಮುಂದಾಗಿತ್ತು. ಆದರೆ ಮಸೀದಿ ಸಮಿತಿಯ ಸದಸ್ಯರು ನಾವೇ ಈ ಮಸೀದಿಯನ್ನು ಕೆಡವುತ್ತೇವೆ. 4 ದಿನಗಳ ಸಮಯ ನೀಡಿ ಎಂದು ಕೋರಿದ ಹಿನ್ನೆಲೆಯಲ್ಲಿ ಆಡಳಿತವು ಕೋರಿಕೆ ಒಪ್ಪಿಕೊಂಡಿತ್ತು.
ಅನುಮತಿ ಪಡೆದ ನಂತರ,ಈ ಗಡುವು ಮುಗಿಯುತ್ತಿದ್ದಂತೆ ಮಸೀದಿ ಸಮಿತಿಯು ಮಸೀದಿಯನ್ನು ಕೆಡವಲು ಮುಂದಾಗಿ ಸುತ್ತಿಗೆಯಿಂದ ಮಸೀದಿಯನ್ನು ಕೆಡವಲು ಪ್ರಾರಂಭಿಸಿದೆ, ಆದರೆ ಪ್ರಗತಿ ನಿಧಾನವಾಗಿತ್ತು. ಏತನ್ಮಧ್ಯೆ, ಸಮಿತಿಯು ಅಲಹಾಬಾದ್ ಹೈಕೋರ್ಟ್‍ನಲ್ಲಿ ಸಲ್ಲಿಸಿದ ಅರ್ಜಿಯನ್ನು ವಜಾಗೊಳಿಸಲಾಗಿದೆ. ಅನುಮತಿಯ ಅಂತಿಮ ದಿನವಾದ ಭಾನುವಾರ, ಸಮಿತಿಯು ಖಾಸಗಿ ಬುಲ್ಡೋಜರ್‍ಗಳನ್ನು ನೇಮಿಸಿಕೊಂಡು ಆಡಳಿತಕ್ಕೆ ನೀಡಿದ ಭರವಸೆಯನ್ನು ಉಳಿಸಿಕೊಳ್ಳಲು ಮಸೀದಿಯನ್ನು ಕೆಡವಲು ಪ್ರಾರಂಭಿಸಿ ಮಸೀದಿ ಕೆಡವುವ ಕಾರ್ಯ ಪೂರ್ಣಗೊಳ್ಳಿಸಿದೆ.






























