
ನವದೆಹಲಿ,ಫೆ.28:- ಬೊಲಿವಿಯಾದಲ್ಲಿ ನೋಟುಗಳನ್ನು ಸಾಗಿಸುತ್ತಿದ್ದ ವಾಯುಪಡೆಯ ಸರಕು ಸಾಗಾಣೆ ವಿಮಾನ ಅಪಘಾತಕ್ಕೀಡಾಗಿ ಕನಿಷ್ಠ 15 ಜನರು ಸಾವನ್ನಪ್ಪಿದ್ದು 20ಕ್ಕೂ ಅಧಿಕ ಜನರು ಗಾಯಗೊಂಡಿರುವ ಘಟನೆ ನಡೆದಿದೆ.
ಪಶ್ಚಿಮ ನಗರವಾದ ಎಲ್ ಆಲ್ಟೊದಲ್ಲಿ ಬೊಲಿವಿಯನ್ ವಾಯುಪಡೆಯ ಸರಕು ವಿಮಾನ ಅಪಘಾತಕ್ಕೀಡಾದ ನಂತರ ಕನಿಷ್ಠ 15 ಜನರು ಸಾವನ್ನಪ್ಪಿದ್ದು ಹಲವು ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ ಎಂದು ಅಗ್ನಿಶಾಮಕ ದಳದ ಸಿಬ್ಬಂದಿ ಮಾಹಿತಿ ನೀಡಿದ್ದಾರೆ
ಸಾಂಟಾ ಕ್ರೂಜ್ ನಗರದಿಂದ ಎಲ್ ಆಲ್ಟೊ ವಿಮಾನ ನಿಲ್ದಾಣಕ್ಕೆ ವಿಮಾನ ಆಗಮಿಸುತ್ತಿದ್ದಾಗ ವೇಳೆ ಈ ಅಪಘಾಥ ಸಂಭವಿಸಿದೆ ಎಂದು ವಾಯುಯಾನ ಅಧಿಕಾರಿಗಳು ತಿಳಿಸಿದ್ದಾರೆ.
ಸರಕು ಸಾಗಾಣೆ ವಿಮಾನ ರನ್‍ವೇಯಿಂದ ಜಾರಿದ ಹಿನ್ನೆಲೆಯಲ್ಲಿ ಹತ್ತಿರದ ವಾಹನಗಳಿಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ
ರಕ್ಷಣಾ ಸಚಿವಾಲಯ ಪ್ರತಿಕ್ರಿಯೆ ನೀಡಿ ವಾಯುಸೇನೆಯ 130 ಹಕ್ರ್ಯುಲಸ್ ವಿಮಾನ ರಕ್ಷಣಾ ಕಾರ್ಯದಲ್ಲಿ ಭಾಗಿಯಾಗಿದೆ. ಬೊಲಿವಿಯಾದ ಸೆಂಟ್ರಲ್ ಬ್ಯಾಂಕ್‍ಗೆ ನೋಟುಗಳನ್ನು ಸಾಗಿಸುತ್ತಿದ್ದ ವೇಳೆ ಈ ಘಟನೆ ನಡೆದಿದೆ. ವಿಮಾನದಲ್ಲಿ ಎಷ್ಟು ಜನರು ಇದ್ದರು ಎನ್ನುವುದು ಇನ್ನೂ ನಿಖರವಾಗಿ ತಿಳಿದಿಲ್ಲ
ಚದುರಿದ ನೋಟುಗಳನ್ನು ತೆಗೆದುಕೊಳ್ಳಲು ಜನರು ಪ್ರಯತ್ನಿಸುತ್ತಿದ್ದು ಜನ ಸಮೂಹವನ್ನು ಚದುರಿಸಲು ಪೆÇಲೀಸರು ಅಶ್ರುವಾಯು ಮತ್ತು ಲಾಠಿ ಪ್ರಹಾರ ನಡೆಸಿದ್ದಾರೆ
ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಪೆÇಲೀಸರು ಅಶ್ರುವಾಯು ಸಿಡಿಸುತ್ತಿದ್ದು ಅದರಿಂದ ತಪ್ಪಿಸಿಕೊಳ್ಳಲು ಪರದಾಡುತ್ತಿರುವ ವಿಡಿಯೋ ಇದಾಗಿದೆ ಪೆÇಲೀಸ್ ಅಧಿಕಾರಿಗಳು, ಕೆಲವರು ಗುರಾಣಿಗಳನ್ನು ಹಿಡಿದುಕೊಂಡು ಸಾಲುಗಟ್ಟಿ ನಿಂತಿರುವುದನ್ನು ತೋರಿಸಲಾಗಿದೆ. ಜನಸಂದಣಿಯಲ್ಲಿ ಕೆಲವರು ಪೆÇಲೀಸರ ಮೇಲೆ ಕಲ್ಲುಗಳನ್ನು ಎಸೆಯುವುದನ್ನು ಕಾಣಬಹುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ
“ಈ ದುರಂತಕ್ಕೀಡಾದ ವಿಮಾನದಿಂದ ಹಣವನ್ನು ತೆಗೆದುಕೊಳ್ಳಲು ಪ್ರಯತ್ನಿಸುತ್ತಿರುವವರಿಗೆ, ಹಣ ಸೆಂಟ್ರಲ್ ಬ್ಯಾಂಕ್‍ನಿಂದ ನೀಡಲ್ಪಟ್ಟಿಲ್ಲ ಮತ್ತು ಸರಣಿ ಸಂಖ್ಯೆ ಹೊಂದಿಲ್ಲದ ಕಾರಣ ಯಾವುದೇ ಕಾನೂನುಬದ್ಧ ಮೌಲ್ಯವನ್ನು ಹೊಂದಿಲ್ಲ ಎಂದು ರಕ್ಷಣಾ ಸಚಿವ ಮಾರ್ಸೆಲೊ ಸಲಿನಾಸ್ ಹೇಳಿದ್ದಾರೆ
ಅಪಘಾತದ ಸ್ಥಳದಲ್ಲಿ ಕೆಲಸ ಮಾಡುತ್ತಿರುವ ಅಗ್ನಿಶಾಮಕ ದಳದವರು ಕನಿಷ್ಠ 20 ಜನರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.ಅಪಘಾತದ ನಂತರ ಎಲ್ ಆಲ್ಟೊ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತಾತ್ಕಾಲಿಕವಾಗಿ ಮುಚ್ಚಲಾಯಿತು. ವಿಮಾನ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದೆ.


























