ಸರಕಾರಿ ಶಾಲೆಯನ್ನು ಉಳಿಸುವ ಕಾರ್ಯ ನಮ್ಮ ಜವಾಬ್ದಾರಿ – ಭಾಗೀರಥಿ ಮುರುಳ್ಯ

ಮುಗೇರು – ಮಾಣಿಮಜಲು ಪ್ರಾಥಮಿಕ ಶಾಲಾ ವಾರ್ಷಿಕೋತ್ಸವ
ಸುಳ್ಯ:ಮಕ್ಕಳು ಸರಕಾರಿ ಶಾಲೆಗಳನ್ನು ಬಿಟ್ಟು ಖಾಸಾಗಿ ಶಾಲೆಗಳತ್ತ ತೆರಳುತ್ತಿದ್ದಾರೆ. ಇದರಿಂದ ಸರಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಆಗಿ ಶಾಲೆ ಮುಚ್ಚುವ ಸ್ಥಿತಿ ತಲುಪಿದೆ. ಸರಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವ ಕಾರ್ಯ ನಮ್ಮೇಲ್ಲರ ಕರ್ತವ್ಯ ಎಂದು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.
ಕನಕಮಜಲು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ, ಹಿರಿಯ ವಿವಿಧ ವಿದ್ಯಾರ್ಥಿ ಸಂಘ ಮುಗೇರು, ಮಾಣಿಮಜಲು ಇವುಗಳ ಜಂಟಿ ಆಶ್ರಯದಲ್ಲಿ ಮುಗೇರು . ಮಾಣಿಮಜಲು ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ನಡೆದ ಶಾಲಾ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.
ಮಾಣಿಮಜಲು – ಮುಗೇರು ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ದಿವಾಕರ ಕಾಳಪಜ್ಜನ ಧ್ವಜಾರೋಹಣ ನೆರವೇರಿಸಿದರು. ಅಧ್ಯಕ್ಷತೆಯನ್ನು ಕನಕಮಜಲು ಗ್ರಾ.ಪಂ ಅಧ್ಯಕ್ಷೆ ಶಾರದಾ ಉಗ್ಗಮೂಲೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕನಕಮಜಲು ಗ್ರಾ.ಪಂ ಉಪಾಧ್ಯಕ್ಷ ಶ್ರೀಧರ ಕುತ್ಯಾಳ, ಗ್ರಾ.ಪಂ ಸದಸ್ಯರಾದ ದೇವಕಿ ಕುದ್ಕುಳಿ, ಜಗನ್ನಾಥ ಬಿ.ಹೆಚ್ ಮಾಣಿಮಜಲು, ಇಬ್ರಾಹಿಂ ಖಾಸಿಂ, ಪ್ರೇಮಲತಾ ಪಂಜಿಕೋಡಿ, ಸುಮಿತ್ರಾ ಕುತ್ಯಾಳ, ಕನಕ ಮಜಲು ಸೊಸೈಟಿ ಅಧ್ಯಕ್ಷ ಸುಧಾಕರ ಕಾಮತ್., ಕ್ಷೇತ್ರ ಶಿಕ್ಷಣಾಧಿಕಾರಿಗಳು ಶೀತಲ್ ಯು.ಕೆ, ಸೋಣಂಗೇರಿ ಕ್ಲಸ್ಟರ್ ಸಮೂಹ ಸಂಪನ್ಮೂಲ ವ್ಯಕ್ತಿ ಅನುರಾಧ ಎ.ಆರ್, ಪ್ರಗತಿಪರ ಕೃಷಿಕ ದಿನೇಶ್ ರಾವ್ ಮುಗೇರು, ಸುಳ್ಯ ಎನ್.ಎಸ್.ಎಸ್ ಸೇವಾ ಸಂಘ ಗೌರವಾಧ್ಯಕ್ಷ ಬಾಲಕೃಷ್ಣ ಬೊಳ್ಳೂರು, ಸುಳ್ಯ ಸರಕಾರಿ ಪ. ಪೂ ಕಾಲೇಜಿನ ಉಪಪ್ರಾಂಶುಪಾಲರಾದ ಪ್ರಕಾಶ್ ಮೂಡುತ್ತಾಯ, ಶಾಲಾ ಮುಖ್ಯ ಗುರು ರತಿ, ವಿನ್ಯಾಸ ಕಣಜಾಲು, ಹರಿವಂಶ್ ಉಪಸ್ಥಿತರಿದ್ದರು.
ಕಾರ್‍ಯಕ್ರಮದಲ್ಲಿ ಸ್ಥಳೀಯ ಸಾಧರನ್ನು ಗೌರವಿಸಲಾಯಿತು. ದಿವಾಕರ ಕಾಳಪ್ಪಜ್ಜನ ಮನೆ ಸ್ವಾಗತಿಸಿ, ಸಹಶಿಕ್ಷಕಿ ಶುಭ ವಂದಿಸಿದರು. ಬೆಟ್ಟಂಪಾಡಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರು ದಾಮೋದರ ಕಣಜಾಲು ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಅಂಗನವಾಡಿ ಪುಟಾಣಿ ಮಕ್ಕಳಿಂದ ಮತ್ತು ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಹಿರಿಯ ವಿದ್ಯಾರ್ಥಿಗಳಿಂದ “ಸಾಂಸ್ಕೃತಿಕ ಕಲರವ” ಹಾಗೂ ನಾಟಕ “ಪಾಠ ಶಾಲೆ ನಡೆಯಿತು. ಕು. ಸಾಯಿ ಶ್ರುತಿ ಪಿಲಿಕಜೆ ಇವರಿಂದ “ಮಾತನಾಡುವ ಗೊಂಬೆ”, ಹಾಗೂ ಸಂಜೆ ೫ ಗಂಟೆಯಿಂದ ಶಾಲಾ ವಿದ್ಯಾರ್ಥಿಗಳಿಂದ ಹಾಗೂ ಹಿರಿಯ ವಿದ್ಯಾರ್ಥಿಗಳಿಂದ ಹಾಗೂ ಬಿ. ಹೆಚ್ ವೆಂಕಪ್ಪ ಗೌಡ ಬೆಳ್ಳಿಪ್ಪಾಡಿ ಹಳೆಮನೆ ನಿರ್ದೇಶನದ” ಯಕ್ಷಗಾನ ಬಯಲಾಟ ” ಐರಾಸುರ ವಧೆ, ಅತಿಥಿ ಕಲಾವಿದರ ಕೂಡುವಿಕೆಯಿಂದ ಅಗ್ರಪೂಜೆ ಯಕ್ಷಗಾನ ನಡೆಯಿತು.