ಸರಕಾರಿ ಪ್ರೌಢಶಾಲೆ ಆರ್‌ಎಂಎಸ್‌ಎ ವಿಟ್ಲ ಇದರ ವಾರ್ಷಿಕ ಕ್ರೀಡಾ ಕೂಟ

ವಿಟ್ಲ ಸರಕಾರಿ ಪ್ರೌಢಶಾಲೆ ಡಿmsಚಿ ವಿಟ್ಲ ಇದರ ವಾರ್ಷಿಕ ಕ್ರೀಡಾ ಕೂಟವನ್ನು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಮಾನಾಥ ವಿಟ್ಲ ಉದ್ಘಾಟಿಸಿದರು. ಎಸ್ ಡಿ ಎಂ ಸಿ ಅಧ್ಯಕ್ಷೆ ರಶ್ಮಿ ಹರೀಶ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವಿಟ್ಲ ಪಟ್ಟಣ ಪಂಚಾಯತ್ ಸ್ಥಾಯಿ ಸಮಿತಿಯ ಅಧ್ಯಕ್ಷ ರವಿಪ್ರಕಾಶ್, ಪುತ್ತೂರು ವಿವೇಕಾನಂದ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ರವಿಶಂಕರ್, ತುಳಸಿ ದಾಸ್ ಶೆಣೈ ಇವರು ಭಾಗವಹಿಸಿದ್ದರು. ಪ್ರಾಥಮಿಕ ಶಾಲಾ ವಿಭಾಗದ ಮುಖ್ಯ ಶಿಕ್ಷಕಿ ಶ್ರೀಮತಿ, ಎಸ್ ಡಿ ಎಂ ಸಿ ಅಧ್ಯಕ್ಷ ರವಿಶಂಕರ್ ಶಾಸ್ತ್ರಿ, ಹೈಸ್ಕೂಲ್ ವಿಭಾಗದ ಪ್ರಭಾರ ಮುಖ್ಯ ಶಿಕ್ಷಕಿ ಅಣ್ಣಪೂರ್ಣ, ಎಸ್ ಡಿ ಎಂ ಸಿ ಸದಸ್ಯರು, ಶಿಕ್ಷಕರು ಪೋಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಶಾಲಾ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಸುದೀಕ್ಷ ಸ್ವಾಗತಿಸಿದರು. ವೈನವಿ ಕ್ರೀಡಾ ವರದಿ ವಾಚಿಸಿದರು. ಅನುಶ್ರೀ ಪ್ರತಿಜ್ಞಾ ವಿಧಿ ಬೋಧಿಸಿದರು. ಚೈತನ್ಯ ವಂದಿಸಿದರು. ಸ್ಪೂರ್ತಿ ನಿರೂಪಿಸಿದರು. ಜಗದೀಶ್ ಶೆಟ್ಟಿ ಮತ್ತು ಶ್ವೇತಾ ಸಹಕರಿಸಿದರು.