ದಾವಣಗೆರೆ, ಅ. ೧೪- ಕರ್ನಾಟಕ ರಾಜ್ಯದ ನಾಗರೀಕರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗಳ ಸಮೀಕ್ಷೆ ಮರುಕಾರ್ಯ ನಿರ್ವಹಿಸಲು ಶಿಕ್ಷಕರು ಹಿಂದೇಟು ಹಾಕಿ ಅಸಮಾಧಾನ ಹೊರ ಹಾಕುವ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಕೆ ಮಾಡಿದರು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಸಮಿತಿಯ ನೇತೃತ್ವದಲ್ಲಿನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಜಮಾಯಿಸಿದ ಶಿಕ್ಷಕರು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿಯನ್ನು ಸಲ್ಲಿಕೆ ಮಾಡಿದರು.
ಕರ್ನಾಟಕ ರಾಜ್ಯದ ನಾಗರೀಕರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗಳ ಸಮೀಕ್ಷೆ ಕಾರ್ಯ ದಿನಾಂಕ ೨೨.೦೯.೨೦೨೫ ರಿಂದ ೦೭.೧೦.೨೦೨೫ಕ್ಕೆ ಅಂತಿಮಗೊಂಡಿದ್ದರೂ ದಿನಾಂಕ ೧೮.೧೦.೨೦೨೫ರ ವರೆಗೆ ವಿಸ್ತರಿಸಲಾಗಿರುತ್ತದೆ. ಆದರೆ ಪ್ರಸ್ತುತ ೦-೬ ವರ್ಷದ ಮಕ್ಕಳ ಸಮೀಕ್ಷೆಯನ್ನು ಮಾಡಬೇಕೆಂದು ಗಣತಿ ಮೇಲ್ವಿಚಾರಕರು ಹೇಳುತ್ತಿರುವುದು ಸರಿಯಷ್ಟೆ, ಸದರಿ ಸಮೀಕ್ಷೆಯನ್ನು ಮಾಡುವಾಗ ಸಾರ್ವಜನಿಕರಿಂದ ಆಗಿರುವ ನಿಂದನೆ, ಅವಮಾನ ಹಲವಾರು ತೊಂದರೆಗಳ ಬಗ್ಗೆ ಮತ್ತು ಮೇಲ್ವಿಚಾರಕರು ನಿಯಮ ಮೀರಿ ಒತ್ತಡ ಹಾಕುತ್ತಿರಿವ ವಿಚಾರವಾಗಿ ಉಲ್ಲೇಖಿತ ಸಭೆಯಲ್ಲಿ ಒಕ್ಕೊರಲಿನಿಂದ ಚರ್ಚಿಸಲಾಗಿ ಮರುಸಮೀಕ್ಷೆ ಕಾರ್ಯವನ್ನು ನಿರ್ವಹಿಸದಿರಲು ತೀರ್ಮಾನಿಸಲಾಗಿದೆ ಕೂಡಲೆ ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಮಾಡಿದರು.
ನಾವುಗಳು ಸರ್ಕಾರದ ಆದೇಶದಂತೆ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗಳ ಸಮೀಕ್ಷೆ ಕಾರ್ಯವನ್ನು ಮಾಡಿರುತ್ತೇವೆ. ಪ್ರಯುಕ್ತ ೧೩.೧೦.೨೦೨೫ ರಿಂದ ಸಮೀಕ್ಷೆ ಮರುಕಾರ್ಯನ್ನು ನಿರ್ವಹಿಸುವುದಿಲ್ಲ ಎಂಬ ಅಂಶವನ್ನು ತಮ್ಮ ಗಮನಕ್ಕೆ ತರಬಯಸುತ್ತೇವೆ. ಸಮೀಕ್ಷೆದಾರರ ಮತ್ತು ಸಂಘದ ಮನವಿಗೆ ತಾವುಗಳು ಸಕಾರಾತ್ಮಕವಾಗಿ ಸ್ಪಂದಿಸಬೇಕೆಂದು ದಾವಣಗೆರೆ ಜಿಲ್ಲೆಯ ಸಮಸ್ತ ಸರ್ಕಾರಿ ನೌಕರರ ಮನವಿ ಮೂಲಕ ಕೋರಿದರು. ಈ ಸಂಧರ್ಭದಲ್ಲಿ ಜಿಲ್ಲಾಧ್ಯಕ್ಷ ವಿರೇಶ್ ಎಸ್ ಒಡೇಯನಪುರ ಸೇರಿದಂತೆ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಶಿಕ್ಷಕರು ಹಾಗೂ ಸಿಬ್ಬಂದಿಗಳು ಇದ್ದರು.

























