
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಜ.18: ರಂಗ ಜಂಗಮ ಸಂಸ್ಥೆ ಡಿ. ಕಗ್ಗಲ್ ಮತ್ತು ನಗರದ ಆಲಾಪ್ ಸಂಗೀತ ಕಲಾ ಟ್ರಸ್ಟ್ ಸಹಯೋಗದಲ್ಲಿ ಇಲ್ಲಿನ ಜೋಳದ ರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಹಮ್ಮಿಕೊಂಡಿರುವ ಎರೆಡು ದಿನಗಳ ಸಂಕ್ರಾಂತಿ ರಂಗೋತ್ಸವಕ್ಕೆ ನಿನ್ನೆ ಸಂಜೆ ಹಿರಿಯ ಲೆಕ್ಕ ಪರಿಶೋಧಕ ಸಿರಿಗೇರಿ ಪನ್ನರಾಜ್ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು, ಅಹಿಂಸೆ ಮೂಲಕ ವ್ಯವಸ್ಥೆಯನ್ನು ಸರಿಪಡಿಸಲು ಸಾಧ್ಯ ಎಂದು ನಾವೆಲ್ಲರೂ ಕಂಡು ಕೊಳ್ಳಬೇಕಾಗಿದೆ..ಗಾಂಧಿ ಅಹಿಂಸೆಯ ಮೂಲಕ ದೇಶದ ಸ್ವತಂತ್ರಕ್ಕೆ ಮತ್ತು ಪ್ರತಿ ಹಳ್ಳಿಯ ಸಮಾಜದಲ್ಲಿನ ಸಮಾನತೆಯ ಪರವಾಗಿ ಯೋಚಿಸುವಂತೆ ಮಾಡುವ ವ್ಯಕ್ತಿತ್ವವನ್ನು ಹೊಂದಿದ್ದರು ಅಂತಹ ಗಾಂಧಿ ಪ್ರಸ್ತುತ ವರ್ತಮಾನಕ್ಕೆ ಪುನಃ ಬಂದರು ತಪ್ಪಿಲ್ಲ ಹಾಗೆ ಗಾಂಧಿಯ ತತ್ವ ವಿಚಾರಗಳು ವಿಶ್ವವಿದ್ಯಾಲಯಗಳಿಗೆ ಮತ್ತು ಪದವಿ ವಿದ್ಯಾರ್ಥಿಗಳಿಗೆ ಪಠ್ಯಗಳಾಗಿ ರೂಪಗೊಂಡಾಗ ಯುವಜನತೆ ಅದರ ಕಡೆ ಗಮನ ಹರಿಸಲು ಸಾಧ್ಯವಾಗುತ್ತದೆ ಎಂದರು.
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕೆ. ಶಿವಲಿಂಗಪ್ಪ ಹಂದ್ಯಾಳ್ ಅವರಿಗೆ ಗೌರವ ಸನ್ಮಾನ ನಡೆಯಿತು. ಸನ್ಮಾನಿತರಾಗಿ ಮಾತನಾಡಿದ ಅವರು ದೇಶದ ಸ್ವಾತಂತ್ರ್ಯಕ್ಕೆ ಅಷ್ಟೇ ಅಲ್ಲದೆ ಸಮಾಜದಲ್ಲಿನ ಅಸಮಾನತೆಯ ವಿರುದ್ಧ ಕೂಡ ಧ್ವನಿ ಎತ್ತಿದವರು ಗಾಂಧೀಜಿ ಎಂದರು.
ಕಾರ್ಯಕ್ರಮದಲ್ಲಿ ರಂಗನಟ ವಿ ರಾಮಚಂದ್ರಪ್ಪ, ಎನ್ ಪ್ರಕಾಶ್ ಗೌರವ ಕಾರ್ಯದರ್ಶಿಗಳು ರಾಘವ ಮೆಮೋರಿಯಲ್ ಅಸೋಸಿಯೇಷನ್, ಚೇಂಬರ್ ಆಫ್ ಕಾಮರ್ಸ್ ಹಿರಿಯ ಉಪಾಧ್ಯಕ್ಷ ಸಂಗನಕಲ್ಲು ದೊಡ್ಡನಗೌಡ ಇನ್ನಿತರರು ಇದ್ದರು.
ಈ ವೇಳೆ ಕರ್ನಾಟಕ ಬಯಲಾಟ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕಂಪ್ಲಿ ಈರಣ್ಣ ಅವರನ್ನು ಕೂಡ ಸನ್ಮಾನಿಸಲಾಯಿತು, ಪ್ರಾರ್ಥನೆಯನ್ನು ಗೋವರ್ಧನ್ ರೆಡ್ಡಿ ಗೆಣಿಕಿಹಾಳ್, ಸ್ವಾಗತವನ್ನು ಆಲಾಪ್ ಸಂಗೀತ ಕಲಾ ಟ್ರಸ್ಟ್ ಅಧ್ಯಕ್ಷ ರಮಣಪ್ಪ ಭಜಂತ್ರಿ ಹಾಗೂ ಕಾರ್ಯಕ್ರಮದ ನಿರೂಪಣೆ ಯನ್ನು ಆಲಂಭಾಷ ಅವರು ನೆರವೇರಿಸಿದರು.
ನಂತರಸಾಂಸ್ಕೃತಿಕ ಕಾರ್ಯಕ್ರಮಗಳಾದ ತಾಂಡವ ನೃತ್ಯ ವಿನೋದ್ ಮತ್ತು ತಂಡದವರು, ಜಾನಪದ ನೃತ್ಯ ಪ್ರದರ್ಶನ ಮಾಡಿದರು. ಶಿವಮೊಗ್ಗ ರಂಗಾಯಣದಿಂದ “ನಮ್ಮೊಳಗೊಬ್ಬ ಗಾಂಧಿ” ನಾಟಕ ಪ್ರದರ್ಶನ ನಡೆಯಿತು.























