ಸಮಾಜದಲ್ಲಿ ಕಟ್ಟಕಡೆಯ ವ್ಯಕ್ತಿಗೂ ಶಿಕ್ಷಣ ಸಿಗಬೇಕು ಶಾಸಕ ಮಂಜುನಾಥ್

ಸಂಜೆವಾಣಿ ವಾರ್ತೆ
ಹನೂರು.ಜ.18:-
ಸಮಾಜದಲ್ಲಿ ಕಟ್ಟಕಡೆಯ ವ್ಯಕ್ತಿಗೂ ಶಿಕ್ಷಣ ಸಿಗಬೇಕು ಎಂಬ ಉದ್ದೇಶದಿಂದ ಸರ್ಕಾರ ವಸತಿ ಶಾಲೆಗಳನ್ನ ತೆರೆದು ಬಡ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಹೆಚ್ಚಿನ ಒತ್ತು ನೀಡುತ್ತದೆ. ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಾಸಕ ಎಂ.ಆರ್ ಮಂಜುನಾಥ್ ಅವರು ತಿಳಿಸಿದರು.


ತಾಲೂಕಿನ ಶಾಗ್ಯ ಗ್ರಾಮ ಪಂಚಾಯತ್ ವ್ಯಾಪ್ತಿಯ ಗಾಣಿ ಮಂಗಲ ಗ್ರಾಮದಲ್ಲಿ ನಿರ್ಮಿಸಲಾಗಿರುವ ಮಹರ್ಷಿ ವಾಲ್ಮೀಕಿ ಆದಿವಾಸಿ ಬುಡಕಟ್ಟು ವಸತಿ ಶಾಲೆಯ ನೂತನ ಕಟ್ಟಡ ಉದ್ಘಾಟನಾ ಸಮಾರಂಭ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಆದಿ ಕವಿ ಮಹರ್ಷಿ ವಾಲ್ಮೀಕಿ, ಡಾಕ್ಟರ್ ಬಿ.ಆರ್ ಅಂಬೇಡ್ಕರ್ ಹಾಗೂ ಭಗವಾನ್ ಬಿರ್ಸಾ ಮುಂಡ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಗೌರವಿಸಿದರು. ನಂತರ ಮಾತನಾಡಿದರು.


ಗಾಣಿ ಗಮಂಗಲ ಗ್ರಾಮಕ್ಕೆ ಇಂದು ಸಂಕ್ರಾಂತಿ ಹಬ್ಬ ಆಚರಿಸಿದಂತಹ ಕ್ಷಣದಂತಹ ವಾತಾವರಣ ಸೃಷ್ಟಿಯಾಗಿದೆ.
ಗ್ರಾಮದಲ್ಲಿ ಆಶ್ರಮ ಶಾಲೆಯನ್ನು ನಿರ್ಮಿಸಿ ಇಲ್ಲಿನ ಮಕ್ಕಳ ಶಿಕ್ಷಣಕ್ಕಾಗಿ ಹೆಚ್ಚಿನ ಒತ್ತು ನೀಡಲಾಗಿದೆ. ಇದು ಇಲ್ಲಿನ ಜನರಿಗೆ ಬಹಳ ಅನುಕೂಲವಾಗಲಿದೆ. ಬುಡಕಟ್ಟು ಜನಾಂಗದ ಪ್ರತಿಯೊಂದು ಗ್ರಾಮಗಳಿಗೂ ಮೂಲಭೂತ ಸೌಕರ್ಯ ಕಲ್ಪಿಸಬೇಕು. ಶಿಕ್ಷಣದಿಂದ ವಂಚಿತರಾಗಬಾರದು ಇಲ್ಲಿನ ವಿದ್ಯಾವಂತರು ತಮ್ಮ ಸಮಾಜದ ಬಗ್ಗೆ ಕಾಳಜಿ ವಹಿಸಬೇಕು ಅವರ ಬಗ್ಗೆ ಜಾಗೃತಿ ವಹಿಸಿ ಅರಿತು ದಾರಿ ತಪ್ಪುವವರ ಬಗ್ಗೆ ಗಮನಹರಿಸಿ ಉತ್ತಮ ದಾರಿಗೆ ತರಬೇಕು.


30 ಪರ್ಸೆಂಟ್ ಅಷ್ಟೇ ಬೆಳಕಿಗೆ ಬಂದಿದ್ದಾರೆ ಇನ್ನು 70 ಪರ್ಸೆಂಟ್ ಬೆಳಕಿಗೆ ಬಂದಿಲ್ಲ ಇನ್ನು ನೂರರಷ್ಟು ಶಿಕ್ಷಣ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಸಮುದಾಯದ ಅಭಿವೃದ್ಧಿಗಾಗಿ ಸರ್ಕಾರ ಜನಪ್ರತಿನಿಧಿಗಳಿಗೆ ನಿಮ್ಮ ಸಹಕಾರ ಮುಖ್ಯವಾಗಿದೆ. ಮಕ್ಕಳಲ್ಲಿರುವ ಶಿಕ್ಷಣ ಜೊತೆಗೆ ಕ್ರೀಡಾ ಚಟುವಟಿಕೆಯನ್ನು ಗುರುತಿಸಿ ಮುಖ್ಯ ವಾಹನಿಗೆ ಬರಲು ಅವಕಾಶ ಕಲ್ಪಿಸಬೇಕು. ಪ್ರತಿಯೊಬ್ಬ ವಿದ್ಯಾರ್ಥಿಗೂ ವಿದ್ಯಾರ್ಹತೆಗೆ ತಕ್ಕಂತೆ ಉದ್ಯೋಗ ಸಿಗಬೇಕು ಇದು ಬಹಳ ಅತ್ಯಮೂಲ್ಯವಾಗಿದೆ.


ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಬಿ.ಎಸ್.ಎನ್.ಎಲ್ ಸಂಸ್ಥೆಯವರು ಸ್ಯಾಟಲೈಟ್ ಮೂಲಕ ದೂರವಾಣಿ ಸಂಪರ್ಕ ಸಿಕ್ಕಿರುವುದು ಶ್ಲಾಘನೀಯ ಇದರಿಂದ ಕಾಡಂಚಿನ ಗ್ರಾಮಗಳಿಗೆ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ದೂರವಾಣಿ ಮೂಲಕ ತಮ್ಮ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡು ಕೊಳ್ಳಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ ಬಿಂಧ್ಯಾ ಅವರು ಮಾತನಾಡಿ ಗಾಣಿ ಗಮಂಗಲದಲ್ಲಿ ಆಶ್ರಮ ಶಾಲೆ 1958 ರಲ್ಲಿ ಚಿಕ್ಕ ಗುಡಿಸಿಲಿನಲ್ಲಿ ತೆರೆಯಲಾಗಿತ್ತು. ನಂತರ 1969 ರಲ್ಲಿ ಹಂಚಿನ ಮನೆಯಲ್ಲಿ ಒಂದರಿಂದ ನಾಲ್ಕನೇ ತರಗತಿಯವರೆಗೆ 35 ಮಕ್ಕಳಿಗೆ ವಿದ್ಯಾಭ್ಯಾಸ ನೀಡುತ್ತಾ ಬಂದಿತು. ಅದಾದ ನಂತರ ಸರ್ಕಾರ ಜನಪ್ರತಿನಿಧಿಗಳ ಹಾಗೂ ಸಮುದಾಯದ ಸಂಘಟನೆ ಸಾಹಕಾರದಿಂದ ಇಲ್ಲಿಯ ತನಕ ಬೆಳೆದು ಬಂದಿದೆ.


ಇಲ್ಲಿನ ವಸತಿ ಶಾಲೆಯ ನೂತನ ಕಟ್ಟಡಕ್ಕೆ 3.82 ಕೋಟಿ ರೂ. ವೆಚ್ಚದಲ್ಲಿ ಶಾಸಕ ಎಂ.ಆರ್ ಮಂಜುನಾಥ್ ಅವರು ಶಂಕುಸ್ಥಾಪನೆಯನ್ನು ಮಾಡಿ ನಂತರ 23 ತಿಂಗಳ ಅವಧಿಯಲ್ಲಿ ಸುಸ್ಸಜ್ಜಿತ ಉತ್ತಮ ಕಟ್ಟಡವನ್ನು ಪೂರ್ಣಗೊಳಿಸಿ ಇಂದು ಇಲ್ಲಿನ ಮಕ್ಕಳಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಶಾಸಕರು ತುಂಬಾ ಸಹಕಾರ ನೀಡಿದ್ದಾರೆ. ಆದಿವಾಸಿ ಬುಡಕಟ್ಟು ಜನಾಂಗ ಶಿಕ್ಷಣದಿಂದ ವಂಚಿತರಾಗದೆ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ಕೊಡಿಸಬೇಕು ಎಂದು ತಿಳಿಸಿದರು.


ಗ್ರಾಮದ ಚಂದನ ಎಂಬ ಪದವಿಧರೆ ಯುವತಿ ಮಾತನಾಡುತ್ತಾ ಗ್ರಾಮಕ್ಕೆ ಉತ್ತಮ ರಸ್ತೆ ಸಂಪರ್ಕ ಹಾಗೂ ನಿಗದಿತ ಸಮಯಕ್ಕೆ ಸಾರಿಗೆ ಬಸ್ ವ್ಯವಸ್ಥೆ ಮಾಡಿಕೊಡಬೇಕು. ಎಂದರು ಹಾಗೂ ಮನೆಮನೆಗೂ ಜೆ.ಜೆ.ಎಂ ಇಲಾಖೆಯು ಕುಡಿಯುವ ನೀರಿನ ಸಂಪರ್ಕ ಕಲ್ಪಿಸಿದರು ಇದುವರೆಗೂ ನೀರು ಬರುತ್ತಿಲ್ಲ. ತುರ್ತು ಪರಿಸ್ಥಿತಿಯಲ್ಲಿ ಆಂಬುಲೆನ್ಸ್ ಸೇವೆಯು ಸಿಗುತ್ತಿಲ್ಲ. ನಮ್ಮ ಸಮುದಾಯದ ಮಕ್ಕಳು ಶಿಕ್ಷಣಕ್ಕೆ ಅಗತ್ಯ ಸೌಲಭ್ಯಗಳನ್ನು ನೀಡಬೇಕು ಎಂದು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು ಸಮಸ್ಯೆಗಳನ್ನು ಅಂತಹ ಹಂತವಾಗಿ ಬಗೆಹರಿಸಿ ಸಮುದಾಯದ ಅಭಿವೃದ್ದಿಗೆ ನನ್ನ ಸಹಕಾರ ಸಂಪೂರ್ಣವಾಗಿ ಇರುತ್ತದೆ ಎಂದು ತಿಳಿಸಿದರು.


ವೇದಿಕೆ ಕಾರ್ಯಕ್ರಮದಲ್ಲಿ ಗ್ರಾಮದ ವಸತಿ ಶಾಲೆಯ ನಿರ್ಮಾಣಕ್ಕೆ ಗ್ರಾಮದ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಅನುಕೂಲ ಸಿಗಲಿ ಎಂಬ ಉದ್ದೇಶದಿಂದ ಜಮೀನನ್ನು ದಾನ ಮಾಡಿದ ದೊಡ್ಡೇಗೌಡ ಅವರ ಮಗ ಶಿವಮೂರ್ತಪ್ಪ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು. ಸೋಲಿಗ ಮುಖಂಡ ಕರಿಯಪ್ಪ ನೇತೃತ್ವದ ಕಲಾತಂಡದವರಿಗೆ ಸನ್ಮಾನಿಸಿ ಗೌರವಿಸಲಾಯಿತು ಹಾಗೂ ಶಾಲೆಗೆ ತಪ್ಪದೆ ಹಾಜರಾದ ಒಂದನೇ ತರಗತಿಯ ಅಭಿ ಮತ್ತು ಏಳನೇ ತರಗತಿಯ ತುಳಸಮ್ಮ ಎಂಬ ಮಕ್ಕಳಿಗೆ ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.


ಕಾರ್ಯಕ್ರಮಕ್ಕೂ ಮೊದಲು ಗ್ರಾಮದ ಜಡೇಸ್ವಾಮಿ ದೇವಸ್ಥಾನದ ಅಭಿವೃದ್ಧಿ ಕಾಮಗಾರಿಗೆ ಶಾಸಕ ಮಂಜುನಾಥ್ ಅವರು ಭೂಮಿ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಬೆಂಗಳೂರು ಕಾರ್ಯಪಾಲಕ ಅಭಿಯಂತರರು ಪಂಪಾಪತಿ, ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ರಾಜೇಶ್, ಸಹಾಯಕ ಕಾರ್ಯಪಾಲಕ ಅಭಿಯಂತರರು ತನುಜ್ ಕುಮಾರ್ ಕೆ ಎಸ್, ಬಿ.ಎಸ್.ಎನ್.ಎಲ್ ಅಧಿಕಾರಿ ಶರತ್ ಕುಮಾರ್, ಶ್ರೀನಿವಾಸ್, ಗ್ರಾಮ ಪಂ. ಪಿ.ಡಿ.ಒ ಸಿದ್ದಪ್ಪ, ಅಧ್ಯಕ್ಷ ರಂಗಮ್ಮ, ಉಪಾಧ್ಯಕ್ಷ ಮಾದೇವಮ್ಮ ಡಾ. ಪ್ರಕಾಶ್, ಜಿಲ್ಲಾ ಸೋಲಿಗ ಅಭಿವೃದ್ಧಿ ಸಂಘದ ಅಧ್ಯಕ್ಷ ಮಾದೇಗೌಡ, ತಾಲೂಕು ಅಧ್ಯಕ್ಷ ದೊಡ್ಡ ಸಿದ್ದಯ್ಯ, ಮುಖಂಡರು ಕರಿಯಪ್ಪ, ಮುತ್ತಯ್ಯ, ರಾಚಪ್ಪ, ಈರಯ್ಯ, ಶಿಕ್ಷಕ ವೆಂಕಟಚಲ, ನಾಗರಾಜು, ಮಹದೇವಸ್ವಾಮಿ ಸೇರಿದಂತೆ ಇನ್ನಿತರರು ಇದ್ದರು.