ಸಮವಸ್ತ್ರದ ಪಥಸಂಚಲನದಿಂದ ಸಮಾನತೆ ಅಸಾಧ್ಯ:ಜಯನ್ ಮಲ್ಪೆ

ಮಲ್ಪೆ: ಮನಸ್ಸೆಲ್ಲ ವಿಕಾರ,ದೇಹದಲ್ಲಿ ಶಿಸ್ತಿನ ಸಿಪಾಯಿಗಳಂತೆ ಸಮವಸ್ತ್ರ ಧರಿಸಿ ಬೀದಿಬೀದಿಗಳಲ್ಲಿ ಪಥ ಸಂಚಲನ ನಡೆಸಿದರೆ ದೇಶದಲ್ಲಿ ಸಮಾನತೆ ಮೂಡಿಸಲು ಅಸಾಧ್ಯವೆಂದು ದಲಿತ ಚಿಂತಕ ಹಾಗೂ ಜನಪರ ಹೋರಾಟಗಾರ ಜಯನ್ ಮಲ್ಪೆ ಹೇಳಿದ್ದಾರೆ.
ಅವರು ಶನಿವಾರ ಮಲ್ಪೆಯಲ್ಲಿ ಅಂಬೇಡ್ಕರ್ ಯುವಸೇನೆ ಆಯೋಜಿಸಿದ ಅಂಬೇಡ್ಕರ್ ಪರಿಬ್ಬಾಣದ ಪ್ರಯುಕ್ತ ಅಂಬೇಡ್ಕರ್ ಕಡೆಗೆ ನಮ್ಮ ನಡಿಗೆ ಎಂಬ ಕ್ಯಾಂಡಲ್ ಮೆರವಣಿಗೆಯನ್ನು ಉದ್ದೇಶಿಸಿ ಮಾತನಾಡುತ್ತಾ,
ಈ ದೇಶದಲ್ಲಿ ಸಮಾನತೆಯನ್ನು ಒಪ್ಪದ ಮಾನಸಿಕ ವಿಕಾರಿಗಳಾದ ಆರ್‌ಎಸ್‌ಎಸ್ ಶಿಸ್ತಿನ ಹೆಸರಿನಲ್ಲಿ ಜೀವ ವಿರೋಧಿ ಕೆಲಸಮಾಡುತ್ತಾ ದಲಿತರನ್ನು ಮತ್ತು ಹಿಂದುಳಿದವರನ್ನು ಬ್ರೈನ್ ವಾಸ್ ಮಾಡಲು ಬೈಠಕ್‌ಗಳನ್ನು ನಡೆಸುತ್ತದೆ.ಶಿಸ್ತಿನ ಹೆಸರಿನಲ್ಲಿ ಯಾರೋ ಹಾಕಿದ ಗೆರೆಯನ್ನು ದಾಟದೆ ಹೋಗುವ ಅಮಾಯಕರನ್ನು ಧರ್ಮದ ಹೆಸರಿನಲ್ಲಿ ಜೈಲಿಗೆ ತಳುತ್ತಿದ್ದಾರೆ ಎಂದರು.
ಕಾರಂತ ಟ್ರಸ್ಟ್ನ ಅಧ್ಯಕ್ಷ ಡಾ.ಗಣನಾಥ ಎಕ್ಕಾರು ಮಾತನಾಡಿ ಜಾಗತೀಕರಣ,ಉದಾರೀಕರಣ ಮತ್ತು ಖಾಸಗೀಕರಣದಿಂದ ಅಸಮಾನತೆ ಹೆಚ್ಚಾಗಿದ್ದು,ಶಿಕಣವನ್ನು ಇಂದು ವ್ಯಾಪಾರಿಕಾರೀಕರಣ ಮಾಡಲಾಗುತ್ತಿದೆ. ಜೊತೆಗೆ ಶಿಕಣದ ಹಕ್ಕನ್ನು ಕಸಿದುಕೊಂಡು ಸರಕಾರಿ ಶಾಲೆಯನ್ನು ಮುಚ್ಚುವ ಹಂತಕ್ಕೆ ಬಂದಿದ್ದಾರೆ,ಅಂಬೇಡ್ಕರ್‌ರವರ ಚಿಂತನೆಯನ್ನು ಮೈಗೂಡಿಸಿ ಹೋರಾಡದಿದ್ದರೆ ದಲಿತರು,ಹಿಂದುಳಿದ ವರ್ಗದವರು ಮತ್ತು ಅಲ್ಪಸಂಖ್ಯಾತರು ಮುಖ್ಯವಾಹಿನಿಗೆ ಬರಲಾರರು ಎಂದರು.
ದಲಿತ ಹಕ್ಕುಗಳ ಹೋರಾಟ ಸಮಿತಿಯ ಉಡುಪಿ ಜಿಲ್ಲಾಧ್ಯಕ್ಷ ಸಂಜೀವ ಬಳ್ಕೂರು ಮಾತನಾಡಿ ಕೇಂದ್ರ ಮತ್ತು ರಾಜ್ಯ ಸರಕಾರ ದಲಿತರಿಗೆ ಮೀಸಲಾತಿಯಲ್ಲಿ ಅನ್ಯಾಯಮಾಡುತ್ತಿದೆ.ದಲಿತ ಚಳುವಳಿ ಖಾಸಾಗಿ ಕ್ಷೇತ್ರದಲ್ಲಿ ಮೀಸಲಾತಿಗಾಗಿ ಹೋರಾಟನಡೆಸಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಯುವಸೇನೆಯ ಜಿಲ್ಲಾಧ್ಯಕ್ಷ ಗಣೇಶ್ ನೆರ್ಗಿ,ರಮೇಶ್ ಕಾಂಚನ್,ಮಹಾಬಲ ಕುಂದರ್,ಸತೀಶ್ ನಾಯ್ಕ,ರಮೇಶ್ ತಿಂಗಳಾಯ,ವೆಂಕಟೇಶ್ ಕುಲಾಲ್,ಮಂಜುನಾಥ,ಶರತ್ ಶೆಟ್ಟಿ,ಮೀನಾಕ್ಷಿ ಮಾಧವ,ಉಷಾ,ಸತೀಶ್ ಮಂಚಿ,ಮಾಧವ ಬನ್ನಂಜೆ ,ಸತೀಶ್ ಕೊಡವೂರು, ಸುಧಾರ್ಶನ್ ಪಡುಕರೆ,ಯಾದವ ಅಮೀನ್ ಕೊಳ,ಹರೀಶ್ ಸಲ್ಯಾನ್, ಸಂತೋಷ್ ಕಪ್ಪೆಟ್ಟು,ರವಿರಾಜ್ ಲಕ್ಮೀನಗರ,ದಯಾಕರ ಮಲ್ಪೆ,ಸಾಧು ಚಿಟ್ಪಾಡಿ,ಕೃಷ್ಣಶ್ರೀಯಾನ್,ಸುಮಿತ್ ನೆರ್ಗಿ,ಗುಣವಂತ ತೋಟ್ಟಂ,ಭಗವಾನ್, ವಿನಯ ಬಲರಾಮನಗರ,ಸತೀಸ್ ಕಪ್ಪೆಟ್ಟು,ದೀಪಕ್,ಸಂದ್ಯಾಕೃಷ್ಣ,ಪೂರ್ಣಿಮ ಸಂದ್ಯಾತಿಲಕ್,ಪ್ರಮೀಳ,ಶಶಿಕಲಾ ತೊಟ್ಟಂ,ವಿನಯ ಕೊಡಂಕೂರು,ವಿನೋದ ಮುಂತಾದವರು ಭಾಗವಹಿಸಿದ್ದರು.
ವಿದ್ಯಾರ್ಥಿಗಳಿಗೆ ಮಾದಕ ವಸ್ತು ಮಾರಾಟ: ೫ ಮಂದಿ ಅಪರಾಧಿಗಳಿಗೆ ಮಂಗಳೂರು: ವಿದ್ಯಾರ್ಥಿಗಳನ್ನು ಗುರಿಯಾಗಿಸಿ ಮಾದಕ ವಸ್ತು (ಒಆಒಂ) ಮಾರಾಟಕ್ಕೆ ಯತ್ನಿಸುತ್ತಿದ್ದ ಐವರು ಆರೋಪಿಗಳಿಗೆ ಮಂಗಳೂರಿನ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಕಠಿಣ ಜೈಲು ಶಿಕ್ಷೆ ಹಾಗೂ ಭಾರಿ ದಂಡ ವಿಧಿಸಿ ಮಹತ್ವದ ತೀರ್ಪು ಪ್ರಕಟಿಸಿದೆ.
ಪ್ರಕರಣದ ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ನ್ಯಾಯಾಧೀಶರ (Pಆಎ) ನ್ಯಾಯಾಲಯವು, ಐವರು ಆರೋಪಿಗಳು ಎನ್‌ಡಿಪಿಎಸ್ ಕಾಯ್ದೆಗಳ ಅಡಿಯಲ್ಲಿ ತಪ್ಪಿತಸ್ಥರೆಂದು ಘೋಷಿಸಿ ಶಿಕ್ಷೆ ವಿಧಿಸಿದೆ.
ಪ್ರಕರಣದ ಹಿನ್ನೆಲೆ: ದಿನಾಂಕ ೧೪-೦೬-೨೦೨೨ ರಂದು, ಮಂಗಳೂರು ಸಿಸಿಬಿ (ಅಅಃ) ಪೊಲೀಸ್ ಇನ್ಸ್‌ಪೆಕ್ಟರ್ ಮತ್ತು ತಂಡವು ನಡೆಸಿದ ಕಾರ್ಯಾಚರಣೆಯಲ್ಲಿ ಮಾದಕ ವಸ್ತು ಸಾಗಿಸುತ್ತಿದ್ದ ಆರೋಪಿಗಳನ್ನು ಬಂಧಿಸಿದ್ದರು. ಬಂಧಿತರಿಂದ ಒಟ್ಟು ೧೨೫ ಗ್ರಾಂ ಎಂಡಿಎಂಎ (ಒಆಒಂ) ಮಾದಕ ವಸ್ತುವನ್ನು ಜಪ್ತಿ ಮಾಡಲಾಗಿತ್ತು. ಈ ಸಂಬಂಧ ಸಿಇಎನ್ (ಅಇಓ) ಅಪರಾಧ ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್ ಕಾಯ್ದೆಯ ಸೆಕ್ಷನ್‌ಗಳಾದ ೨೧, ೨೧(ಸಿ), ಮತ್ತು ೨೭(ಬಿ) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಪೂರ್ಣಗೊಂಡ ಬಳಿಕ ಸಿಇಎನ್ ಇನ್ಸ್‌ಪೆಕ್ಟರ್ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು.
ಎನ್‌ಡಿಪಿಎಸ್ ವಿಶೇಷ ನ್ಯಾಯಾಲಯದ ಸರ್ಕಾರಿ ಅಭಿಯೋಜಕಿ ಶ್ರೀಮತಿ ಜುಡಿತ್ ಅವರು ಪ್ರಾಸಿಕ್ಯೂಷನ್ ಪರವಾಗಿ ವಾದ ಮಂಡಿಸಿದ್ದರು. ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು ಐವರು ಆರೋಪಿಗಳಿಗೆ ಈ ಕೆಳಗಿನಂತೆ ಶಿಕ್ಷೆ ವಿಧಿಸಿದೆ:
೧. ಲುವಾಲ್ ಡೇನಿಯಲ್ ಜಸ್ಟಿನ್ ಬೌಲೊ ಅಲಿಯಾಸ್ ಡ್ಯಾನಿ ಮತ್ತು ೩. ಮೊಹಿದ್ದೀನ್ ರಶೀದ್ ಅವರಿಗೆ ಎನ್‌ಡಿಪಿಎಸ್ ಕಲಂ ೨೧(ಸಿ) ಅಡಿಯಲ್ಲಿ ತಲಾ ೧೨ ವರ್ಷಗಳ ಕಠಿಣ ಕಾರಾಗೃಹ ಹಾಗೂ ತಲಾ ರೂ. ೧,೨೫,೦೦೦ ದಂಡ ವಿಧಿಸಲಾಗಿದೆ.
. ಸಬಿತಾ ಅಲಿಯಾಸ್ ಚಿಂಚು ಅವರಿಗೆ ಕಲಂ ೨೧(ಸಿ) ಅಡಿಯಲ್ಲಿ ೧೨ ವರ್ಷಗಳ ಕಠಿಣ ಕಾರಾಗೃಹ ಮತ್ತು ರೂ. ೧,೨೫,೦೦೦ ದಂಡ ವಿಧಿಸಲಾಗಿದೆ.
೪. ಅಬ್ದುಲ್ ರವೂಫ್ ಅಲಿಯಾಸ್ ಟಫ್ ರವೂಫ್ ಅವರಿಗೆ ಕಲಂ ೨೧(ಸಿ) ಅಡಿಯಲ್ಲಿ ೧೩ ವರ್ಷಗಳ ಕಠಿಣ ಕಾರಾಗೃಹ ಮತ್ತು ರೂ. ೧,೩೫,೦೦೦ ದಂಡ ವಿಧಿಸಲಾಗಿದೆ.
೨. ಮೊಹಮ್ಮದ್ ರಮೀಜ್ ಅವರಿಗೆ ಕಲಂ ೨೧(ಸಿ) ಅಡಿಯಲ್ಲಿ ಗರಿಷ್ಠ ೧೪ ವರ್ಷಗಳ ಕಠಿಣ ಕಾರಾಗೃಹ ಮತ್ತು ರೂ. ೧,೪೫,೦೦೦ ದಂಡ ವಿಧಿಸಲಾಗಿದೆ.
ಕಲಂ ೨೭(ಬಿ) ಅಡಿಯಲ್ಲಿ ಶಿಕ್ಷೆ:
ಮೇಲಿನ ಐವರು ಆರೋಪಿಗಳಿಗೂ ಎನ್‌ಡಿಪಿಎಸ್ ಕಾಯ್ದೆಯ ಕಲಂ ೨೭(ಬಿ) ಅಡಿಯಲ್ಲಿ ಹೆಚ್ಚುವರಿಯಾಗಿ ತಲಾ ೦೬ ತಿಂಗಳ ಕಠಿಣ ಕಾರಾಗೃಹ ಮತ್ತು ತಲಾ ರೂ. ೧೦,೦೦೦ ದಂಡ ವಿಧಿಸಿ ನ್ಯಾಯಾಲಯವು ಆದೇಶ ಹೊರಡಿಸಿದೆ.