ಸಮಾರೋಪ ಸಮಾರಂಭ


ಬಾಗಲಕೋಟೆ,ಡಿ.೧: ಜನಪದ ಸಾಹಿತ್ಯ ಜನರ ಬದುಕಿನ ನಿಜ ಚಿತ್ರ,ಹಳ್ಳಿಗಳ ಕೂಗು ನಗು ನೋವು ಎಲ್ಲವೂ ಗಾದೆ ನುಡಿಗಟ್ಟು ಹಾಡಿನ ಮೂಲಕ ಪೀಳಿಗೆಯಿಂದ ಪೀಳಿಗೆಗೆ ಸಾಗುತ್ತಿದೆ,ಯುವಕರ ನವಚೇತನಕ್ಕೆ ಜನಪದವು ಸ್ಪರ್ಶವೆಂದು ಹಿರಿಯ ಬಯಲಾಟ ಕಲಾವಿದ ಮಲ್ಲಪ್ಪ ಗಣಿ ಹೇಳಿದರು,


ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ನಾವಲಗಿ ಗ್ರಾಮದ ಶ್ರೀ ನೀಲಕಂಠೇಶ್ವರ ಮಠದಲ್ಲಿ ಜರುಗಿದ ಕೆಪಿಎಸ್ ಪಿಯುಸಿ ಕಾಲೇಜು ವಿಭಾಗದ ವತಿಯಿಂದ ಜರುಗಿದ ಎನ್ ಎಸ್ ಎಸ್ ಶಿಬಿರದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಜನಪದ ಸಾಹಿತ್ಯದ ಕುರಿತು ಉಪನ್ಯಾಸ ನೀಡಿದರು,ಯುವಕರೆ ಜನಪದರ ಜೀವನಾಡಿ, ನಿಮ್ಮ ಮೂಲಕವೆ ಉಳಿಯಬೇಕಾಗಿದೆ, ಸಾಂಸ್ಕöÈತಿಕ ಪರಂಪರೆಯ ಅಧ್ಯಯನ ಮತ್ತು ಅನುಸರಣೆ ರಾಷ್ಟç ನಿರ್ಮಾಣದ ಭಾಗವಾಗಬೇಕು,ಶಿಬಿರಾರ್ಥಿಗಳು ಶಿಭಿರಾವಧಿಯಲ್ಲಿ ಸ್ವಚ್ಚತೆ,ಪರಿಸರ ಸಂರಕ್ಷಣೆ, ಜಾಗೃತಿ ಸಾಂಸ್ಕöÈತಿಕ ಚಟುವಟಿಕೆಗಳು ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಸಮಾಜದೊಂದಿಗೆ ನೇರ ಸಂಪರ್ಕ ಹೆಚ್ಚಿಸಲು ಶಿಬಿರವು ಮಹತ್ವದಾಗಿದೆ ಎಂದರು ಪ್ರಾಚಾರ್ಯ ಶರತ್ಚಂದ್ರ ಜಂಬಗಿ ಮಾತನಾಡಿ ಶಿಬಿರವು ನಾಯಕತ್ವ ಶಿಸ್ತು ಸಮಯ ಪ್ರಜ್ಞೆ ಬೆಳೆಸುವುದರ ಜೊತೆ ಜೊತೆಗೆ ಆರೋಗ್ಯಯುತ ಬದುಕು ಸಾಗಿಸಲು ಸಹಕಾರಿಯಾಗಿದೆ ಎಂದರು.


ಇದೇ ಸಂದರ್ಭದಲ್ಲಿ ಪ್ರಾಚಾರ್ಯ ಶರತ್ಚಂದ್ರ ಜಂಬಗಿ,ಗ್ರಾಪA ಸದಸ್ಯ ದಾನಪ್ಪ ಆಸಂಗಿ, ಉಪಾಧ್ಯಕ್ಷ ಬಸವರಾಜ ಗಣಿ, ಗಂಗಪ್ಪ ಅಮ್ಮಲ್ಲಜೇರಿ, ಈರಪ್ಪ ಕಡಕಬಾವಿ,ಶಿಬಿರಾಧಿಕಾರಿ ಎಂ ಸಿ ನರೇಗಲ್ಲ, ಜಿ ಎಸ್ ಮಾಳಗೆ, ನಿಂಗಪ್ಪ ಬಿದರಿ, ಕಾಡೇಶ ಕಂಪು,ಆಯ್ ಪಿ ಬಾವಲತ್ತಿ, ಶ್ರೀಮತಿ ಶೃತಿ ಹಾರೂಗೇರಿ,ರೋಹಿಣಿ ಪತ್ತಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು,