ಸತ್ತಿದ್ದು ಪತಿ, ಮರಣ ಪತ್ರ ಸಿಕ್ಕಿದ್ದು ಪತ್ನಿಗೆ

ಆಗ್ರಾ, ನ.17-ಅಲಿಗಢ ಜಿಲ್ಲೆಯ ಖೈರ್ ತಹಸಿಲ್ ಪ್ರದೇಶದ ಚಮನ್ ನಗರಿಯ ಗ್ರಾಮದಲ್ಲಿ ಸರ್ಕಾರದ ಆಘಾತಕಾರಿ ನಿರ್ಲಕ್ಷ್ಯದ ಪರಮಾವಧಿ ಪ್ರಕರಣ ಬೆಳಕಿಗೆ ಬಂದಿದೆ. ಇಲ್ಲಿನ ಮಹಿಳೆಯೊಬ್ಬರು ತಮ್ಮ ಮೃತ ಪತಿಯ ಮರಣ ಪ್ರಮಾಣಪತ್ರ ಪಡೆಯಲು ಹೋಗಿ ತಮ್ಮ ಮರಣದ ಪ್ರಮಾಣ ಪತ್ರ ಪಡೆದಿದ್ದಾರೆ.


ಪ್ರಕರಣದ ವಿವರ
ಸರೋಜ್ ದೇವಿ ಎಂಬ 58 ವರ್ಷದ ಮಹಿಳೆ 20 ವರ್ಷಗಳ ಹಿಂದೆ ನಿಧನರಾದ ತಮ್ಮ ಪತಿ ದಿವಂಗತ ಜಗದೀಶ್ ಪ್ರಸಾದ್ ಅವರ ಪ್ರಮಾಣಪತ್ರ ಪಡೆಯಲು ಬ್ಲಾಕ್ ಕಚೇರಿಗೆ ಹೋಗಿದ್ದಾರೆ, ಆದರೆ ಅಧಿಕಾರಿಗಳ ತೀವ್ರ ನಿರ್ಲಕ್ಷ್ಯದಿಂದಾಗಿ, ಅವರಿಗೆ ಪತಿಯ ಪ್ರಮಾಣಪತ್ರವನ್ನು ನೀಡಿದೆ ಜೀವಂತವಾಗಿರುವ ಸರೋಜ್ ದೇವಿಯನ್ನು ಸತ್ತಿದ್ದಾರೆ ಎಂದು ಘೋಷಿಸಿ ಸರೋಜ್ ದೇವಿ ಅವರ ಮರಣ ಪ್ರಮಾಣ ಪತ್ರ ನೀಡಿದ್ದಾರೆ. ಇದರಿಂದಾಗಿ ಅವರ ಕುಟುಂಬದಲ್ಲಿ ಅಲ್ಲೋಲ-ಕಲ್ಲೋಲ ಉಂಟಾಗಿದೆ.


ಈ ಪ್ರಮಾದವನ್ನು ಸರಿಪಡಿಸುವಂತೆ ಬ್ಲಾಕ್ ಕಚೇರಿಯ ಕಾರ್ಯದರ್ಶಿಗೆ ಪದೇ ಪದೇ ವಿನಂತಿಸಿದರೂ ತಮ್ಮ ಮನವಿಗೆ ಸ್ಪಂದಿಸಿಲ್ಲ ಎಂದು ಸರೋಜಾದೇವಿ ಆರೋಪಿಸಿದ್ದಾರೆ. ಈ ತಪ್ಪಿನಿಂದಾಗಿ ಸರೋಜ್ ದೇವಿಯ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್‍ಬುಕ್ ಮತ್ತು ಪಿಂಚಣಿ ನಿರ್ಬಂಧಿಸಲ್ಪಟ್ಟಿದ್ದು, ಕುಟುಂಬದ ಸಂಕಷ್ಟಗಳನ್ನು ಮತ್ತಷ್ಟು ಹೆಚ್ಚಿಸಿದೆ .
ಸರೋಜಾದೇವಿ ಪುತ್ರ ಚಂದ್ರಶೇಖರ ಶರ್ಮಾ, ತಾನು ಮತ್ತು ತನ್ನ ತಾಯಿ ತನ್ನ ತಂದೆಯ ಮರಣ ಪ್ರಮಾಣಪತ್ರವನ್ನು ಪಡೆಯಲು ಹೋಗಿದ್ದೆವು, ಆದರೆ ಅಧಿಕಾರಿಗಳು ತಮ್ಮ ತಂದೆಯ ಮರಣ ಪ್ರಮಾಣಪತ್ರವನ್ನು ನೀಡುವ ಬದಲು ತಮ್ಮ ತಾಯಿಯ ಪ್ರಮಾಣಪತ್ರವನ್ನು ನೀಡಿದ್ದಾರೆ ಎಂದು ಹೇಳಿದ್ದಾರೆ. ನನ್ನ ತಂದೆ 20 ವರ್ಷಗಳ ಹಿಂದೆ ನಿಧನರಾಗಿದ್ದಾರೆ. ನಾವು ಪ್ರಮಾಣಪತ್ರವನ್ನು ಪಡೆಯಲು ಹೋಗಿದ್ದೆವು, ಆದರೆ ಅಧಿಕಾರಿಗಳು ನನ್ನ ತಾಯಿ ಜೀವಂತ ಇರುವಾಗಲೇ ತಾಯಿಗೆ ಮರಣಪ್ರಮಾಣ ಪತ್ರ ನೀಡಿದ್ದಾರೆ ಈಗ, ಬ್ಯಾಂಕ್, ಆಧಾರ್ ಮತ್ತು ಪಿಂಚಣಿ ಸೇವೆಗಳೆಲ್ಲವೂ ಸ್ಥಗಿತಗೊಂಡಿವೆ. ಹಲವು ಬಾರಿ ಕಚೇರಿಗೆ ಅಲೆದಾಡಿದರು ಯಾವುದೇ ವಿಚಾರಣೆ ನಡೆದಿಲ್ಲ ಎಂದು ದೂರಿದ್ದಾರೆ.


ಈ ವಿಷಯದ ಗಂಭೀರತೆಯನ್ನು ಅರಿತು ದೂರಿನ ನಂತರ, ಎಸ್‍ಡಿಎಂ ತಕ್ಷಣ ಕ್ರಮ ಕೈಗೊಂಡಿದೆ ಮತ್ತು ಸರೋಜ್ ದೇವಿಯವರ ಸುಳ್ಳು ಮರಣ ಪ್ರಮಾಣಪತ್ರವನ್ನು ರದ್ದುಗೊಳಿಸಲಾಗಿದೆ. ಪ್ರಾದೇಶಿಕ ಕಾರ್ಯದರ್ಶಿ ಮಧು ಸಕ್ಸೇನಾ ಇದು “ಗುಮಾಸ್ತರ ತಪ್ಪು” ಎಂದು ಸ್ಪಷ್ಟಪಡಿಸಿದ್ದಾರೆ.
ಈ ವಿಷಯ ಗ್ರಾಮದಲ್ಲಿ ಚರ್ಚೆಯ ವಿಷಯವಾಗಿದೆ.